Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಕೋಲ್ಕತ್ತಾ ನೈಟ್ ರೈಡರ್ಸ್‌ಗೆ ಬಲ ತುಂಬಲಿದ್ದಾರೆ ಬ್ರೆಂಡನ್ ಮೆಕಲಮ್

Brendon McCullum set to become Kolkata Knight Riders’ assistant coach

ಕೋಲ್ಕತ್ತಾ, ಆಗಸ್ಟ್ 9: ನ್ಯೂಜಿಲೆಂಡ್ ತಂಡದ ಮಾಜಿ ನಾಯಕ ಬ್ರೆಂಡನ್ ಮೆಕಲಮ್ ಅವರು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಮರಳಲಿದ್ದಾರೆ. ಆದರೆ ಈ ಸಾರಿ ಆಟಗಾರರಾಗಿ ಅಲ್ಲ, ಸಹಾಯಕ ಕೋಚ್‌ ಆಗಿ ಮೆಕಲಮ್ ಕೋಲ್ಕತ್ತಾಕ್ಕೆ ಬಲ ತುಂಬಲಿದ್ದಾರೆ.

ಇಎಸ್‌ಪಿಎನ್ ಕ್ರಿಕ್‌ ಇನ್ಫೋ ವರದಿಯ ಪ್ರಕಾರ, ಇತ್ತೀಚೆಗೆ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿರುವ ಬ್ರೆಂಡನ್ ಮೆಕಲಮ್ ಕೆಕೆಆರ್ ಸಹ ಕೋಚ್‌ ಜೊತೆಗೆ ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಟ್ರಿನ್‌ಬಾಗೋ ನೈಟ್ ರೈಡರ್ಸ್ ಹೆಡ್‌ ಕೋಚ್ ಜವಾಬ್ದಾರಿಯನ್ನೂ ಹೊತ್ತುಕೊಳ್ಳಲಿದ್ದಾರೆ.

ವಿಶೇಷವೆಂದರೆ, ಮೆಕಲಮ್ ಅವರು ಕೆಕೆಆರ್ ಮತ್ತು ಟಿಕೆಆರ್‌ ಎರಡರಲ್ಲೂ ಸೈಮನ್ ಕಟಿಚ್ ಸ್ಥಾನ ಆವರಿಸಿಕೊಳ್ಳಲಿದ್ದಾರೆ. ಕಟಿಚ್ ಅವರು ಕೆಕೆಆರ್‌ನಲ್ಲಿ ಸಹಾಯಕ ಕೋಚ್ ಮತ್ತು ಟಿಕೆಆರ್ ಮುಖ್ಯ ಕೋಚ್ ಆಗಿದ್ದಾರೆ. 2016ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದ ಮೆಕಲಮ್, ಅನಂತರ ವಿದೇಶಿ ಲೀಗ್‌ಗಳಲ್ಲಿ ಮುಂದುವರೆದಿದ್ದರು.

ಬ್ಲ್ಯಾಕ್‌ ಕ್ಯಾಪ್ಸ್ ನಾಯಕತ್ವ ವಹಿಸಿದ್ದ ಮೆಕಲಮ್, ನ್ಯೂಜಿಲೆಂಡ್‌ ಪರ ಟೆಸ್ಟ್ ನಲ್ಲಿ 101 ಪಂದ್ಯಗಳಲ್ಲಿ 6453 ರನ್ ಗಳಿಸಿದ್ದಾರೆ. ಇದರಲ್ಲಿ 302 ಅತ್ಯಧಿಕ ರನ್ ಕೂಡ ಸೇರಿದೆ. ಇನ್ನು 260 ಏಕದಿನ ಪಂದ್ಯಗಳಲ್ಲಿ 96.37 ಸ್ಟ್ರೈಕ್‌ರೇಟ್‌ನಂತೆ 6083 ರನ್ ಬಾರಿಸಿದ್ದಾರೆ. ಕೆಕೆಆರ್ ಪರ ಮೆಕಲಮ್ ಅಜೇಯ 158 ರನ್ ಸಿಡಿಸಿದ ದಾಖಲೆಯಿದೆ.

Story first published: Friday, August 9, 2019, 17:59 [IST]
Other articles published on Aug 9, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+