Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Brett Lee: ಸಾರ್ವಕಾಲಿಕ ಟಿ20 ಏಷ್ಯಾ ತಂಡ ಪ್ರಕಟಿಸಿದ ಬ್ರೆಟ್‌ ಲೀ: 5 ಭಾರತೀಯರಿಗೆ ಸ್ಥಾನ

ಸದ್ಯ ಯುಎಇನಲ್ಲಿ ಏಷ್ಯಾ ಕಪ್‌ ಟಿ20 ಟೂರ್ನಿ ನಡೆಯುತ್ತಿದೆ. ಇದೇ ವೇಳೆ ಆಸ್ಟ್ರೇಲಿಯಾದ ದಿಗ್ಗಜ ವೇಗದ ಬೌಲರ್‌ ಬ್ರೆಟ್ ಲೀ ಸಾರ್ವಕಾಲಿಕ ಟಿ20 ಏಷ್ಯಾ ತಂಡವನ್ನು ಆಯ್ಕೆ ಮಾಡಿದ್ದಾರೆ. ಈ ತಂಡದಲ್ಲಿ ಭಾರತದ ಐವರು ಆಟಗಾರರು ಸ್ಥಾನ ಪಡೆದಿದ್ದಾರೆ. ಪಾಕಿಸ್ತಾನದ ಇಬ್ಬರು ಆಟಗಾರರಿಗೆ ಮಾತ್ರ ಅವಕಾಶ ನೀಡಿದ್ದಾರೆ. ಬ್ರೆಟ್ ಲೀ ತಂಡದಲ್ಲಿ ಪಾಕ್‌ ತಂಡದ ಸೂಪರ್ ಸ್ಟಾರ್ ಆಟಗಾರ ಬಾಬರ್ ಅಜಮ್‌ ಸ್ಥಾನ ಪಡೆದಿಲ್ಲ. ಹಾಗಿದ್ದರೆ ಯಾವೆಲ್ಲಾ ಆಟಗಾರರು ತಂಡದಲ್ಲಿ ಸ್ಥಾನ ಪಡೆದಿದ್ದಾರೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

ಬ್ರೆಟ್ ಲೀ ಪ್ರಕಟಿಸಿದ ತಂಡದಲ್ಲಿ ಯುಎಇಯ 2 ಆಟಗಾರರನ್ನು ಮತ್ತು ಅಫ್ಘಾನಿಸ್ತಾನ ಮತ್ತು ಶ್ರೀಲಂಕಾದಿಂದ ತಲಾ 1 ಆಟಗಾರನನ್ನು ಇದ್ದಾರೆ. ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಆಟಗಾರರಾದ ವಿರಾಟ್ ಕೊಹ್ಲಿ ಹಾಗೂ ರೋಹಿತ್‌ ಶರ್ಮಾ ಟಿ20 ಹಾಗೂ ಟೆಸ್ಟ್‌ ಪಂದ್ಯಗಳಿಗೆ ನಿವೃತ್ತಿ ಘೋಷಿಸಿದ್ದಾರೆ. ಹೀಗಾಗಿ ಈ ಇಬ್ಬರೂ ಆಟಗಾರರು ಈಗ ಏಕದಿನ ಪಂದ್ಯದಲ್ಲಿ ಆಡುವುದನ್ನು ಮಾತ್ರ ಕಾಣಬಹುದಾಗಿದೆ. ಈ ಇಬ್ಬರು ಅಕ್ಟೋಬರ್‌ನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಏಕದಿನ ಸರಣಿಯಲ್ಲಿ ಭಾರತದ ಪರ ಆಡಲಿದ್ದಾರೆ.

Brett Lee Picks All-Time Asia T20 XI Five Indians No Babar Azam

ಬ್ರೆಟ್ ಲೀ ಪ್ರಕಟಿಸಿದ ಸರ್ವಕಾಲಿಕ ಏಷ್ಯಾ ಕಪ್ ಟಿ20 ತಂಡದಲ್ಲಿ ವಿರಾಟ್‌ ಕೊಹ್ಲಿ ಹಾಗೂ ರೋಹಿತ್‌ ಆರಂಭಿಕರಾಗಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಟೀಮ್ ಇಂಡಿಯಾದ ಭರವಸೆಯ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಸ್ಥಾನ ಪಡೆದಿದ್ದು, ವಿಕೆಟ್‌ ಕೀಪರ್‌ ರೂಪದಲ್ಲಿ ಎಂಎಸ್‌ ಧೋನಿ ಅವರಿಗೆ ವೇಗಿ ಸ್ಥಾನ ನೀಡಿದ್ದಾರೆ. ಇನ್ನು ಯಾರ್ಕರ್‌ ಸ್ಪೇಷಲಿಸ್ಟ್‌ ಜಸ್ಪ್ರೀತ್‌ ಬುಮ್ರಾ ಅವರಿಗೂ ಬ್ರೆಟ್ ಲಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಬಾಬರ್‌ಗೆ ಇಲ್ಲ ಅವಕಾಶ

ಪಾಕ್‌ ತಂಡದ ಸ್ಟಾರ್ ಆಟಗಾರ ಬಾಬರ್ ಅಜಮ್‌ ಅವರಿಗೆ ಬ್ರೆಟ್ ಲೀ ಪ್ರಕಟಿಸಿದ ತಂಡದಲ್ಲಿ ಸ್ಥಾನ ನೀಡಿಲ್ಲ. ಆದರೆ ಪಾಕ್‌ ತಂಡದ ಇಬ್ಬರು ಆಟಗಾರರಿಗೆ ಬ್ರೆಟ್‌ ಲೀ ಮಣೆ ಹಾಕಿದ್ದಾರೆ. ಮೊಹಮ್ಮದ್ ರಿಜ್ವಾನ್ ಮತ್ತು ಇನ್ನೊಬ್ಬ ಹ್ಯಾರಿಸ್ ರೌಫ್.

Brett Lee Picks All-Time Asia T20 XI Five Indians No Babar Azam

ಬ್ರೆಟ್ ಲೀ ಪ್ರಕಟಿಸಿದ ಸರ್ವಕಾಲಿ ತಂಡ: ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಮೊಹಮ್ಮದ್ ರಿಜ್ವಾನ್, ಬಾಬರ್ ಹಯಾತ್, ಎಂಎಸ್ ಧೋನಿ, ಹಾರ್ದಿಕ್ ಪಾಂಡ್ಯ, ವನಿಂದು ಹಸರಂಗ, ರಶೀದ್ ಖಾನ್, ಅಮ್ಜದ್ ಜಾವೇದ್, ಮೊಹಮ್ಮದ್ ನವೀದ್, ಹ್ಯಾರಿಸ್ ರೌಫ್, ಜಸ್ಪ್ರೀತ್ ಬುಮ್ರಾ.

ಭಾರತ ಹಾಗೂ ಪಾಕಿಸ್ತಾನ ನಡುವಣ ಹೈ ವೋಲ್ಟೇಜ್‌ ಪಂದ್ಯಕ್ಕೂ ಮುನ್ನ ಬ್ರೆಟ್ ಲೀ ಪ್ರಕಟಿಸಿದ ತಂಡ ಎಲ್ಲರ ಗಮನ ಸೆಳೆದಿದೆ. ಸೆ.14 ರಂದು ಉಭಯ ದೇಶಗಳ ನಡುವಣ ಜಿದ್ದಾಜಿದ್ದಿನ ಕಾಳಗಕ್ಕೆ ಇಡೀ ವಿಶ್ವವೇ ಕಾದು ಕುಳಿತಿದೆ. ಆಡಿದ ಮೊದಲ ಪಂದ್ಯದಲ್ಲಿ ಯುಎಇ ವಿರುದ್ಧ 9 ವಿಕೆಟ್‌ಗಳಿಂದ ಭರ್ಜರಿ ಜಯ ಸಾಧಿಸಿರುವ ಭಾರತ, ಮತ್ತೊಂದು ದೊಡ್ಡ ಗೆಲುವಿನ ಕನಸಿನಲ್ಲಿದೆ.

Story first published: Friday, September 12, 2025, 16:12 [IST]
Other articles published on Sep 12, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+