For Quick Alerts
ALLOW NOTIFICATIONS  
For Daily Alerts
 

Duleep Trophy: ಒಂದೇ ತಂಡದ ಪರ ಆಡಲಿದ್ದಾರೆ ಖಾನ್‌ ಬ್ರದರ್ಸ್‌

ದೇಶೀಯ ಟೂರ್ನಿ ದುಲೀಪ್‌ ಟ್ರೋಫಿಗೆ ಬುಧವಾರ ತಂಡವನ್ನು ಪ್ರಕಟಿಸಲಾಗಿದೆ. ಟೀಮ್ ಇಂಡಿಯಾದ ಸ್ಟಾರ್‌ ಆಟಗಾರರು ಈ ಟೂರ್ನಿಯಲ್ಲಿ ಆಡಲಿದ್ದಾರೆ. ಆದರೆ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಈ ವೇಳೆ ಮೈದಾನದಲ್ಲಿ ಕಾಣಿಸಿಕೊಳ್ಳುವುದಿಲ್ಲ. ಹಿರಿಯ ಆಟಗಾರರು ವಿಶ್ರಾಂತಿಯಲ್ಲಿ ಇದ್ದಾರೆ. ಮುಂದಿನ ತಿಂಗಳು 19 ರಂದು ಬಾಂಗ್ಲಾದೇಶದ ವಿರುದ್ಧ ಟೆಸ್ಟ್‌ ಸರಣಿ ನಡೆಯಲಿದೆ.

ದುಲೀಪ್‌ ಟ್ರೋಫಿ ಕ್ರಿಕೆಟ್‌ ಟೂರ್ನಿಯಲ್ಲಿ ಬಹುತೇಕ ಟೀಮ್ ಇಂಡಿಯಾ ಆಟಗಾರರು ಸ್ಥಾನ ಪಡೆದಿದ್ದಾರೆ. ಈ ಮೂಲಕ ಬಾಂಗ್ಲಾದೇಶ ವಿರುದ್ಧದ ಸರಣಿಗೂ ಮುನ್ನ ಭರ್ಜರಿ ಅಭ್ಯಾಸ ನಡೆಸಲಿದ್ದಾರೆ. ಈ ಸರಣಿಯಲ್ಲಿ ಆಡಲು ಇಬ್ಬರು ಸಹದೋರರಿಗೆ ಒಂದೇ ತಂಡದಲ್ಲಿ ಅವಕಾಶ ಸಿಕ್ಕಿದೆ.

Brothers Sarfaraz Khan and Musheer Khan Set to Play Together in Duleep Trophy

ದುಲೀಪ್‌ ಟ್ರೋಫಿಯಲ್ಲಿ ತಮ್ಮ ಕಮಾಲ್ ಪ್ರದರ್ಶನ ನೀಡಲು ಖಾನ್‌ ಬ್ರದರ್ಸ್‌ಗೆ ಸ್ಥಾನ ನೀಡಲಾಗಿದೆ. ಇಬ್ಬರೂ ಸಹೋದರರು ದೇಶೀಯ ಟೂರ್ನಿಯಲ್ಲಿ ಮಿಂಚಲು ರೆಡಿಯಾಗಿದ್ದಾರೆ. ಈ ಸಹದೋರರಿಬ್ಬರು ಭಾರತ ಬಿ ತಂಡದ ಪರ ಆಡಲು ಸಿದ್ಧರಾಗಿದ್ದಾರೆ. ಅವರೇ ಸರ್ಫರಾಜ್‌ ಖಾನ್ ಹಾಗೂ ಮುಶೀರ್‌ ಖಾನ್‌.

ಇಬ್ಬರೂ ಆಟಗಾರರು ಚಿಕ್ಕ ವಯಸ್ಸಿನಲ್ಲಿ ಅಮೋಘ ಸಾಧನೆ ಮಾಡಿರುವ ಹಿರಿಮೆ ಹೊಂದಿದ್ದಾರೆ. ತಮ್ಮ ಅಂಡರ್‌ 19 ವಿಶ್ವಕಪ್‌ನಲ್ಲಿ ಅಮೋಘ ಪ್ರದರ್ಶನ ನೀಡಿದರೆ, ಅಣ್ಣ ತವರಿನಲ್ಲಿ ನಡೆದಿದ್ದ ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ ಸ್ಥಿರ ಬ್ಯಾಟಿಂಗ್ ಪ್ರದರ್ಶನ ನೀಡಿ ಎಲ್ಲರ ಗಮನ ಸೆಳೆದಿದ್ದಾರೆ. ಈ ಇಬ್ಬರೂ ಆಟಗಾರರು ಅಭಿಮನ್ಯೂ ಈಶ್ವರನ್‌ ಅವರ ನಾಯಕತ್ವದಲ್ಲಿ ಆಡಲಿದ್ದಾರೆ.

ಸರ್ಫರಾಜ್‌ ಖಾನ್‌

ದೇಶೀಯ ಟೂರ್ನಿಯಲ್ಲಿ ತಮ್ಮ ಧಮಾಕೆದಾರ್ ಬ್ಯಾಟಿಂಗ್ ಮಾಡಿರುವ ಸರ್ಫರಾಜ್‌ ಖಾನ್‌ ಕೊನೆಗೂ ಭಾರತ ತಂಡದ ಪರ ಆಡುವ ಆಸೆಯನ್ನು ಈಡೇರಿಸಿಕೊಂಡರು. ಸಿಕ್ಕ ಅವಕಾಶದಲ್ಲಿ ಹೇಗೆ ಆಡಬೇಕು ಎಂಬ ಕಲೆಯನ್ನು ಕರಗತ ಮಾಡಿಕೊಂಡಿರುವ ಸರ್ಫರಾಜ್‌ ಇಂಗ್ಲೆಂಡ್ ವಿರುದ್ಧ ಸ್ಥಿರ ಪ್ರದರ್ಶನ ನೀಡಿ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡಿದ್ದರು. ಇಂಗ್ಲೆಂಡ್‌ ವಿರುದ್ಧ ಮೂರು ಟೆಸ್ಟ್‌ ಪಂದ್ಯಗಳನ್ನು ಆಡಿರುವ ಸರ್ಫರಾಜ್‌ 50 ರ ಸರಾಸರಿಯಲ್ಲಿ 200 ರನ್‌ ಕಲೆ ಹಾಕಿದ್ದಾರೆ. ಇದರಲ್ಲಿ ಮೂರು ಅರ್ಧಶತಕಗಳು ಸೇರಿವೆ.

Brothers Sarfaraz Khan and Musheer Khan Set to Play Together in Duleep Trophy

ಅಂಡರ್‌ 19 ವಿಶ್ವಕಪ್‌ನಲ್ಲಿ ಮಿಂಚು

ಮುಶೀರ್‌ ಖಾನ್‌ ಅಂಡರ್‌ 19 ವಿಶ್ವಕಪ್‌ನಲ್ಲಿ ಅಬ್ಬರದ ಪ್ರದರ್ಶನ ನೀಡಿದ್ದಾರೆ. ಇವರು ಆಡಿದ 7 ಪಂದ್ಯಗಳಲ್ಲಿ 60 ರ ಸರಾಸರಿಯಲ್ಲಿ 360 ರನ್‌ ಸಿಡಿಸಿದ್ದಾರೆ. ಈ ವೇಳೆ ಅವರ ಸ್ಟ್ರೈಕ್‌ ರೇಟ್‌ 98.09 ಆಗಿದೆ. ಈ ಟೂರ್ನಿಯಲ್ಲಿ ಮುಶೀರ್‌ 2 ಶತಕ ಹಾಗೂ 1 ಅರ್ಧಶತಕ ಸಿಡಿಸಿದ್ದಾರೆ. ಈ ಮೂಲಕ ಮುಶೀರ್‌ ಎಲ್ಲರ ಗಮನ ಸೆಳೆದಿದ್ದರು. ಇವರು ದೇಶೀಯ ಟೂರ್ನಿಯಲ್ಲೂ ಸ್ಥಿರ ಪ್ರದರ್ಶನ ನೀಡಿದ್ದಾರೆ.

ಭಾರತ-ಬಿ ತಂಡ

ಅಭಿಮನ್ಯು ಈಶ್ವರನ್ (ನಾಯಕ), ಯಶಸ್ವಿ ಜೈಸ್ವಾಲ್, ಸರ್ಫರಾಜ್ ಖಾನ್, ರಿಷಭ್ ಪಂತ್, ಮುಶೀರ್ ಖಾನ್, ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್, ರವೀಂದ್ರ ಜಡೇಜಾ, ಮೊಹಮ್ಮದ್ ಸಿರಾಜ್, ಯಶ್ ದಯಾಳ್, ಮುಖೇಶ್ ಕುಮಾರ್, ರಾಹುಲ್ ಚಾಹರ್, ಆರ್ ಸಾಯಿ ಕಿಶೋರ್, ಮೋಹಿತ್ ಅವಸ್ತಿ, ಎನ್ ಜಗದೀಶ್ವರ (ವಿಕೆಟ್ ಕೀಪರ್)

Story first published: Thursday, August 15, 2024, 8:38 [IST]
Other articles published on Aug 15, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+