ಟಿ20 ಇತಿಹಾಸದಲ್ಲೆ ಕೆಟ್ಟ ದಾಖಲೆ ಬರೆದ ಡಿ ವಿಲಿಯರ್ಸ್ ತಂಡ: ವೀಡಿಯೋ

ಬ್ರಿಸ್ಬೇನ್, ಜನವರಿ 20: ಈ ವರ್ಷದ ಬಿಗ್ ಬ್ಯಾಷ್ ಲೀಗ್‌ನ ಟಾಪ್ ತಂಡಗಳಲ್ಲಿ ಗುರುತಿಸಿಕೊಂಡ ತಂಡ ಬ್ರಿಸ್ಬೇನ್ ಹೀಟ್. ಆದರೆ ಇದೇ ತಂಡ ಟಿ20 ಕ್ರಿಕೆಟ್‌ನ ಇತಿಹಾಸದಲ್ಲೇ ಕೆಟ್ಟ ದಾಖಲೆಯೊಂದನ್ನು ನಿರ್ಮಿಸಿದೆ. ಅತೀ ಕಡಿಮೆ ರನ್‌ಗೆ ಎಲ್ಲಾ ಹತ್ತು ವಿಕೆಟ್‌ಗಳನ್ನು ಬಲಿಕೊಟ್ಟ ತಂಡವಾಗಿ ಬ್ರಿಸ್ಬೇನ್ ಹೀಟ್ ಗುರುತಿಸಿಕೊಂಡಿದೆ.
ಬ್ರಿಸ್ಬೇನ್‌ನ ದ ಗಬ್ಬಾದಲ್ಲಿ ಭಾನುವಾರ (ಜನವರಿ 19) ನಡೆದ ಬ್ರಿಸ್ಬೇನ್ ಹೀಟ್-ಮೆಲ್ಬರ್ನ್ ರೆನೆಗೇಡ್ಸ್ ನಡುವಿನ ಪಂದ್ಯದಲ್ಲಿ ಇಂಥದ್ದೊಂದು ಕೆಟ್ಟ ದಾಖಲೆ ನಿರ್ಮಾಣವಾಗಿದೆ. ಕ್ರಿಸ್ ಲಿನ್ (41 ರನ್), ಎಬಿ ಡಿವಿಲಿಯರ್ಸ್‌ನಂತ (2 ರನ್) ಬಲಿಷ್ಠರಿರುವ ಬ್ರಿಸ್ಬೇನ್ ಹೀಟ್, ಗೆಲ್ಲಬೇಕಿದ್ದ ಪಂದ್ಯದಲ್ಲಿ ಹೀನಾಯ ಸೋಲು ಕಂಡು ಮುಖಭಂಗ ಅನುಭವಿಸಿದೆ.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಮೆಲ್ಬರ್ನ್ ರೆನೆಗೇಡ್ಸ್, 20 ಓವರ್‌ಗೆ 6 ವಿಕೆಟ್ ಕಳೆದು 164 ರನ್ ಮಾಡಿತ್ತು. ಗುರಿ ಬೆನ್ನಟ್ಟಿದ್ದ ಬ್ರಿಸ್ಬೇನ್ ಹೀಟ್, ಸ್ಯಾಮ್ ಹೀಜ್ಲೆಟ್ ಸ್ಫೋಟಕ ಅರ್ಧ ಶತಕದೊಂದಿಗೆ (37 ಎಸೆತಕ್ಕೆ 56 ರನ್) ಪವರ್ ಪ್ಲೇನಲ್ಲಿ ವಿಕೆಟ್ ನಷ್ಟವಿಲ್ಲದೆ 84 ರನ್ ಕಲೆ ಹಾಕಿತ್ತು.
6ನೇ ಓವರ್‌ನ ಕೊನೆ ಎಸೆತದಿಂದ ಅಂದರೆ 5.6ನೇ ಓವರ್‌ನಿಂದ ಬ್ರಿಸ್ಬೇನ್ ಹೀಟ್ ವಿಕೆಟ್‌ಗಳು ಉರುಳಲಾರಂಭಿಸಿತು. 14.6ನೇ ಓವರ್ ವೇಳೆಗೆ ಬ್ರಿಸ್ಬೇನ್ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡಿತ್ತು, ಅಂದರೆ ಕೇವಲ 36 ರನ್‌ಗೆ ಬ್ರಿಸ್ಬೇನ್‌ನ ಎಲ್ಲಾ 10 ವಿಕೆಟ್ ಪತನವಾಗಿದ್ದವು. 15 ಓವರ್‌ಗೆ ಸರ್ವ ತಪನ ಕಂಡು ಬ್ರಿಸ್ಬೇನ್ ಕೇವಲ 120 ರನ್ ಗಳಿಸಿ 44 ರನ್‌ನಿಂದ ತಲೆಬಾಗಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications