For Quick Alerts
ALLOW NOTIFICATIONS  
For Daily Alerts
 

ಆರ್‌ಸಿಬಿಗಾಗಿ ಕಪ್ ಗೆಲ್ಲು ಎಂದು ಕೊಹ್ಲಿ ಬರ್ತ್‌ಡೇಗೆ ಶುಭ ಹಾರೈಸಿದ ಆಪ್ತ ಗೆಳೆಯ

Bring It Home For RCB: Chris Gayles Birthday Wish For Virat Kohli

ಟೀಮ್ ಇಂಡಿಯಾ ಹಾಗೂ ಆರ್‌ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿ ಇಂದು 32ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ವಿರಾಟ್ ಕೊಹ್ಲಿಯ ಈ ವಿಶೇಷ ದಿನದಂದು ಲಕ್ಷಂತರ ಶಭಾಶಯಗಳು ಹರಿದುಬಂದಿದೆ. ಅನೇಕ ದಿಗ್ಗಜ ಕ್ರಿಕೆಟಿಗರು ಕೂಡ ಕೊಹ್ಲಿಗೆ ಹಾರೈಸಿದ್ದಾರೆ.

ಆರ್‌ಸಿಬಿ ತಂಡದ ಮಾಜಿ ಆಟಗಾರ ಟಿ20 ಕ್ರಿಕೆಟ್‌ನ ದಿಗ್ಗಜ ಕ್ರಿಸ್ ಗೇಲ್ ಕೂಡ ಹಳೇಯ ಗೆಳೆಯನಿಗೆ ಶುಭ ಹಾರೈಸಿದ್ದಾರೆ. ಈ ಶುಭಾಶಯದ ಜೊತೆಗೆ ಐಪಿಎಲ್ ಟ್ರೋಫಿ ಗೆದ್ದು ಮನೆಗೆ ತೆಗೆದುಕೊಂಡು ಹೋಗಲು ಕ್ರಿಸ್ ಗೇಲ್ ಹಾರೈಸಿದ್ದಾರೆ.

ಟ್ವಿಟ್ಟರ್‌ನಲ್ಲಿ ಗೇಲ್ " ಹುಟ್ಟುಹಬ್ಬದ ಶುಭಾಶಯಗಳು ಲೆಜೆಂಡ್, ವಿಷ್ ಯು ಮೆನಿ ಮೋರ್ ಕಾಕಾ, ಆರ್‌ಸಿಬಿಗಾಗಿ ಕಪ್‌ಅನ್ನು ಜಯಸಿಕೊಂಡು ಹೋಗು" ಎಂದು ಕ್ರಿಸ್ ಗೇಲ್ ಮನಸಾರೆ ಹಾರೈಸಿ ಟ್ವೀಟ್ ಮಾಡಿದ್ದಾರೆ. ಈ ಟ್ವಿಟ್‌ಗೆ ಸಾಕಷ್ಟು ಪ್ರತಿಕ್ರಿಯೆಗಳು ಹರಿದುಬರುತ್ತಿದೆ.

ಐಪಿಎಲ್‌ನಲ್ಲಿ ಕ್ರಿಸ್ ಗೇಲ್ ಹಾಗೂ ವಿರಾಟ್ ಕೊಹ್ಲಿ ಸುದೀರ್ಘಕಾಲ ಆರ್‌ಸಿಬಿ ತಂಡದ ಪರವಾಗಿ ಕಣಕ್ಕಿಳಿದಿದ್ದಾರೆ. ಆದರೆ 2018ರ ಐಪಿಎಲ್ ಬಳಿಕ ಗೇಲ್ ಆರ್‌ಸಿಬಿ ತಂಡದಿಂದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಪಾಲಾಗಿದ್ದರು. ಈ ಬಾರಿಯ ಐಪಿಎಲ್‌ನಲ್ಲೂ ಗೇಲ್ ಪಂಜಾಬ್ ತಂಡದ ಪರವಾಗಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ.

ಕ್ರಿಸ್ ಗೇಲ್ ಪ್ರತಿನಿಧಿಸುವ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಈ ಬಾರಿಯ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದರೂ ಪ್ಲೇಆಫ್ ಪ್ರವೇಶಿಸುವಲ್ಲಿ ವಿಫಲವಾಗಿದೆ. ಹೀಗಾಗಿ ಲೀಗ್‌ಹಂತದಿಂದಲೇ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಹೊರಬಿದ್ದಿದೆ.

Story first published: Thursday, November 5, 2020, 17:24 [IST]
Other articles published on Nov 5, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+