ಟಿ20 ಇತಿಹಾಸದಲ್ಲಿ ಕನಿಷ್ಠ ಮೊತ್ತಕ್ಕೆ ಆಲೌಟ್ ಆದ ಸಿಡ್ನಿ ಥಂಡರ್ ವಿರುದ್ಧ ಕಿಡಿಕಾರಿದ ಬ್ರೆಟ್ ಲೀ

ಬಿಗ್ ಬ್ಯಾಷ್ ಲೀಗ್‌ನಲ್ಲಿ ಶುಕ್ರವಾರ ನಡೆದ ಅಡಿಲೇಡ್ ಸ್ಟ್ರೈಕರ್ಸ್ ಹಾಗೂ ಸಿಡ್ನಿ ಥಂಡರ್ ವಿರುದ್ಧದ ಪಂದ್ಯ ಟಿ20 ಕ್ರಿಕೆಟ್‌ನಲ್ಲಿ ಹಿಂದೆಂದೂ ದಾಖಲಾಗದ ಕನಿಷ್ಠ ಮೊತ್ತಕ್ಕೆ ಸಾಕ್ಷಿಯಾಯಿತು. ಸಿಡ್ನಿ ಥಂಡರ್ ತಂಡ ಕೇವಲ 15 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಮುಖಭಂಗಕ್ಕೆ ಒಳಗಾಗಿದೆ. ಈ ಪ್ರದರ್ಶನದ ಬಳಿಕ ಆಸ್ಟ್ರೇಲಿಯಾದ ದಿಗ್ಗಜ ಆಟಗಾರ ಬ್ರೆಟ್ ಲೀ ಸಿಡ್ನಿ ಥಂಡರ್ ವಿರುದ್ಧ ಕಿಡಿಕಾರಿದ್ದಾರೆ.
ಸ್ಟ್ರೈಕರ್ಸ್ ತಂಡ ಸಿಡ್ನಿ ಥಂಡರ್ ವಿರುದ್ಧ ಮೊದಲಿಗೆ ಬ್ಯಾಟಿಂಗ್ ನಡೆಸಿ 140 ರನ್‌ಗಳ ಗುರಿಯನ್ನು ನೀಡಿತ್ತು. ಆದರೆ ಸಿಡ್ನಿ ಫ್ರಾಂಚೈಸಿ ತವರು ಮೈದಾನದಲ್ಲಿ ತಮ್ಮ ಅಭಿಮಾನಿಗಳ ಸಮ್ಮುಖದಲ್ಲಿಯೇ ಭಾರೀ ಮುಖಭಂಗಕ್ಕೆ ಒಳಗಾಯಿತು. ಥಂಡರ್ ತಂಡದಲ್ಲಿ ಅಲೆಕ್ಸ್ ಹೇಲ್ಸ್, ರಿಲೀ ರೊಸ್ಸೊ, ಡೇನಿಯಲ್ ಸ್ಯಾಮ್ಸ್ ಅವರಂತಹ ಅನುಭವಿ ಟಿ20 ಸ್ಟಾರ್ ಆಟಗಾರರು ಇದ್ದರು ಕೂಡ ಪವರ್‌ಪ್ಲೇ ಓವರ್‌ನಲ್ಲಿಯೇ ಆಲೌಟ್ ಆಯಿತು.
ಈ ಕಳಪೆ ಪ್ರದರ್ಶನ ನೀಡಿದ ಬಳಿಕ ಆಸ್ಟ್ರೇಲಿಯಾದ ದಿಗ್ಗಜ ಆಟಗಾರ ಬ್ರೆಟ್ ಲೀ ಥಂಡರ್ ತಂಡದ ವಿರುದ್ಧ ಕಟುವಾಗಿ ಟೀಕಿಸಿದ್ದಾರೆ. ಡೈಲಿ ಮೇಲ್ ಬ್ರೆಟ್ ಲೀ ಪ್ರತಿಕ್ರಿಯೆಯನ್ನು ಉಲ್ಲೇಖಿಸಿದ್ದು ಮಾಝಿ ಕ್ರಿಕೆಟಿಗ ಈ ಪ್ರದರ್ಶನದಿಮದ ದಿಗಿಲುಗೊಂಡಿದ್ದಾರೆ ಎಂದಿದೆ. ಅಲ್ಲದೆ ಇಂಥಾ ಪ್ರದರ್ಶನದದ ಬಳಿಕ ತನ್ನಲ್ಲಿ ಮಾತನಾಡಲು ಯಾವುದೇ ಪದಗಳಿಲ್ಲ ಎಂದು ಟೀಕಿಸಿದ್ದಾರೆ.
