ನಿವೃತ್ತಿ ಅಂಚಿನಲ್ಲಿರುವ ಮೆಕಲಮ್‌ಗೆ ಹೊಸ ದಾಖಲೆ ಕಿರೀಟ
ಕ್ರೈಸ್ಟ್‌ಚರ್ಚ್, ಫೆಬ್ರವರಿ, 20: ನಿವೃತ್ತಿ ಅಂಚಿನಲ್ಲಿರುವ ನ್ಯೂಜಿಲೆಂಡ್ ಸ್ಫೋಟಕ ಬ್ಯಾಟ್ಸಮನ್ ಬ್ರೆಂಡನ್ ಮೆಕ್ ಲಮ್ ಟೆಸ್ಟ್ ಇತಿಹಾಸದಲ್ಲಿ ಹೊಸ ದಾಖಲೆಯೊಂದನ್ನು ನಿರ್ಮಿಸಿದ್ದಾರೆ. ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಕೇವಲ 54 ಎಸೆತಗಳನ್ನು ಎದುರಿಸಿ ಶತಕ ದಾಖಲಿಸಿದ್ದಾರೆ. ಟೆಸ್ಟ್ ಕ್ರಿಕೆಟ್ ನಲ್ಲಿ ಅತಿ ವೇಗದ ಶತಕ ಸಾಧನೆಗೆ ಪಾತ್ರರಾಗಿದ್ದಾರೆ.
ಮೆಕಲಮ್ ಕ್ರಿಕೆಟ್ ದಿಗ್ಗಜ ವಿವಿಯನ್ ರಿಚರ್ಡ್ಸ್ ಮತ್ತು ಪಾಕಿಸ್ತಾನದ ಟೆಸ್ಟ್ ನಾಯಕ ಮಿಸ್ಬಾ ಉಲ್ ಹಕ್ ಅವರ ವೇಗದ ಟೆಸ್ಟ್ ಶತಕದ ದಾಖಲೆ ಹಿಂದಕ್ಕೆ ಹಾಕಿದ್ದಾರೆ. ರಿಚರ್ಡ್ಸ್ ಮತ್ತು ಮಿಸ್ಬಾ ಅವರು ಅನುಕ್ರಮವಾಗಿ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾದ ಎದುರು 56 ಎಸೆತಗಳನ್ನು ಎದುರಿಸಿ ಶತಕ ಬಾರಿಸಿದ್ದು ದಾಖಲೆಯಾಗಿತ್ತು.[ಎಬಿಡಿಗೆ ದಕ್ಕದ ದಾಖಲೆ ಮೆಕಲಮ್ ಪಾಲಾಯ್ತು!]

ಮೆಕಲಮ್ ಅವರಿಗೆ ಇದು ಟೆಸ್ಟ್ ಕ್ರಿಕೆಟ್ ವೃತ್ತಿ ಜೀವನದ 12ನೇ ಶತಕ. ಈ ವೇಗದ ಶತಕದಲ್ಲಿ ಶತಕದಲ್ಲಿ 17 ಬೌಂಡರಿಗಳು ಮತ್ತು ನಾಲ್ಕು ಭರ್ಜರಿ ಸಿಕ್ಸರ್‌ಗಳು ಇದ್ದವು.[ಏಕದಿನ ಕ್ರಿಕೆಟ್ ಗೆ ವಿದಾಯ ಹೇಳಿದ ಬ್ರೆಂಡನ್ ಮೆಕಲಮ್]
ಮೆಕಲಮ್ ಕ್ರೀಸ್ ಗೆ ಆಗಮಿಸಿದಾಗ ನ್ಯೂಜಿಲೆಂಡ್ 32 ರನ್ ಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟದ ಸ್ಥಿತಿಯಲ್ಲಿತ್ತು. ಆದರೆ ಹೊಡಿ ಬಡಿ ಆಟಕ್ಕೆ ಇಳಿದ ಮೆಕಲಮ್ 175 ರನ್ ಗೆ ತಂಡದ ಮೊತ್ತವನ್ನು ಏರಿಕೆ ಮಾಡಿದರು. 54 ಎಸೆತ ಎದುರಿಸಿ ಶತಕ ದಾಖಲಿಸಿದ ಮೆಕಲಮ್ 79 ಎಸೆತದಲ್ಲಿ 145 ರನ್ ಗಳಿಸಿದರು.
Brendon McCullum hits the fastest test century ever in his last match pic.twitter.com/uDx3XMz3tP
— FAN THIS 15th APRIL (@SRKswarrior1) February 20, 2016
Story first published: Wednesday, January 3, 2018, 10:03 [IST]
Other articles published on Jan 3, 2018
Read in English: Mccullum hits record century in 54 balls
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications