For Quick Alerts
ALLOW NOTIFICATIONS  
For Daily Alerts
 

ICC Ranking: ಅಶ್ವಿನ್‌ ಹಿಂದಿಕ್ಕಿದ ಬುಮ್ರಾಗೆ ಅಗ್ಗ ಪಟ್ಟ: ಜೈಸ್ವಾಲ್‌ಗೆ ಬಡ್ತಿ

ಟೀಮ್ ಇಂಡಿಯಾ ಹಾಗೂ ಬಾಂಗ್ಲಾದೇಶ ನಡುವಣ ಟೆಸ್ಟ್ ಸರಣಿ ಮುಗಿದಿದೆ. ಈ ಸರಣಿಯಲ್ಲಿ ಭಾರತ ಕ್ಲೀನ್ ಸ್ವೀಪ್ ಸಾಧನೆ ಮಾಡಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಅಮೋಘ ಪ್ರದರ್ಶನದ ನೀಡಿದ ಟೀಮ್ ಇಂಡಿಯಾದ ಆಟಗಾರರ ಶ್ರೇಯಾಂಕದಲ್ಲೂ ಏರಿಕೆ ಆಗಿದೆ. ಬುಧವಾರ ಬಿಡುಗಡೆಗೊಂಡ ನೂತನ ಶ್ರೇಯಾಂಕ ಪಟ್ಟಿಯಲ್ಲಿ ಟೀಮ್ ಇಂಡಿಯಾದ ಯಾರ್ಕರ್ ಸ್ಪೆಷಲಿಸ್ಟ್‌ ಜಸ್ಪ್ರಿತ್ ಬುಮ್ರಾ ನಂಬರ್ 1 ಸ್ಥಾನವನ್ನು ಅಲಂಕರಿಸಿದ್ದಾರೆ.

ಬಾಂಗ್ಲಾದೇಶದ ವಿರುದ್ಧದ ಸರಣಿಯಲ್ಲಿ ಅಮೋಘ ಬೌಲಿಂಗ್ ಪ್ರದರ್ಶನ ನೀಡಿದ್ದ ಜಸ್ಪ್ರಿತ್ ಬುಮ್ರಾ ಹಾಗೂ ಅಶ್ವಿನ್‌ ತಲಾ 11 ವಿಕೆಟ್‌ ಪಡೆದಿದ್ದರು. ಇಬ್ಬರೂ ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿದರೂ, ಒಬ್ಬರಿಗೆ ಮಾತ್ರ ಶ್ರೇಯಾಂಕದಲ್ಲಿ ಬಡ್ತಿ ಸಿಕ್ಕಿದ್ದು, ಇನ್ನೊಬ್ಬ ಬೌಲರ್‌ ಕುಸಿತ ಕಂಡಿದ್ದಾನೆ.

Bumrah Reclaims No 1 Spot in ICC Test Rankings Ashwin Slips Jaiswal Rises to Third in Batting

ಬುಮ್ರಾಗೆ ಅಗ್ರ ಪಟ್ಟ

ಟೀಮ್ ಇಂಡಿಯಾದ ಸ್ಟಾರ್ ವೇಗದ ಬೌಲರ್‌ ಜಸ್ಪ್ರಿತ್ ಬುಮ್ರಾ ಅವರು ಬೌಲಿಂಗ್ ವಿಭಾಗದಲ್ಲಿ ನಂಬರ್ 1 ಸ್ಥಾನವನ್ನು ಪಡೆದಿದ್ದಾರೆ. ಇವರು ಒಟ್ಟು 870 ಅಂಕಗಳನ್ನು ಕಲೆ ಹಾಕಿದ್ದಾರೆ. ಇನ್ನು ಎರಡನೇ ಸ್ಥಾನದಲ್ಲಿರುವ ಅಶ್ವಿನ್ 869 ಅಂಕಗಳೊಂದಿಗೆ ಎರಡನೇ ಸ್ಥಾನಕ್ಕೆ ಕುಸಿದಿದ್ದಾರೆ.

ಟೀಮ್ ಇಂಡಿಯಾದ ಸ್ಟಾರ್ ಆಲ್‌ರೌಂಡರ್ ರವೀಂದ್ರ ಜಡೇಜಾ ಶ್ರೇಯಾಂಕದಲ್ಲಿ ಆರನೇ ಸ್ಥಾನ ಪಡೆದಿದ್ದಾರೆ. ಇನ್ನು ಎರಡೂ ಪಂದ್ಯಗಳಲ್ಲಿ ಆಡದೇ ಇದ್ದರೂ ಕುಲದೀಪ್ ಯಾದವ್ ಶ್ರೇಯಾಂಕದಲ್ಲಿ ಚೇತರಿಕೆ ಕಂಡಿದ್ದು 16ನೇ ಸ್ಥಾನದಲ್ಲಿದ್ದಾರೆ. ಆರ್ ಅಶ್ವಿನ್ ಈ ವರ್ಷದ ಮಾರ್ಚ್‌ನಲ್ಲಿ ನಂಬರ್ 1 ಟೆಸ್ಟ್ ಬೌಲರ್ ಸ್ಥಾನಕ್ಕೆ ಏರಿದ್ದರು. ಆಗ ಅಶ್ವಿನ್ ಬುಮ್ರಾ ಅವರಿಂದ ನಂಬರ್-1 ಸ್ಥಾನವನ್ನು ಪಡೆದಿದ್ದರು. ಇದೀಗ ಅಶ್ವಿನ್ ಅವರಿಂದ ನಂಬರ್-1 ಪಟ್ಟವನ್ನು ಬುಮ್ರಾ ಕಸಿದುಕೊಂಡಿದ್ದಾರೆ. ಬುಮ್ರಾ ಟೆಸ್ಟ್ ಬೌಲರ್‌ಗಳ ಅಗ್ರ ಶ್ರೇಯಾಂಕವನ್ನು ಎರಡನೇ ಬಾರಿಗೆ ತಲುಪಿದ್ದಾರೆ.

Bumrah Reclaims No 1 Spot in ICC Test Rankings Ashwin Slips Jaiswal Rises to Third in Batting

ಉಳಿದಂತೆ ಆಸ್ಟ್ರೇಲಿಯಾದ ಜೋಶ್ ಹ್ಯಾಜಲ್‌ವುಡ್ 3, ಪ್ಯಾಟ್ ಕಮಿನ್ಸ್‌ 4, ದಕ್ಷಿಣ ಆಫ್ರಿಕಾದ ಕಗಿಸೊ ರಬಾಡ 5ನೇ ಸ್ಥಾನದಲ್ಲಿದ್ದಾರೆ.

ಜೈಸ್ವಾಲ್‌ಗೆ ಮೂರನೇ ಸ್ಥಾನ

ಟೆಸ್ಟ್ ಬ್ಯಾಟಿಂಗ್ ಶ್ರೇಯಾಂಕದಲ್ಲಿ ಟೀಮ್ ಇಂಡಿಯಾದ ಯುವ ಆಟಗಾರ ಯಶಸ್ವಿ ಜೈಸ್ವಾಲ್ 792 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ. ನ್ಯೂಜಿಲೆಂಡ್ ತಂಡದ ಕೇನ್ ವಿಲಿಯಮ್ಸನ್‌ ಎರಡು, ಇಂಗ್ಲೆಂಡ್ ತಂಡದ ಸ್ಟಾರ್ ಆಟಗಾರ ಜೋ ರೂಟ್ ನಂಬರ್ 1 ಸ್ಥಾನದಲ್ಲಿದ್ದಾರೆ.

ವಿರಾಟ್‌ಗೆ ಬಡ್ತಿ

ಟೀಮ್ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಅವರ ಶ್ರೇಯಾಂಕದಲ್ಲಿ ಬಡ್ತಿ ಆಗಿದೆ. ಇವರು ಆರು ಸ್ಥಾನ ಜಿಗಿತ ಕಂಡಿದ್ದು, ಆರನೇ ಸ್ಥಾನದಲ್ಲಿದ್ದಾರೆ. ವಿಕೆಟ್‌ ಕೀಪರ್ ಬ್ಯಾಟರ್ ರಿಷಭ್ ಪಂತ್‌ ಮೂರು ಸ್ಥಾನ ಕುಸಿತ ಕಂಡಿದ್ದು, ಒಂಬತ್ತನೇ ಸ್ಥಾನದಲ್ಲಿದ್ದಾರೆ. ರೋಹಿತ್ ಶರ್ಮಾ 15, ಶುಭಮನ್‌ ಗಿಲ್‌ 16ನೇ ಸ್ಥಾನ ತಮ್ಮದಾಗಿಸಿಕೊಂಡಿದ್ದಾರೆ.

ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ ರವೀಂದ್ರ ಜಡೇಜಾ ಮೊದಲ ಸ್ಥಾನ, ರವಿಚಂದ್ರನ್‌ ಅಶ್ವಿನ್ ಎರಡು, ಬಾಂಗ್ಲಾದ ಶಕೀಬ್ ಅಲ್ ಹಸನ್ ಮೂರನೇ ಸ್ಥಾನದಲ್ಲಿದ್ದಾರೆ.

Story first published: Wednesday, October 2, 2024, 16:33 [IST]
Other articles published on Oct 2, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+