ಭಾರತ vs ಇಂಗ್ಲೆಂಡ್ ಮಹಿಳೆಯರ ಟೆಸ್ಟ್: ಡ್ರಾ ಮಾಡಿಕೊಳ್ಳಲು ಯಶಸ್ವಿಯಾದ ಭಾರತೀಯ ವನಿತೆಯರು

ಇಂಗ್ಲೆಂಡ್‌ನಲ್ಲಿ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮಹಿಳೆಯರ ಟೆಸ್ಟ್ ಪಂದ್ಯ ಡ್ರಾ ದಲ್ಲಿ ಅಂತ್ಯವಾಗಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಹಠಾತ್ ಕುಸಿತದ ಕಾರಣದಿಂದ ಫಾಲೋಆನ್‌ಗೆ ಒಳಗಾದ ಭಾರತ ಎರಡನೇ ಇನ್ನಿಂಗ್ಸ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗುವ ಮೂಲಕ ಪಂದ್ಯವನ್ನು ಡ್ರಾ ಮಾಡಿಕೊಂಡಿದೆ.
ಮೊದಲ ಇನ್ನಿಂಗ್ಸ್‌ನಲ್ಲಿ ಆರಂಭಿಕ ಜೋಡಿಯಾದ ಶಫಾಲಿ ವರ್ಮಾ ಹಾಗೂ ಸ್ಮೃತಿ ಮಂಧಾನ 167 ರನ್‌ಗಳ ಬೃಹತ್ ಜೊತೆಯಾಟದ ನಂತರ ವೂ ಭಾರತ ಫಾಲೋಆನ್‌ಗೆ ತುತ್ತಾಗಿತ್ತು. ಶಫಾಲಿ 96 ಹಾಗೂ ಸ್ಮೃತಿ 78 ರನ್‌ಗಳಿಸಿ ಔಟಾದ ಬಳಿಕ ಮೊದಲ ಇನ್ನಿಂಗ್ಸ್‌ನಲ್ಲಿ ಉಳಿದ ಆಟಗಾರ್ತಿಯರು ನೀರಸ ಪ್ರದರ್ಶನ ನೀಡಿದ್ದರು. ಹೀಗಾಗಿ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 231 ರನ್‌ಗಳಿಗೆ ಆಲೌಟ್ ಆಗಿತ್ತು.
163 ರನ್‌ಗಳ ಮೊದಲ ಇನ್ನಿಂಗ್ಸ್ ಮುನ್ನಡೆಯನ್ನು ಪಡೆದ ಇಂಗ್ಲೆಂಡ್ ಭಾರತಕ್ಕೆ ಫಾಲೋಆನ್ ಹೇರಿದ ಪರಿಣಾಮವಾಗಿ ಭಾರತ ಮತ್ತೆ ಬ್ಯಾಟಿಂಗ್‌ಗೆ ಇಳಿಯಿತು. ಆರಂಭೀಕ ಆಟಗಾರ್ತಿ ಸ್ಮೃತಿ ಮಂದಾನ ಬೇಗನೆ ವಿಕೆಟ್ ಕಳೆದುಕೊಂಡರಾದರೂ ಶೆಫಾಲಿ ವರ್ಮ ಹಾಗೂ ದೀಪ್ತಿ ಶರ್ಮಾ ಉತ್ತಮ ಪ್ರದರ್ಶನ ನೀಡಿದರು.
ಶಫಾಲಿ ವರ್ಮಾ ಎರಡನೇ ಇನ್ನಿಂಗ್ಸ್‌ನಲ್ಲಿಯೂ ಅರ್ಧಶತಕಗಳಿಸಿ ಮಿಂಚಿದರು. 63 ರನ್‌ಗಳಿಸಿ ಶಫಾಲಿ ಔಟಾದರೆ ದೀಪ್ತಿ ಶರ್ಮಾ 54 ರನ್‌ಗಳಿಸಿದರು. ಉಳಿದಂತೆ ಮಧ್ಯಮ ಕ್ರಮಾಂಕದಲ್ಲಿ ಪೂನಮ್ ರಾವತ್ ಹೊರತು ಪಡಿಸಿ ಉತ್ತಮ ಸಾಥ್ ದೊರೆಯಲಿಲ್ಲ. ಹೀಗಾಗಿ ಭಾರತ ಮಹಿಳಾ ತಂಡ ಸೋಲಿನತ್ತ ಮುಖಮಾಡಿತ್ತು. 171 ರನ್‌ಗೆ 3ನೇ ವಿಕೆಟ್ ಕಳೆದುಕೊಂಡಿದ್ದ ಭಾರತ 189 ರನ್‌ಗಳಿಸುವಷ್ಟರಲ್ಲಿ 6ನೇ ವಿಕೆಟ್ ಕಳೆದುಕೊಂಡಿತ್ತು. ನಾಯಕಿ ಮಿಥಾಲಿ ರಾಜ್, ಹರ್ಮನ್‌ಪ್ರೀತ್ ಕೌರ್ ಒಂದಂಕಿಗೆ ವಿಕೆಟ್ ಕಳೆದುಕೊಂಡರೆ ಪೂಜಾ ವಸ್ತ್ರಾಕರ್ 12 ರನ್‌ಗಳಿಗೆ ಔಟಾದರು.
ಆದರೆ ಅಂತಿಮ ಹಂತದಲ್ಲಿ ಸ್ನೇಹಾ ರಾಣಾ ಹಾಗೂ ತಾನಿಯಾ ಭಾಟಿಯಾ ಇಂಗ್ಲೆಂಡ್ ಬೌಲಿಂಗ್ ದಾಳಿಯನ್ನು ಅದ್ಭುತವಾಗಿ ಎದುರಿಸಿದರು. ಮುರಿಯದ 9ನೇ ವಿಕೆಟ್‌ಗೆ ಈ ಜೋಡಿ ಶತಕದ ಜೊತೆಯಾಟವನ್ನು ನೀಡಿತು. ಸ್ನೇಹಾ ರಾಣಾ ಅಜೇಯ 80 ರನ್‌ಗಳಿಸಿ ಮಿಂಚಿದರೆ ತಾನಿಯಾ ಭಾಟಿಯಾ ಔಟಾಗದೆ 44 ರನ್‌ಗಳಿಸಿದರು. ಎರಡನೇ ಇನ್ನಿಂಗ್ಸ್‌ನಲ್ಲಿ ಭಾರತ 8 ವಿಕೆಟ್ ಕಳೆದುಕೊಂಡು 344 ರನ್‌ಗಳಿಸಿತು. ಈ ಮೂಲಕ ನಾಲ್ಕು ದಿನಗಳ ಟೆಸ್ಟ್ ಡ್ರಾದಲ್ಲಿ ಅಂತ್ಯವಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications