ಭಾರತದ ಯುವ ವೇಗದ ಬೌಲರ್ ಉಮ್ರಾನ್ ಮಲಿಕ್ ತನ್ನ ಘಾತಕ ವೇಗದ ಕಾರಣಕ್ಕೆ ಎಲ್ಲರ ಗಮನಸೆಳೆದಿರುವ ಆಟಗಾರ. ಐಪಿಎಲ್‌ನಲ್ಲಿ ಅದ್ಭುತ ಪ್ರದರ್ಶನದ ಮೂಲಕ ಮಿಂಚಿ ಸದ್ಯ ಭಾರತ ತಂಡದಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಆದರೆ ಈ ಯುವ ವೇಗಿಯ ಸಾಖಷ್ಟು ಪ್ರಮಾಣದಲ್ಲಿ ರನ್ ಬಿಟ್ಟುಕೊಡುತ್ತಿರುವುದು ಮ್ಯಾನೇಜ್‌ಮೆಂಟ್‌ನ ಚಿಂತೆಗೆ ಕಾರಣವಾಗಿದೆ.
ಈ ಹಿನ್ನೆಲೆಯಲ್ಲಿ ವೆಸ್‌ಟ ಇಂಡಿಒಸ್ ಕ್ರಿಕೆಟ್ ತಂಡದ ಮಾಜಿ ನಾಯಕ ದಿಗ್ಗಜ ಕ್ರಿಕೆಟಿಗ ಬ್ರಿಯಾನ್ ಲಾರಾ ಉಮ್ರಾನ್ ಮಲಿಕ್‌ಗೆ ಪ್ರಮುಖ ಸಲಹೆಯೊಂದನ್ನು ನೀಡಿದ್ದಾರೆ. 23ರ ಹರೆಯದ ವೇಗಿ ಉಮ್ರಾನ್ ಮಲಿಕ್ ಅವರ ಬೌಲಿಂಗ್‌ನಲ್ಲಿ ವೇಗ ಮಾತ್ರವೇ ಅಸ್ತ್ರವಾಗಬಾರದು ಎಂದು ಸಲಹೆ ನೀಡಿದ್ದಾರೆ ಬ್ರಿಯಾನ್ ಲಾರಾ. ಅಲ್ಲದೆ ಅತ್ಯುತ್ತಮ ಬೌಲರ್‌ಗಳು ಹೇಗೆ ಬೆಳವಣಿಗೆ ಸಾಧಿಸುತ್ತಾ ಸಾಗಿದರು ಎನ್ನುವುದನ್ನು ಅವರುಗಳಿಂದಲೇ ಕಲಿಯುತ್ತಾ ಮುಂದುವರಿಯಬೇಕು ಎಂದಿದ್ದಾರೆ ಲಾರಾ.

ಕಳೆದ ಎರಡು ವರ್ಷಗಳಲ್ಲಿ ಐಪಿಎಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದ ಕೋಚಿಂಗ್ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸಿರುವ ಬ್ರಿಯಾನ್ ಲಾರಾ ವೇಗಿ ಉಮ್ರಾನ್ ನಲಿಕ್ ಜೊತೆಗೆ ಅಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ಹೀಗಾಗಿ ಉಮ್ರಾನ್ ಬೆಳವಣಿಗೆಯನ್ನು ಕಳೆದ ಎರಡು ವರ್ಷಗಳಲ್ಲಿ ಹತ್ತಿರದಿಂದ ನೋಡಿದ್ದಾರೆ ಲಾರಾ. 2021ರಲ್ಲಿ ಐಪಿಎಲ್‌ಗೆ ಪದಾರ್ಪಣೆ ಮಾಡಿದ ಲಾರಾ, 2022ರ ಐಪಿಎಲ್‌ನಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿ ಗಮನಸೆಳೆದಿದ್ದರು. 14 ಪಂದ್ಯಗಳಲ್ಲಿ 22ವಿಕೆಟ್‌ಗಳನ್ನು ಕಬಳಿಸಿದ್ದರು ಉಮ್ರಾನ್.
ರಾಷ್ಟ್ರೀಯ ತಂಡದಲ್ಲಿ ಅವಕಾಶ ದೊರೆತರೂ ಅದನ್ನು ನಿರೀಕ್ಷಿತ ಮಟ್ಟದಲ್ಲಿ ಬಳಸಿಕೊಳ್ಳಲು ಉಮ್ರಾನ್ ಮಲಿಕ್ ವಿಫಲವಾಗಿದ್ದಾರೆ. ಅದರಲ್ಲೂ ಅವರ ಏಕದಿನ ಕ್ರಿಕೆಟ್‌ನಲ್ಲಿ ಅವರು ತಂಡದಲ್ಲಿ ಸ್ಥಾನ ಭದ್ರಪಡಿಸಿಕೊಳ್ಳಲು ಕೂಡ ವಿಫಲವಾಗಿದ್ದಾರೆ. 2023ರಲ್ಲಿ ನಡೆದ ಸರಣಿಗಳ ಪೈಕಿ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗೂ ಮುನ್ನ ಅವರು ಮೂರು ಏಕದಿನ ಪಂದ್ಯಗಳಲ್ಲಿ ಆಡಿದ್ದರು. ಅದೆಲ್ಲವೂ ಕಳೆದ ಜನವರಿ ತಿಂಗಳಿನಲ್ಲಿ. ಆದರೆ ಅದಾದ ಬಳಿಕ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ಅವರಿಗೆ ಒಂದು ಪಂದ್ಯದಲ್ಲಿಯೂ ಆಡುವ ಅವಕಾಶ ದೊರೆತಿರಲಿಲ್ಲ.
2023ರ ಜುಲೈನಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯ ಮೂಲಕ ಅವರು ಮತ್ತೆ ತಂಡಕ್ಕೆ ಮರಳಿದರು. ಆದರೆ ಈ ಸರಣಿಯಲ್ಲಿಯೂ ಅವರ ಪ್ರದರ್ಶನ ಸಾಧಾರಣವಾಗಿತ್ತು. ಶ್ರೀಲಂಕಾ ವಿರುದ್ಧ ಆಡಿದ್ದ ಎರಡು ಪಂದ್ಯಗಳಲ್ಲಿ ಉಮ್ರಾನ್ ಐದು ವಿಕೆಟ್ ಪಡೆದಿದ್ದರೆ ನಂತರ ನ್ಯೂಜಿಲೆಂಡ್ ವಿರುದ್ಧ ಆಡಿದ್ದ ಏಕೈಕ ಪಂದ್ಯದಲ್ಲಿ ಒಂದು ವಿಕೆಟ್ ಸಂಪಾದಿಸಿದ್ದರು. ಆದರೆ ವೆಸ್ಟ್ ಇಂಡಿಸ್ ವಿರುದ್ಧದ ಸರಣಿಯಲ್ಲಿ ಅವರ ಸಾಮರ್ಥ್ಯಕ್ಕಿಂತ ಕಳಪೆ ಬೌಲಿಂಗ್ ಪ್ರದರ್ಶಿಸಿದ್ದರು. ಮೊದಲ ಪಂದ್ಯದಲ್ಲಿ ಕೇವಲ ಮೂರು ಓವರ್‌ಗಳ ಬೌಲಿಂಗ್‌ನಲ್ಲಿ 17 ರನ್‌ಗಳನ್ನು ನೀಡಿ ವಿಕೆಟ್ ಪಡೆದುಕೊಂಡಿರಲಿಲ್ಲ. ಹೀಗಾಘಿ ಉಮ್ರಾನ್ ಬೌಲಿಂಗ್ ಬಗ್ಗೆ ಕಳವಳ ಮೂಡಿಸುವಂತೆ ಮಾಡಿದೆ.
ಆತನೋರ್ವ ಸೆನ್ಸೇಶನಲ್ ಆಟಗಾರ. ಆದರೆ ಆದಷ್ಟು ಬೇಗನೆ ಆತ ಅರ್ಥ ಮಾಡಿಕೊಳ್ಳಬೇಕಿರುವುದು ಏನೆಂದರೆ ವೇಗದ ಬೌಲಿಂಗ್ ವಿಶ್ವದ ಅತ್ಯುತ್ತಮ ಬ್ಯಾಟರ್‌ಗಳಿಗೆ ಹಾನಿಯುಂಟು ಮಾಡಲಾರದು. ನಿಮಮ್ಮ ಬೌಲಿಂಗ್‌ನಲ್ಲಿ ವಿಶೇಷವಾಗಿರುವುದನ್ನು ಮಾಡುವ ಸಾಮರ್ಥ್ಯವನ್ನು ನೀವು ಹೊಂದಿರಬೇಕಾಗುತ್ತದೆ. ಯಾವಾಗ ಯಾವ ರೀತಿಯಲ್ಲಿ ಬೌಲಿಂಗ್ ನಡೆಸಬೇಕು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಆತ ಇನ್ನೂ ಕಿರಿಯ ವಯಸ್ಸಿನವನಾಗಿರುವ ಕಾರಣ ಆತನಿಗೆ ಸಾಕಷ್ಟು ಸಮಯಾವಕಾಶವಿದೆ" ಎಂದಿದ್ದಾರೆ ಬ್ರಿಯಾನ್ ಲಾರಾ.