Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ದಾಖಲೆಯ ಸನಿಹದಲ್ಲಿ ಬುಮ್ರಾ, ಸಾಧನೆಯ ಶಿಖರ ಏರಲು ಕುಲ್‌ದೀಪ್‌, ಜಡೇಜಾ ಸಜ್ಜು

ಒಂದುವರೆ ತಿಂಗಳ ಬಿಡುವಿನ ಬಳಿಕ ಟೀಮ್ ಇಂಡಿಯಾ ಅಂಗಳಕ್ಕೆ ಇಳಿಯಲಿದೆ. ಗುರುವಾರ ಚೆನ್ನೈನಲ್ಲಿ ಭಾರತ ಹಾಗೂ ಬಾಂಗ್ಲಾ ನಡುವಣ ಮೊದಲ ಟೆಸ್ಟ್‌ ನಡೆಯಲಿದೆ. 21 ತಿಂಗಳ ಬಳಿಕ ರಿಷಭ್‌ ಪಂತ್‌ ಭಾರತದ ಪರ ಟೆಸ್ಟ್ ಆಡಲು ಸಜ್ಜಾಗಿದ್ದಾರೆ. ವಿರಾಟ್‌ ಕೊಹ್ಲಿ ಸಹ 37 ವಾರಗಳ ಬಳಿಕ ಟೆಸ್ಟ್ ಆಡಲು ಅಂಗಳ ಪ್ರವೇಶಿಸಲಿದ್ದಾರೆ. ಟಿ20 ವಿಶ್ವಕಪ್‌ ಬಳಿಕ ಇದೇ ಮೊದಲ ಬಾರಿಗೆ ಜಸ್ಪ್ರಿತ್ ಬುಮ್ರಾ ಮೈದಾನಕ್ಕೆ ಇಳಿಯಲಿದ್ದಾರೆ.

ಟೀಮ್ ಇಂಡಿಯಾ ಮೊದಲ ಟೆಸ್ಟ್‌ ಪಂದ್ಯವನ್ನು ಗೆದ್ದು ಇತಿಹಾಸ ನಿರ್ಮಿಸುವ ಕನಸಿನಲ್ಲಿದೆ. ಇನ್ನು ಟೀಮ್ ಇಂಡಿಯಾದ ಆಟಗಾರರು ಸಹ ದಾಖಲೆಯ ಪುಟ ಸೇರುವ ಕನಸು ಹೊಂದಿದ್ದಾರೆ. ಈ ಸಾಲಿಗೆ ಟೀಮ್ ಇಂಡಿಯಾದ ಯಾರ್ಕರ್ ಸ್ಪೇಷಲಿಸ್ಟ್‌ ಜಸ್ಪ್ರಿತ್ ಬುಮ್ರಾ ಸಹ ಸೇರಿದ್ದಾರೆ. ಇನ್ನು ಸ್ಪಿನ್‌ ಬೌಲರ್‌ಗಳು ಸಹ ಸಾಧನೆಯ ಶಿಖರ್ ಏರಲು ಪ್ಲ್ಯಾನ್ ಮಾಡಿಕೊಂಡಿದ್ದಾರೆ.

Bumrah Jadeja and Kuldeep Close to Historic Milestones in India vs Bangladesh Test

ಮೂರು ವಿಕೆಟ್‌

ಬಾಂಗ್ಲಾ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಜಸ್ಪ್ರಿತ್‌ ಬುಮ್ರಾ ಮೂರು ವಿಕೆಟ್‌ ಕಬಳಿಸಿದರೆ, ದಾಖಲೆಯ ಪುಸ್ತಕಕ್ಕೆ ಎಂಟ್ರಿ ನೀಡಲಿದ್ದಾರೆ. ಯಾರ್ಕರ್‌ ಸ್ಪೇಷಲಿಸ್ಟ್‌ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 400 ವಿಕೆಟ್‌ ಪೂರೈಸಿದ ಸಾಧನೆ ಮಾಡುವ, 10ನೇ ಬೌಲರ್‌ ಎಂಬ ಹೆಗ್ಗಳಿಕೆ ತಮ್ಮದಾಗಿಸಿಕೊಳ್ಳಲಿದ್ದಾರೆ.

ಹೇಗಿದೆ ಸಾಧನೆ

ಜಸ್ಪ್ರೀತ್ ಬುಮ್ರಾ ಭಾರತ ಪರ 36 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 159 ವಿಕೆಟ್‌ ಪಡೆದಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ 149 ವಿಕೆಟ್ ಕಬಳಿಸಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ ಬುಮ್ರಾ 89 ವಿಕೆಟ್‌ ಉರುಳಿಸಿದ್ದಾರೆ. ಇನ್ನು ಭಾರತದ ಆರು ಜನ ವೇಗದ ಬೌಲರ್‌ಗಳು ಮಾತ್ರ 400ಕ್ಕೂ ಹೆಚ್ಚು ವಿಕೆಟ್‌ ಪಡೆದ ಸಾಧನೆ ಮಾಡಿದ್ದಾರೆ. ಈ ಮೊದಲು ಕಪಿಲ್ ದೇವ್, ಜಾಹಿರ್ ಖಾನ್, ಜಾವಗಲ್ ಶ್ರೀನಾಥ್, ಮೊಹಮ್ಮದ್ ಶಮಿ, ಇಶಾಂತ್ ಶರ್ಮಾ, ಈ ಸಾಧನೆ ಮಾಡಿದ್ದಾರೆ.

Bumrah Jadeja and Kuldeep Close to Historic Milestones in India vs Bangladesh Test

ಕುಲ್‌ದೀಪ್‌, ಜಡೇಜಾಗೂ ಅವಕಾಶ

ಟೀಮ್ ಇಂಡಿಯಾದ ಭರವಸೆಯ ಸ್ಪಿನ್ ಬೌಲರ್‌ಗಳಾದ ಕುಲ್‌ದೀಪ್ ಯಾದವ್ ಹಾಗೂ ರವೀಂದ್ರ ಜಡೇಜಾ ಅವರು ದಾಖಲೆಯ ಪುಟಕ್ಕೆ ಎಂಟ್ರಿ ನೀಡಬಹುದು. ಭಾರತದ ಆಲ್‌ರೌಂಡರ್ ರವೀಂದ್ರ ಜಡೇಜಾ ಟೆಸ್ಟ್ ಕ್ರಿಕೆಟ್‌ನಲ್ಲಿ 300 ವಿಕೆಟ್‌ಗಳ ಸಾಧನೆ ಮಾಡಲು ಇನ್ನು 6 ವಿಕೆಟ್‌ ಅವಶ್ಯಕತೆ ಇದೆ. ಸರ್ ಜಡ್ಡು ಆಡಿದ 72 ಟೆಸ್ಟ್‌ ಪಂದ್ಯಗಳಲ್ಲಿ 294 ವಿಕೆಟ್‌ ಪಡೆದು ಸಾಧನೆ ಮಾಡಿದ್ದಾರೆ.

Bumrah Jadeja and Kuldeep Close to Historic Milestones in India vs Bangladesh Test

ಕುಲದೀಪ್ ಯಾದವ್‌ಗೂ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 300 ವಿಕೆಟ್ ಪೂರೈಸುವ ಚಾನ್ಸ್‌ ಇದೆ. ಈ ಸಾಧನೆಗೆ ಕುಲ್‌ದೀಪ್‌ ಆರು ವಿಕೆಟ್‌ ದೂರ ನಿಂತಿದ್ದಾರೆ. 29 ವರ್ಷದ ಕುಲ್‌ದೀಪ್‌ 12 ಟೆಸ್ಟ್‌ ಪಂದ್ಯಗಳಲ್ಲಿ 53, 106 ಏಕದಿನ ಪಂದ್ಯದಲ್ಲಿ 172, 40 ಟಿ20 ಪಂದ್ಯಗಳಲ್ಲಿ 69 ವಿಕೆಟ್‌ ಪಡೆದು ಸಾಧನೆ ಮಾಡಿದ್ದಾರೆ.

ಮೊದಲ ಟೆಸ್ಟ್ ಪಂದ್ಯದಲ್ಲಿ ಯಾವ ಬೌಲರ್‌ ಮೊದಲು ಸಾಧನೆ ಮಾಡುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.

Story first published: Wednesday, September 18, 2024, 14:58 [IST]
Other articles published on Sep 18, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+