"ನಾನು ಈ ಆಟ ನೋಡಿ ನಿಜವಾಗಿಯೂ ಮೂಖನಾಗಿದ್ದೇನೆ. ಇದು ಸಿಡ್ನಿ ಥಂಡರ್ ತಂಡದ ಭಯಾನಕ ಪ್ರದರ್ಶನ" ಎಂದಿದ್ದಾರೆ ಬ್ರೆಟ್ ಲೀ. "ಕೇವಲ 15 ರನ್. ಬೌಲಿಂಗ್ ಅದ್ಭುತವಾಗಿತ್ತು ನಿಜ, ಆದರೆ! ನನ್ನಲ್ಲಿ ಮಾತುಗಳೇ ಇಲ್ಲ. ಇಂಥಾ ಆಟವನ್ನು ನಾನು ಯಾವತ್ತೂ ನೋಡಿರಲಿಲ್ಲ. ಇಂಥಾ ಕ್ರಿಕೆಟ್ ಆಟವನ್ನು ನಾನು ನೋಡಿಯೇ ಇಲ್ಲ" ಎಂದು ಬ್ರೆಟ್ ಲೀ ಕಟುವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ಈ ಪಂದ್ಯದಲ್ಲಿ ಮೊದಲಿಗೆ ಬ್ಯಾಟಿಂಗ್ ಮಾಡಿದ ಅಡಿಲೇಡ್ ಸ್ಟ್ರೈಕರ್ಸ್ ಸಾಧಾರಣ ಪ್ರದರ್ಶನ ನೀಡಿ ಎದುರಾಳಿಗೆ ಸುಲಭ ಗುರಿಯನ್ನು ನಿಗದಿಪಡಿಸಿತ್ತು. ನಿಗದಿತ 20 ಓವರ್‌ಗಳಲ್ಲಿ ಸ್ಟ್ರೈಕರ್ಸ್ ತಂಡ 9 ವಿಕೆಟ್ ಕಳೆದುಕೊಂಡು 139 ರನ್‌ಗಳನ್ನು ಗಳಿಸಿತ್ತು. ಹೀಗಾಗಿ 140 ರನ್‌ಗಳನ್ನು ಗಳಿಸುವ ಸಾಧಾರಣ ಗುರಿಯನ್ನು ನಿಗದಿಪಡಿಸಿತು
ಸ್ಟ್ರೈಕರ್ಸ್ ನೀಡಿದ 140 ರನ್‌ಗಳ ಗುರಿ ಬೆನ್ನಟ್ಟಲು ಕಣಕ್ಕಿಳಿದ ಸಿಡ್ನಿ ಥಂಡರ್ ಮೂರನೇ ಎಸೆತದಿಂದಲೇ ವಿಕೆಟ್ ಕಳೆದುಕೊಳ್ಳಲು ಆರಂಭಿಸಿತ್ತು. ತಂಡದ ಮೊತ್ತ 10 ರನ್ ಗಳಿಸುವ ಮುನ್ನವೇ ಪ್ರಮುಖ 6 ವಿಕೆಟ್ ಕಳೆದುಕೊಂಡಿತ್ತು. 15 ರನ್ ಆಗುವಷ್ಟರಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು ಆಲೌಟ್ ಆಯಿತು. 10ನೇ ಕ್ರಮಾಂಕದಲ್ಲಿ ಹಣಕ್ಕಿಳಿದ ಬ್ರೆಂಡನ್ ಡಾಗ್ಗೆಟ್ ಅವರು ಗಳಿಸಿದ 4 ರನ್ ತಂಡದ ಪರ ದಾಖಲಾದ ಅತಿ ಹೆಚ್ಚು ಸ್ಕೋರ್!. ಇನ್ನು ಎರಡು ರನ್ ವೈಡ್ ಮೂಲಕ ಸೇರ್ಪಡೆಯಾಗಿತ್ತು. ವಿಪರ್ಯಾಸವೆಂದರೆ ಪವರ್‌ಪ್ಲೇ ಅವಧಿ ಮುಗಿಯಲು ಕೂಡ ಇನ್ನೂ ಒಂದು ಎಸೆತ ಬಾಕಿಯಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications