ಎಬಿಡಿಗೆ ದಕ್ಕದ ದಾಖಲೆ ಮೆಕಲಮ್ ಪಾಲಾಯ್ತು!
ಹ್ಯಾಮಿಲ್ಟನ್, ಡಿ. 18: 'ನನಗೆ ಕ್ರಿಕೆಟ್ ದಾಖಲೆಗಿಂತ ನನ್ನ ಮಗುವನ್ನು ಕಾಣುವುದು ಮುಖ್ಯ' ಎಂದು ಹೇಳಿ ದಕ್ಷಿಣ ಆಫ್ರಿಕಾದ ಬ್ಯಾಟ್ಸ್ ಮನ್ ಎ ಬಿ ಡಿ ವಿಲಿಯೆರ್ಸ್ ಅವರು ಅಂದು ರಜೆ ಪಡೆಯದಿದ್ದರಿಂದ ಈಗ ಟೆಸ್ಟ್ ಇತಿಹಾಸದ ಅಪೂರ್ವ ದಾಖಲೆ ಬ್ರೆಂಡನ್ ಮೆಕಲಮ್ ಪಾಲಾಗಿದೆ. ನ್ಯೂಜಿಲೆಂಡ್ ನಾಯಕ ಮೆಕಲಮ್ ಅವರು ಸತತವಾಗಿ 99 ಟೆಸ್ಟ್ ಪಂದ್ಯವಾಗಿ ವಿನೂತನ ದಾಖಲೆ ಇತ್ತೀಚೆಗೆ ಬರೆದಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧ ಮಾರ್ಚ್ 10, 2004ರಂದು ಮೊದಲ ಟೆಸ್ಟ್ ಪಂದ್ಯವಾಡಿದ ಬ್ರೆಂಡನ್ ಮೆಕಲಮ್ ಅವರು 99ನೇ ಟೆಸ್ಟ್ ಪಂದ್ಯವನ್ನು ಇತ್ತೀಚೆಗೆ ಹ್ಯಾಮಿಲ್ಟನ್ ನಲ್ಲಿ ಆಡಿದರು.[ಟೆಸ್ಟ್ ದಾಖಲೆಗಿಂತ ಅಪ್ಪನಾಗುವ ಖುಷಿ ಮುಖ್ಯ: ಎಬಿಡಿ]
ಬ್ರೆಂಡನ್ ಮೆಕಲಮ್ ಗೂ ಮೊದಲು ಸತತ 98 ಟೆಸ್ಟ್ ಪಂದ್ಯವಾಡುವ ಮೂಲಕ ಎಬಿ ಡಿ ವಿಲಿಯರ್ಸ್ ಅವರು ದಾಖಲೆ ಪುಟ ಸೇರಿದ್ದರು. ಬಾಂಗ್ಲಾದೇಶ ವಿರುದ್ಧ ದಕ್ಷಿಣ ಆಫ್ರಿಕಾ ಸರಣಿ ನಡೆಯುವಾಗ ಎಬಿ ಡಿ ವಿಲಿಯರ್ಸ್ ಅವರು ರಜೆ ಪಡೆದು ಸ್ವದೇಶಕ್ಕೆ ಮರಳಿದ್ದರು. ಸರಣಿಯಲ್ಲಿ ಇನ್ನೂ 2 ಪಂದ್ಯವಾಡುವ ಮುನ್ನವೇ ಸ್ವದೇಶಕ್ಕೆ ತೆರಳಿದರು.

ಇದಾದ ಬಳಿಕ ಭಾರತ ವಿರುದ್ಧ ದಕ್ಷಿಣ ಆಫ್ರಿಕಾ ನಾಲ್ಕು ಟೆಸ್ಟ್ ಪಂದ್ಯಗಳ ಸರಣಿಯನ್ನು ಆಡಿತು. ಆ ಪಂದ್ಯಗಳನ್ನಾಡಿದ್ದರೆ ಎಬಿಡಿ 104 ಪಂದ್ಯಗಳನ್ನು ಸತತವಾಗಿ ಆಡಿದ ದಾಖಲೆ ಬರೆಯಬಹುದಾಗಿತ್ತು.['ಅಪ್ಪನ ಬ್ಯಾಟಿಂಗ್ ಶೈಲಿ ಅನುಸರಿಸದ ದ್ರಾವಿಡ್ ಮಕ್ಕಳು!']
ಭಾರತ ಪರ ಸಚಿನ್ ತೆಂಡೂಲ್ಕರ್ ಅವರು ನವೆಂಬರ್ 15, 1989 ರಿಂದ ಸತತ 84 ಟೆಸ್ಟ್ ಪಂದ್ಯಗಳನ್ನಾಡಿ ದಾಖಲೆ ಬರೆದಿದ್ದರು. ಉಳಿದಂತೆ ಟಾಪ್ 5 ಪಟ್ಟಿಯಲ್ಲಿ ರಾಹುಲ್ ದ್ರಾವಿಡ್ ಹಾಗೂ ಆಡಂ ಗಿಲ್ ಕ್ರಿಸ್ಟ್ ಕೂಡಾ ಕಾಣಿಸಿಕೊಂಡಿದ್ದಾರೆ.
ಟಾಪ್ 5 ಪಟ್ಟಿಯಲ್ಲಿರುವ ಬ್ಯಾಟ್ಸ್ ಮನ್ ಗಳು:
* ಬ್ರೆಂಡನ್ ಮೆಕಲಮ್ - 99- ಮಾರ್ಚ್ 10, 2014-ಇಂದಿನ ತನಕ
* ಎಬಿ ಡಿ ವಿಲಿಯರ್ಸ್ -98- ಡಿಸೆಂಬರ್ 17, 2004- ಜೂನ್ 2, 2015
* ರಾಹುಲ್ ದ್ರಾವಿಡ್ -93- ಜೂನ್ 20, 1996- ಡಿಸೆಂಬರ್ 10, 2005
* ಸಚಿನ್ ತೆಂಡೂಲ್ಕರ್ -84- ನವೆಂಬರ್ 15, 1989- ಜೂನ್ 15, 2001
(ಒನ್ ಇಂಡಿಯಾ ಸುದ್ದಿ)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications