ಟಿ20 ಬ್ಲಾಸ್ಟ್: ಡರ್ಬಿಷೈರಿಗೆ ಚಳಿ ಬಿಡಿಸಿದ ಮೆಕಲಮ್
ಲಂಡನ್, ಜುಲೈ 04: ನ್ಯೂಜಿಲೆಂಡ್ ನ ಸ್ಫೋಟಕ ಆಟಗಾರ, ನಾಯಕ ಬ್ರೆಂಡನ್ ಮೆಕಲಮ್ ಮತ್ತೊಮ್ಮೆ ಟಿ20 ಪಂದ್ಯವೊಂದರಲ್ಲಿ ಮಿಂಚಿದ್ದಾರೆ. ಬೌಂಡರಿ, ಸಿಕ್ಸರ್ ಗಳ ಸುರಿಮಳೆಗೈದು ಇಂಗ್ಲೀಷ್ ಕೌಂಟಿಯಲ್ಲಿ ಕಿಚ್ಚು ಹಚ್ಚಿದ್ದಾರೆ.
33 ವರ್ಷ ವಯಸ್ಸಿನ ಮೆಕಲಮ್ ಅವರು ಡರ್ಬಿಷೈರ್ ಬೌಲರ್ ಗಳಿಗೆ ಚಳಿ ಬಿಡಿಸಿ 42 ಎಸೆತಗಳಲ್ಲೇ ಶತಕ ಪೂರೈಸಿದರು. ಶುಕ್ರವಾರ ನಡೆದ ಪಂದ್ಯದಲ್ಲಿ ತಮ್ಮದೇ ಟಿ20 ಪಂದ್ಯದ ದಾಖಲೆಯನ್ನು ಮೆಕಲಮ್ ಬದಿಗೊತ್ತಿದರು. ಅಂತಿಮವಾಗಿ ವಾರ್ವಿಕ್ ಷೈರ್ ಪರ ಆಡುತ್ತಾ 64 ಎಸೆತಗಳಲ್ಲಿ 158 ರನ್ ಚೆಚ್ಚಿದರು.

ಈ ಹಿಂದೆ ಕೋಲ್ಕತ್ತಾ ನೈಟ್ ರೈಡರ್ಸ್ ಪರ ಆಡಿ 2008ರ ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) ಪಂದ್ಯವೊಂದರಲ್ಲಿ 73 ಎಸೆತಗಳಲ್ಲಿ 158ರನ್ ಚೆಚ್ಚಿದ್ದರು.
ಡರ್ಬಿಷೈರ್ ವಿರುದ್ಧದ ಪಂದ್ಯದಲ್ಲಿ ಮೆಕಲಮ್ ಅವರ ಇನ್ನಿಂಗ್ಸ್ ನಲ್ಲಿ 11 ಸಿಕ್ಸರ್ ಹಾಗೂ 11 ಬೌಂಡರಿ ಬಾರಿಸಿದರು. ಇದು ಟಿ20 ಇತಿಹಾಸದಲ್ಲೇ ಅತಿ ಹೆಚ್ಚಿನ ವೈಯಕ್ತಿಕ ಮೊತ್ತ ಇದಾಗಿದೆ. ವೆಸ್ಟ್ ಇಂಡೀಸ್ ಬ್ಯಾಟ್ಸ್ ಮನ್ ಕ್ರಿಸ್ ಗೇಲ್ ಅವರು ಐಪಿಎಲ್ 2013ರಲ್ಲಿ 175 ರನ್ ಬಾರಿಸಿದ್ದು ಇನ್ನೂ ದಾಖಲೆಯಾಗಿದೆ.
ಬೆನ್ನುನೋವಿನಿಂದ ಬಳಲುತ್ತಿದ್ದರೂ ಒಂದು ವರ್ಷದ ಅವಧಿಗೆ ಇಂಗ್ಲೀಷ್ ಕೌಂಟಿಯಲ್ಲಿ ಆಡಲು ಒಪ್ಪಂದ ಮಾಡಿಕೊಂಡ ಮೆಕಲಮ್ ಅವರು ವಾರ್ವಿಕ್ ಷೈರ್ ಪರ ಉತ್ತಮ ಆಟವಾಡಿ ದಾಖಲೆ ಮುರಿದಿದ್ದಾರೆ. ಈ ಹಿಂದೆ 2014ರಲ್ಲಿ ಕೌಂಟಿ ಕ್ರಿಕೆಟ್ ನಲ್ಲಿ ಲೂಕ್ ರೈಟ್ ಅವರು 153ರನ್ ಚೆಚ್ಚಿದ್ದು ದಾಖಲೆಯಾಗಿತ್ತು. (ಎಎಫ್ ಪಿ)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications