ಸಿಪಿಎಲ್ 2020: ಟೂರ್ನಿಯ ವಿಶೇಷ ಆಟಗಾರನನ್ನು ಹೆಸರಿಸಿದ ಬ್ರೆಟ್ ಲೀ, ಮಂಜ್ರೇಕರ್

ಸಿಪಿಎಲ್ ಟೂರ್ನಿ ಕುತೂಹಲವನ್ನು ಹೆಚ್ಚಿಸಿಕೊಳ್ಳುತ್ತಲೇ ಇದೆ. ಈ ಬಾರಿಯ ಟೂರ್ನಿಯಲ್ಲಿ ಶ್ರೇಷ್ಠ ಪ್ರದರ್ಶನವನ್ನು ನೀಡಲು ಎಲ್ಲಾ ಆಟಗಾರರು ಜೈವಿಕ ಸುರಕ್ಷತಾ ವಲಯದಲ್ಲಿ ಅಭ್ಯಾಸವನ್ನು ನಡೆಸುತ್ತಿದ್ದಾರೆ. ಈ ಮಧ್ಯೆ ಕೆಲ ಆಟಗಾರರು ಈ ಬಾರಿಯ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನವನ್ನು ನೀಡುವ ನಿರೀಕ್ಷೆಯಿದೆ.
ಟೀಮ್ ಇಂಡಿಯಾದ ಮಾಜಿ ಆಟಗಾರ ಸಂಜಯ್ ಮಂಜ್ರೇಕರ್ ಹಾಗೂ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಬ್ರೇಟ್ ಲೀ ಈ ಬಾರಿಯ ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ 'ಕೀ ಆಟಗಾರ'ನಾಗಿ ಮಿಂಚಬಲ್ಲ ಕ್ರಿಕೆಟಿಗರನ್ನು ಹೆಸರಿಸಿದ್ದಾರೆ. ಇಬ್ಬರು ಮಾಜಿ ಮಾಜಿ ಕ್ರಿಕೆಟಿಗರು ತಲಾ ಓರ್ವ ಆಟಗಾರನ ಹೆಸರನ್ನು ಉಲ್ಲೇಖಿಸಿದ್ದಾರೆ.
ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಬ್ರೆಟ್ ಲೀ ಈ ಬಾರಿಯ ಲೀಗ್ ಟೂರ್ನಿಯಲ್ಲಿ ರಶೀದ್ ಖಾನ್ ಆಟವನ್ನು ಎದುರು ನೋಡುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಸ್ಟಾರ್ ಸ್ಪೋರ್ಟ್ಸ್‌ನ ಕ್ರಿಕೆಟ್ ಕನೆಕ್ಟೆಡ್ ಕಾರ್ಯಕ್ರಮದಲ್ಲಿ ಬ್ರೆಟ್ ಲೀ ಈ ಬಾರಿಯ ಕೆರಿಬಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಪ್ರಮುಖ ಆಟಗಾರನಾಗಿ ರಶೀದ್ ಖಾನ್ ಹೊರಹೊಮ್ಮಲಿದ್ದಾರೆ ಎಂದಿದ್ದಾರೆ.
"ನಾನು ರಶೀದ್ ಖಾನ್ ಅವರನ್ನು ಆಯ್ಕೆ ಮಾಡುತ್ತೇನೆ. ಆತನ ಬತ್ತಳಿಕೆಯಲ್ಲಿ ಎಲ್ಲಾ ರೀತಿಯ ತಂತ್ರಗಳು ಕೂಡ ಇದೆ. ಅತ್ಯುತ್ತಮ ಬೌಲಿಂಗ್, ಉತ್ತಮ ಮನೋಧರ್ಮ, ಹಾಗೂ ಅಲ್ಲಿನ ವಿಕೆಟ್ ಆತನಿಗೆ ಸರಿಯಾಗಿ ಹೊಂದಿಕೆಯಾಗುತ್ತದೆ. ಆತನೋರ್ವ ಅದ್ಭುತ ವ್ಯಕ್ತಿಯೂ ಹೌದು. ಹಾಗಾಗಿ ನನ್ನ ಆಯ್ಕೆ ರಶೀದ್ ಖಾನ್ ಎಂದು ಬ್ರೆಟ್ ತಿಳಿಸಿದ್ದಾರೆ.
ಭಾರತದ ಮಾಜಿ ಬ್ಯಾಟ್ಸ್‌ಮನ್ ಸಂಜಯ್ ಮಂಜ್ರೇಕರ್, ಆಸ್ಟ್ರೇಲಿಯಾದ ಅಗ್ರ ಕ್ರಮಾಂಕದ ಆಟಗಾರ ಕ್ರಿಸ್ ಲಿನ್ ಈ ಆವೃತ್ತಿಯಲ್ಲಿ ಗಮನಹರಿಸಬೇಕಾದ ಆಟಗಾರ ಎಂದು ಅಭಿಪ್ರಾಯ ವ್ಯಕ್ತಡಿಸಿದ್ದಾರೆ. "ನಾನು ಕ್ರಿಸ್ ಲಿನ್ ಆಯ್ಕೆ ಮಾಡಲು ಇಷ್ಟಪಡುತ್ತೇನೆ. ಅವರ ಬ್ಯಾಟಿಂಗ್‌ನಲ್ಲಿ ಒಂದು ರೀತಿಯ ಸ್ಲೆಡ್ಜ್ ಹ್ಯಾಮರ್ ರೀತಿಯ ಶಕ್ತಿ ಇದೆ. ಆದ್ದರಿಂದ, ನನ್ನ ಆಯ್ಕೆ ಕ್ರಿಸ್ ಲಿನ್ ಆಗಿರುತ್ತದೆ" ಎಂದು ತಿಳಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications