IND vs AUS: ಬಾರ್ಡರ್-ಗವಾಸ್ಕರ್ ಟ್ರೋಫಿಗೆ ಭಾರತ ಈ ವೇಗಿಯನ್ನು ಆಯ್ಕೆ ಮಾಡಬೇಕು; ಬ್ರೆಟ್ ಲೀ ಸಲಹೆ
ಭಾರತ ತಂಡವು ಸದ್ಯಕ್ಕೆ ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಸರಣಿಯನ್ನು ಆಡುತ್ತಿರಬಹುದು, ಆದರೆ ಎಲ್ಲರ ಕಣ್ಣುಗಳು ಬಹು ನಿರೀಕ್ಷಿತ ಬಾರ್ಡರ್-ಗವಾಸ್ಕರ್ ಟ್ರೋಫಿಯತ್ತ ನೆಟ್ಟಿದೆ. ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯು ಆ್ಯಶಸ್ ಸರಣಿಯಷ್ಟೇ ಮಹತ್ವ ಪಡೆದುಕೊಂಡಿದೆ.
ಮುಂದಿನ ತಿಂಗಳು ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿ ಆಡಲು ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ತಂಡ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದೆ. ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಐದು ಟೆಸ್ಟ್ ಪಂದ್ಯಗಳು ನಡೆಯಲಿದ್ದು, ಆಟಗಾರರ ನಡುವಿನ ಜಿದ್ದಾಜಿದ್ದಿನ ಕಾದಾಟ ರೋಚಕವಾಗಿರುತ್ತದೆ. ಆದರೆ ಭಾರತ ತಂಡಕ್ಕೆ ವೇಗದ ಬೌಲರ್‌ಗಲ ಸಮಸ್ಯೆ ಕಾಡುತ್ತಿದೆ. ಕಾಂಗರೂ ನೆಲದ ಬೌನ್ಸಿ ಪಿಚ್‌ಗಳಲ್ಲಿ ಭಾರತವು ಟೆಸ್ಟ್ ಸರಣಿಯಲ್ಲಿ ಪ್ರಾಬಲ್ಯ ಸಾಧಿಸಬೇಕಾದರೆ ವೇಗದ ಬೌಲರ್‌ಗಳ ಸಂಯೋಜನೆಯು ಮುಖ್ಯವಾಗಿದೆ.

ಭಾರತದ ಸ್ಟಾರ್ ವೇಗದ ಬೌಲರ್ ಮೊಹಮ್ಮದ್ ಶಮಿ ಗಾಯದಿಂದ ಚೇತರಿಸಿಕೊಂಡಿದ್ದು, ಅವರು ಸಂಪೂರ್ಣ ಫಿಟ್ ಆಗಿರುವ ಬಗ್ಗೆ ವರದಿಗಳು ಮಾಹಿತಿ ನೀಡಿವೆ. ಅವರು ಸಂಪೂರ್ಣ ಫಿಟ್ ಆಗದೆ ಭಾರತ ತಂಡ ಆಸ್ಟ್ರೇಲಿಯಾ ಪ್ರವಾಸಕ್ಕೆ ಕರೆದುಕೊಂಡು ಹೋಗುವುದು ಅನುಮಾನವಾಗಿದೆ. ಶಮಿ ಇತ್ತೀಚೆಗೆ ತಾನು ನೋವಿನಿಂದ ಮುಕ್ತನಾಗಿದ್ದೇನೆ. ರಣಜಿ ಟ್ರೋಫಿಯ ಕೆಲವು ಪಂದ್ಯಗಳನ್ನು ಆಡುತ್ತೇನೆ ಎಂದಿದ್ದಾರೆ. ಆದರೆ ರೋಹಿತ್ ಶರ್ಮಾ ಯಾವುದೇ ಸವಾಲುಗಳನ್ನು ತೆಗೆದುಕೊಳ್ಳಲು ಸಿದ್ದವಿಲ್ಲ ಎಂದು ಹೇಳಿದ್ದಾರೆ. ಇಂತಹ ಸಂದರ್ಭದಲ್ಲಿ ಆಸ್ಟ್ರೇಲಿಯಾದ ಮಾಜಿ ವೇಗದ ಬೌಲರ್ ಬ್ರೆಟ್ ಲೀ ಭಾರತಕ್ಕೆ ಶಮಿ ಸ್ಥಾನಕ್ಕೆ ಬ್ಯಾಕ್ ಅಪ್ ವೇಗದ ಬೌಲರ್‌ನನ್ನು ಆಯ್ಕೆ ಮಾಡುವಂತೆ ಸಲಹೆ ನೀಡಿದ್ದಾರೆ.
ಶಮಿ ಬದಲಿಗೆ ಯಾರು?
ಸಂದರ್ಶನವೊಂದರಲ್ಲಿ ಮಾತನಾಡಿರುವ ಬ್ರೆಟ್ ಲೀ, ಆಸ್ಟ್ರೇಲಿಯಾ ವಿರುದ್ಧ ಐದು ಪಂದ್ಯಗಳ ಟೆಸ್ಟ್ ಸರಣಿಗೆ ಶಮಿಯ ಬ್ಯಾಕ್-ಅಪ್ ಆಗಿ ಯುವ ವೇಗದ ಬೌಲರ್ ಮಯಾಂಕ್ ಯಾದವ್ ಅವರನ್ನು ಆಯ್ಕೆ ಮಾಡಲು ಭಾರತಕ್ಕೆ ಸಲಹೆ ನೀಡಿದ್ದಾರೆ.
