For Quick Alerts
ALLOW NOTIFICATIONS  
For Daily Alerts
 

ಚೆನ್ನೈ ಪಿಚ್‌ ಬಗ್ಗೆ ಸಮರ್ಥನೆ ಮಾಡಿದ ಇಂಗ್ಲೆಂಡ್ ವೇಗಿ ಸ್ಟುವರ್ಟ್ ಬ್ರಾಡ್

Broad defends Chennai pitch: Why wouldn’t India play on pitches that turn square

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ ಮೊದಲೆರಡು ಪಂದ್ಯಗಳು ಚೆನ್ನೈನಲ್ಲಿ ಮುಕ್ತಾಯವಾಗಿದ್ದು ಈಗ ಎರಡು ತಂಡಗಳು ಅಹ್ಮದಾಬಾದ್‌ನಲ್ಲಿ ನಡೆಯುವ ಮೂರನೇ ಪಂದ್ಯಕ್ಕೆ ಸಜ್ಜಾಗಿದೆ. ಆದರೆ ಈ ಸಂದರ್ಭದಲ್ಲಿ ಎರಡನೇ ಟೆಸ್ಟ್‌ನ ಪಿಚ್‌ ವಿಚಾರವಾಗಿ ಭಾರತವನ್ನು ಸಮರ್ಥನೆ ಮಾಡಿಕೊಂಡಿದ್ದಾರೆ. ಎರಡನೇ ಪಂದ್ಯದ ಪಿಚ್‌ ಬಗ್ಗೆ ಭಾರತವನ್ನು ಟೀಕಿಸಲಾರೆ ಎಂದಿದ್ದಾರೆ ಸ್ಟುವರ್ಟ್ ಬ್ರಾಡ್.

ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಮ್‌ನಲ್ಲಿ ನಡೆದ ಎರಡನೇ ಪಂದ್ಯದ ಆರಂಭದ ದಿನದಿಂದಲೂ ಹೆಚ್ಚಾಗಿ ತಿರುವು ಪಡೆದುಕೊಂಡಿತ್ತು. ಹೀಗಾಗಿ ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳು ಹೆಚ್ಚು ಕಾಲ ಕ್ರೀಸ್‌ನಲ್ಲಿ ನಿಲ್ಲಲು ವಿಫಲರಾಗಿದ್ದರು. ಈ ವಿಚಾರವಾಗಿ ಇಂಗ್ಲೆಂಡ್‌ನ ಕೆಲ ಮಾಜಿ ಆಟಗಾರರು ಪಿಚ್ ಬಗ್ಗೆ ಟೀಕೆಯನ್ನು ವ್ಯಕ್ತಪಡಿಸಿದ್ದರು.

ಆದರೆ ಎರಡನೇ ಟೆಸ್ಟ್‌ನಲ್ಲಿ ಇಂಗ್ಲೆಂಡ್ ತಂಡವನ್ನು ಪ್ರತಿನಿಧಿಸಿದ್ದ ಸ್ಟುವರ್ಟ್ ಬ್ರಾಡ್ ಇಂತಾ ಪಿಚ್‌ಗಳಲ್ಲಿ ಉತ್ತಮ ಪ್ರದರ್ಶನ ನೀಡಬೇಕಾದರೆ ನಾನು ಇನ್ನಷ್ಟು ಶ್ರಮವಹಿಸಬೇಕಿದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಜೊತೆಗೆ ಅನಿಲ್ ಕುಂಬ್ಳೆ ಜೊತೆಗೆ ಮಾತುಕತೆ ನಡೆಸದ ನಂತರ ನನಗೆ ಪಿಚ್‌ನ ಬಗ್ಗೆ ಅನುಭವವಾಯಿತು ಎಂದಿದ್ದಾರೆ ಸ್ಟುವರ್ಟ್ ಬ್ರಾಡ್.

"ನಮ್ಮ ದೃಷ್ಟಕೋನದಿಂದ ಎರಡನೇ ಟೆಸ್ಟ್‌ನ ಪಿಚ್‌ ಬಗ್ಗೆ ಯಾವುದೇ ರೀತಿಯಲ್ಲೂ ಟೀಕೆಗಳು ಇಲ್ಲ. ಇದಕ್ಕೇ ತವರಿನ ಲಾಭ ಎನ್ನುತ್ತೇವೆ. ನಿಮ್ಮ ಸೀಮಿತ ಅವಕಾಶದಲ್ಲಿ ಅದನ್ನು ಸಮರ್ಥವಾಗಿ ಉಪಯೋಗಿಸಿಕೊಂಡಿದ್ದೀರಿ. ಭಾರತವೂ ಈ ರೀತಿ ತಿರುವು ಪಡೆಯುವ ಪಿಚ್‌ನಲ್ಲಿ ಆಡುವುದಿಲ್ಲವೇ? ಆ ಪಿಚ್‌ನಲ್ಲಿ ಅವರು ನಮಗಿಂತ ಉತ್ತಮ ಆಟವನ್ನು ಆಡಿದರು ಆದರೆ ಅಂತಾ ಪಿಚ್‌ಗಳು ನಮಗೆ ಕಠಿಣವಾಗಿತ್ತು" ಎಂದು ಡೈಲಿ ಮೇಲ್‌ಗೆ ಬರೆದ ಕಾಲಂನಲ್ಲಿ ಸ್ಟುವರ್ಟ್ ಬ್ರಾಡ್ ಪ್ರತಿಕ್ರಿಯಿಸಿದ್ದಾರೆ.

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್ ಪಂದ್ಯ ಅಹ್ಮದಾಬಾದ್‌ನಲ್ಲಿ ಡೇ ನೈಟ್ ಪಂದ್ಯವಾಗಿ ನಡೆಯಲಿದೆ. ಪಿಂಕ್ ಬಾಲ್‌ನಲ್ಲಿ ನಡೆಯುವ ಪಂದ್ಯವಾಗಿರುವ ಕಾರಣ ಈ ಪಂದ್ಯದಲ್ಲಿ ಇಂಗ್ಲೆಂಡ್ ವೇಗಿಗಳು ಮೇಲುಗೈ ಸಾಧಿಸಬಹುದು ಎಂಬ ಅಭಿಪ್ರಾಯಗಳನ್ನು ತಜ್ಞರು ವ್ಯಕ್ತಪಡಿಸುತ್ತಿದ್ದಾರೆ.

Story first published: Sunday, February 21, 2021, 16:18 [IST]
Other articles published on Feb 21, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+