ವೇಗಿ ಪ್ಯಾಟ್ ಕಮಿನ್ಸ್‌ಗೆ ವಿಶ್ರಾಂತಿ ನೀಡಿದ್ದನ್ನು ಪ್ರಶ್ನಿಸಿದ ಬ್ರೆಟ್ ಲೀ

ಸಿಡ್ನಿ: ಭಾರತ ವಿರುದ್ಧದ ಏಕದಿನ ಸರಣಿ ಆರಂಭಿಕ ಎರಡು ಪಂದ್ಯಗಳಲ್ಲಿ ಆಡಿದ್ದ ವೇಗಿ ಪ್ಯಾಟ್ ಕಮಿನ್ಸ್‌ಗೆ ಮೂರನೇ ಪಂದ್ಯದಲ್ಲಿ ವಿಶ್ರಾಂತಿ ನೀಡಿದ್ದನ್ನು ಆಸ್ಟ್ರೇಲಿಯಾದ ಮಾಜಿ ವೇಗಿ ಬ್ರೆಟ್ ಲೀ ಪ್ರಶ್ನಿಸಿದ್ದಾರೆ. ಬುಧವಾರ (ಡಿಸೆಂಬರ್ 2) ಮುಕ್ತಾಯಗೊಂಡ ಭಾರತ-ಆಸ್ಟ್ರೇಲಿಯಾ 3ನೇ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಪಡೆ 13 ರನ್ ರೋಚಕ ಗೆಲುವನ್ನಾಚರಿಸಿತ್ತು.
ಕಳೆದ ಆಗಸ್ಟ್‌ನಲ್ಲಿ ಆಸ್ಟ್ರೇಲಿಯಾದ ಇಂಗ್ಲೆಂಡ್ ಪ್ರವಾಸದ ವೇಳೆ ಪ್ಯಾಟ್ ಕಮಿನ್ಸ್ ಆಸೀಸ್ ತಂಡದ ಭಾಗವಾಗಿದ್ದರು. ನವೆಂಬರ್‌ನಲ್ಲಿ ಮುಕ್ತಾಯಗೊಂಡ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲೂ ಕೋಲ್ಕತ್ತಾ ನೈಟ್ ರೈಡರ್ಸ್ ಪರ ಕಮಿನ್ಸ್ ಆಡಿದ್ದರು.
ಆದರೆ ಭಾರತ ವಿರುದ್ಧದ ಏಕದಿನ ಸರಣಿಯಲ್ಲಿ ಆರಂಭಿಕ ಎರಡು ಪಂದ್ಯಗಳಲ್ಲಿ ಆಡಿದ್ದ ಕಮಿನ್ಸ್ ಅಂತಿಮ ಪಂದ್ಯದಲ್ಲಿ ಆಡಿರಲಿಲ್ಲ. ಮುಂಬರಲಿರುವ ಟಿ20ಐ ಸರಣಿಯಲ್ಲೂ ಕಮಿನ್ಸ್‌ಗೆ ವಿಶ್ರಾಂತಿ ನೀಡಲಾಗಿದೆ. ಕೆಲಸದ ಹೊರೆ ನಿರ್ವಹಣೆಗಾಗಿ ಪ್ರಮುಖ ಪಂದ್ಯಗಳಿಂದ ಕಮಿನ್ಸ್ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಆದರೆ ತಂಡ ಸಮಿತಿಯ ಈ ನಿರ್ಧಾರವನ್ನು ಬ್ರೆಟ್ ಲೀ ಪ್ರಶ್ನಿಸಿದ್ದಾರೆ.
'ಇದು ಬಹುಶಃ ಪ್ಯಾಟ್ ಕಮಿನ್ಸ್ ಕರೆಯಲ್ಲ. ಬಹುಶಃ ಕಮಿನ್ಸ್ ಮೂರನೇ ಪಂದ್ಯದಲ್ಲೂ ಆಡಲು ಬಯಸಿದ್ದರು ಅನ್ನಿಸುತ್ತೆ. ಯಾವುದೇ ಆಟಗಾರ ಎರಡು ಪಂದ್ಯಗಳಿಗೆ ಸುಸ್ತಾಗಲಾರ ಅನ್ನೋದು ನನಗೆ ಗೊತ್ತಿದೆ. ನಾನು ಹೆಚ್ಚು ಪಂದ್ಯಗಳನ್ನು ಆಡಿದಷ್ಟೂ ಒಳ್ಳೆಯ ತಾಳಕ್ಕೆ ಬರುತ್ತಿದ್ದುದನ್ನು ನಾನು ಗಮನಿಸಿದ್ದೇನೆ,' ಎಂದು ಲೀ ಹೇಳಿಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications