ಶನಿವಾರ ನಿರ್ಮಲಾ ಸೀತಾರಾಮನ್ ಅವರು ಕೇಂದ್ರ ಬಜೆಟ್ ಮಂಡಿಸಿದರು. ಈ ಬಜೆಟ್ ಮೇಲೆ ಎಲ್ಲರ ಕಣ್ಣುಗಳು ನೆಟ್ಟಿದ್ದವು. ಈ ವೇಳೆ ಹಣಕಾಸು ಸಚಿವರು ಹಲವು ದೊಡ್ಡ ಘೋಷಣೆಗಳನ್ನು ಮಾಡಿದ್ದಾರೆ. ಈ ಬಜೆಟ್ ಮಿಡ್ಲ್ ಕ್ಲಾಸ್‌ನವರಿಗೆ ಸಂತಸ ತಂದಿದೆ. ವಾರ್ಷಿಕ ಆದಯ 12 ಲಕ್ಷ ಇರುವ ಜನರು ಯಾವುದೇ ತೆರಿಗೆ ಪಾವತಿಸಬೇಕಿಲ್ಲ. ಈ ಬಾರಿಯ ಬಜೆಟ್‌ನಲ್ಲಿ ಕ್ರೀಡಾ ಕ್ಷೇತ್ರಕ್ಕೆ ಏನೆಲ್ಲಾ ಸಿಗಬಹುದು ಎಂಬ ನಿರೀಕ್ಷೆಗಳು ಹೆಚ್ಚಾಗಿದ್ದವು. ಈ ಬಜೆಟ್‌ನಲ್ಲಿ ಕ್ರೀಡಾ ಕ್ಷೇತ್ರವೂ ಸಮಾಧಾನ ಪಡುವಂತ ಬಜೆಟ್‌ನ್ನು ನಿರ್ಮಲಾ ಸೀತಾರಾಮನ್ ಮಂಡಿಸಿದ್ದಾರೆ. ಕಳೆದ ಬಾರಿಗಿಂತ ಈ ಬಾರಿಯ ಬಜೆಟ್‌ನಲ್ಲಿ 350 ಕೋಟಿ ರೂ. ಹೆಚ್ಚು ಹಣ ಮೀಸಲಿಡಲಾಗಿದೆ.
ಗ್ರಾಮೀಣ ಭಾಗದ ಪ್ರತಿಭೆಗಳನ್ನು ಗುರುತಿಸುವ ಖೇಲೋ ಇಂಡಿಯಾ ಯೋಜನೆಗೆ ಈ ಬಾರಿಯ ಬಜೆಟ್‌ನಲ್ಲಿ ಹೆಚ್ಚಿನ ಪ್ರಾಶಸ್ತ್ಯ ಸಿಕ್ಕಿದೆ. ಬಜೆಟ್‌ನಲ್ಲಿ ಕ್ರೀಡೆಗೆ 351.98 ಕೋಟಿ ರೂ.ಗಳ ಹೆಚ್ಚಳವನ್ನು ಮಾಡಲಾಗಿದೆ. ಈ ಹೆಚ್ಚಿನ ಪಾಲಿನಲ್ಲಿ ಖೇಲೋ ಇಂಡಿಯಾಗೆ ಹೆಚ್ಚಿನ ಹಣವನ್ನು ನೀಡಲಾಗಿದೆ. ಒಟ್ಟು ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯಕ್ಕೆ ಒಟ್ಟು 3,794.30 ಕೋಟಿ ರೂ.ಗಳನ್ನು ಹಂಚಿಕೆ ಮಾಡಲಾಗಿದೆ. ಇದರಲ್ಲಿ 1000 ಕೋಟಿ ರೂಪಾಯಿಗಳನ್ನು ಖೇಲೋ ಇಂಡಿಯಾಗೆ ಎತ್ತಿಡಲಾಗಿದೆ. ಕಳೆದ ಬಾರಿ ಈ ಕ್ರೀಡಿಗೆ 800 ಕೋಟಿ ರೂಪಾಯಿ ಎತ್ತಿಡಲಾಗಿತ್ತು. ಈ ಬಾರಿ 200 ಕೋಟಿ ರೂಪಾಯಿ ಹೆಚ್ಚು ನೀಡಲಾಗಿದೆ.

ಮುಂದಿನ ವರ್ಷ ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಕಾಮನ್ ವೆಲ್ತ್ ಕ್ರೀಡಾಕೂಟಗಳು ಇಲ್ಲದೇ ಇದ್ದರೂ, ಈ ಭಾರೀ ಮೊತ್ತವನ್ನು ಕ್ರೀಡಾ ಕ್ಷೇತ್ರಕ್ಕೆ ನೀಡಲಾಗಿದೆ. ರಾಷ್ಟ್ರೀಯ ಕ್ರೀಡಾ ಒಕ್ಕೂಟಗಳಿಗೆ ಸಹಾಯಕ್ಕಾಗಿ 400 ಕೋಟಿ ರೂಪಾಯಿಗೆ ಹೆಚ್ಚಿಸಲಾಗಿದೆ. ಇದು ಕಳೆದ ಬಾರಿಗಿ ಹೋಲಿಸಿದರೆ ಹೆಚ್ಚಾಗಿದೆ.
ಕ್ರೀಡಾ ಕ್ಷೇತ್ರದಲ್ಲಿ ದಿನವೂ ಬದಲಾವಣೆಗಳು ಆಗುತ್ತಿವೆ. ಈ ಕ್ಷೇತ್ರದಲ್ಲಿ ಆಟಗಾರರು ತಮ್ಮ ಮಹೋನತ್ತ ಸಾಧನೆಯ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಭಾರತ 2036ರಲ್ಲಿ ಒಲಿಂಪಿಕ್ಸ್ ಕ್ರೀಡಾ ಕೂಟವನ್ನು ಆಯೋಜಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿದೆ. ಈ ನಿಟ್ಟಿನಲ್ಲಿ ತನ್ನ ಎಲ್ಲ ಪ್ರಯತ್ನಗಳನ್ನು ಭಾರತ ಮಾಡುತ್ತಿದೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವಕಾಶ ಸಿಕ್ಕಾಗಲೆಲ್ಲಾ ಹೇಳುತ್ತಲೇ ಇರುತ್ತಾರೆ. ಭಾರತದ ಆಟಗಾರರು ತಮ್ಮ ಅಮೋಘ ಸಾಧನೆಯಿಂದ ಎಲ್ಲ ಕ್ರೀಡೆಗಳಲ್ಲಿ ಗಮನ ಸೆಳೆದಿದ್ದಾರೆ. ಪ್ಯಾರೀಸ್‌ನಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಭಾರತದ ಆಟಗಾರರು ಸ್ಥಿರ ಪ್ರದರ್ಶನ ನೀಡಿ ಪದಕದ ಬೇಟೆಯನ್ನು ನಡೆಸಿದ್ದಾರೆ. ಪ್ಯಾರಿಸ್ 6 ಪದಕಗಳನ್ನು ಭಾರತೀಯ ಅಥ್ಲೀಟ್‌ಗಳು ಪಡೆದಿದ್ದಾರೆ.

ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಮಂಡಿಸುವ ವೇಳೆ ಉಟ್ಟ ಸೀರಿಯ ಮೇಲೆ ಎಲ್ಲರ ಕಣ್ಣು ನೆಟ್ಟಿರುತ್ತವೆ. ಪ್ರತಿ ಬಾರಿಯೂ ಇವರು, ಭಾರತದ ಒಂದೊಂದು ಕ್ಷೇತ್ರದ ಸೀರೆಯನ್ನು ಉಟ್ಟಿದ್ದಾರೆ. ಈ ಬಾರಿ ನಿರ್ಮಲಾ ಅವರು ಬಿಹಾರದ ಸಾಂಪ್ರದಾಯಿಕ ಮಧುಬನಿ ಸೀರೆಯನ್ನು ಉಟ್ಟಿದ್ದರು.