'ಮಯಾಂಕ್ ಯಾದವ್ ತಮ್ಮ ಮೊದಲ ಐಪಿಎಲ್ ಪಂದ್ಯದಲ್ಲಿ 157 ಕಿಮೀ ವೇಗದಲ್ಲಿ ಬೌಲಿಂಗ್ ಮಾಡಿದ್ದರು. ದುರದೃಷ್ಟವಶಾತ್, ಅವರ ಫ್ರಾಂಚೈಸಿ ಮಾಯಂಕ್ ಅವರನ್ನು ಸ್ವಲ್ಪ ತಡವಾಗಿ ಕರೆತಂದಿತು. ಸಿಕ್ಕ ಅವಕಾಶದಲ್ಲಿ ಅವರು ಮಿಂಚಿನ ಪ್ರದರ್ಶನ ನೀಡಿ ಗಮನ ಸೆಳೆದಿದ್ದರು ಎಂದು ಬ್ರೆಟ್ ಲೀ ಹೇಳಿದ್ದಾರೆ.
ಭಾರತ ತಂಡದ ಮ್ಯಾನೇಜ್‌ಮೆಂಟ್‌ನ ಕೆಲವು ಆಟಗಾರರನ್ನು ಫಾಸ್ಟ್ ಟ್ರ್ಯಾಕಿಂಗ್ ಮಾಡುವಲ್ಲಿ ವಿಶಿಷ್ಟತೆ ಸ್ಪಷ್ಟವಾಗಿದೆ. ಭಾರತ ಯಾರೂ ಎಷ್ಟು ಕ್ರಿಕೆಟ್ ಆಡಿದ್ದಾರೆ ಅಥವಾ ಆಡಿಲ್ಲ ಎಂಬ ಬಗ್ಗೆ ಚಿಂತಿಸುವುದಿಲ್ಲ. ಮಯಾಂಕ್ ಯಾದವ್ ಬಾರ್ಡರ್-ಗವಸ್ಕಾರ್ ಟ್ರೋಪಿ ಆಡಲು ಸಿದ್ಧರಿದ್ದರೆ ಅವರನ್ನು ಪ್ರವಾಸಕ್ಕೆ ಕರೆತನ್ನಿ. ನಾನು ನಿಜವಾಗಿಯೂ ಆ ಸಿದ್ಧಾಂತವನ್ನು ಪ್ರೀತಿಸುತ್ತೇನೆ. ಮೊಹಮ್ಮದ್ ಶಮಿ ಸಿದ್ಧವಾಗಿಲ್ಲದಿದ್ದರೆ, ಕನಿಷ್ಠ ಅವರನ್ನು ತಂಡದಲ್ಲಿ ಸೇರಿಸಿಕೊಳ್ಳಬೇಕು. ಆಸ್ಟ್ರೇಲಿಯಾದ ವಿಕೆಟ್‌ಗಳಲ್ಲಿ ಅವರು ಉತ್ತಮವಾಗಿ ಬೌಲಿಂಗ್ ಮಾಡುತ್ತಾರೆ ಅಂದುಕೊಂಡಿದ್ದೇನೆ ಎಂದು ಲೀ ತಿಳಿಸಿದ್ದಾರೆ.
3ನೇ ವೇಗಿಯ ಹುಡುಕಾಟದಲ್ಲಿ ಭಾರತ
ಭಾರತ ತಂಡ ಆಸ್ಟ್ರೇಲಿಯಾದಲ್ಲಿ ಸತತ ಮೂರನೇ ಬಾರಿಗೆ ಬಾರ್ಡರ್-ಗವಸ್ಕಾರ್ ಟ್ರೋಫಿ ಟೆಸ್ಟ್ ಸರಣಿಯನ್ನು ಗೆಲ್ಲಲ್ಲು ಭಾರತಕ್ಕೆ ಶಮಿ ಫಿಟ್ ಆಗಿರವುದು ಅಗತ್ಯವಿದೆ. ಜಸ್ಪ್ರೀತ್ ಬುಮ್ರಾ, ಅವರು ಎಷ್ಟು ಒಳ್ಳೆಯ ಬೌಲರ್ ಎಂದು ನಮಗೆಲ್ಲರಿಗೂ ತಿಳಿದಿದೆ. ಅವರು ಎರಡೂ ರೀತಿಯಲ್ಲಿ ಬೌಲಿಂಗ್ ಮಾಡಬಲ್ಲರು, ಅವರು ರಿವರ್ಸ್ ಸ್ವಿಂಗ್ ಮಾಡುವುದಲ್ಲಿ ಎತ್ತಿದ ಕೈ. ಮೊಹಮ್ಮದ್ ಸಿರಾಜ್ ಕೂಡ ಹೊಸ ಚೆಂಡಿನಲ್ಲಿ ಹೇಗೆ ಬೌಲಿಂಗ್ ಮಾಡಬೇಕೆಂದು ತಿಳಿದಿದ್ದಾರೆ. ಹೀಗಾಗಿ ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್ ಅವರೊಂದಿಗೆ ಶಮಿ ಬದಲಿಗೆ ಮೂರನೇ ವೇಗದ ಬೌಲರ್ ಆಗಿ ಮಾಯಾಂಕ್ ಯಾದವ್ ಆಯ್ಕೆಯಾಗುತ್ತಾರಾ? ಕಾದುನೋಡಬೇಕಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications