ನಟಸಾರ್ವಭೌಮ ನಟಿಯೊಂದಿಗೆ ಬುಮ್ರಾ ಡೇಟಿಂಗ್ ಮಾಡ್ತಿದ್ದಾರಂತೆ!

ಮುಂಬೈ, ಜೂನ್ 14: ಕ್ರಿಕೆಟ್ ತಾರೆಯರಿಗೂ ಬಾಲಿವುಟ್‌ಗೂ ಇರುವ ನಂಟಿಗೆ ಕಲರ್‌ಫುಲ್ ಇತಿಹಾಸವೇ ಇದೆ. ಟೀಮ್ ಇಂಡಿಯಾದ ಮಾಜಿ ನಾಯಕ ಮನ್ಸೂರ್ ಅಲಿ ಖಾನ್ ಪಟೌಡಿಯಿಂದ ಹಿಡಿದು ಹಾಲಿ ನಾಯಕ ವಿರಾಟ್ ಕೊಹ್ಲಿ ಬಾಲಿವುಡ್ ನಟಿಯರಿಗೆ ಕ್ಲೀನ್ ಬೌಲ್ಡ್ ಆಗಿ ತಮ್ಮ ಬಾಳ ಸಂಗಾತಿಯನ್ನರಾಗಿ ಸ್ವೀಕರಿಸಿದ್ದಾರೆ. ಇನ್ನು ಹಲವು ಕ್ರಿಕೆಟಿಗರು ನಟಿಮಣಿಯರೊಂದಿಗೆ ಚೆಲ್ಲಾಟವಾಡಿ ವಿವಾದ ಮೈಮೇಲೆ ಎಳೆದುಕೊಂಡ ಉದಾಹರಣೆಗಳು ಸಾಕಷ್ಟಿವೆ.
ವಿಶ್ವಕಪ್ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು / ಅಂಕಪಟ್ಟಿ
ಅಂದಹಾಗೆ ಈ ಸಾಲಿಗೆ ಹೊಸ ಹಸೆರು ಸೇರ್ಪಡೆಯಾಗುತ್ತಿದ್ದು, ಟೀಮ್ ಇಂಡಿಯಾದ ಯುವ ವೇಗದ ಬೌಲರ್ ಹಾಗೂ ಏಕದಿನ ವಿಶ್ವ ಶ್ರೇಯಾಂಕದಲ್ಲಿ ನಂ.1 ಬೌಲರ್ ಆಗಿರುವ ಜಸ್‌ಪ್ರೀತ್ ಬುಮ್ರಾ ದಕ್ಷಿಣ ಭಾರತದ ಜನಪ್ರಿಯ ನಟಿ ಅನುಪಮ ಪರಮೇಶ್ವರನ್ ಅವರನ್ನು ಡೇಟ್ ಮಾಡುತ್ತಿದ್ದಾರೆ ಎಂಬ ವದಂತಿ ಹಬ್ಬಿದೆ.
ನೆಟ್ಟಿಗರು ಈ ವಿಚಾರವಾಗಿ ಆಳವಾದ ಸಂಶೋಧನೆ ಮಾಡುತ್ತಿದ್ದು, ಬುಮ್ರಾ ಮತ್ತು ಅನುಪಮಾ ಟ್ವಿಟರ್‌ನಲ್ಲಿ ಒಬ್ಬರನ್ನೊಬ್ಬರು ಫಾಲೊ ಮಾಡುತ್ತಿರುವುದನ್ನು ಪತ್ತೆ ಮಾಡಿದ್ದಾರೆ. ಅಷ್ಟೇ ಅಲ್ಲದೆ ಅನುಪಮ ಅವರ ಅದೆಷ್ಟೋ ಫೋಟೊಗಳಿಗೆ ಬುಮ್ರಾ ಲೈಕ್ ಕೂಡ ಒತ್ತಿದ್ದಾರೆ. ಈ ಸುದ್ದಿ ಸ್ಫೋಟಗೊಳ್ಳುತ್ತಿದ್ದಂತೆಯೇ ಅನುಪಮಾ ಅವರನ್ನು ಪತ್ರಿಕಾಗೋಷ್ಠಿಯಲ್ಲಿ ಪ್ರಶಸ್ಬಿಸಲಾಗಿತ್ತು. ಇದಕ್ಕೆ "ನಾವಿಬ್ಬರು ಉತ್ತಮ ಗೆಳೆಯರಷ್ಟೇ" ಎಂದು ಹೇಳಿರುವ 23 ವರ್ಷದ ನಟಿ, ಡೇಟಿಂಗ್ ಎಲ್ಲಾ ಬರಿ ವದಂತಿ ಅಷ್ಟೇ ಎಂದು ತಳ್ಳಿ ಹಾಕಿದ್ದಾರೆ.
ಆದರೆ, ವರದಿಗಳ ಪ್ರಕಾರ ಬುಮ್ರಾ ಸಾಮಾಜಿಕ ಜಾಲತಾಣಗಳಲ್ಲಿ ಅನುಪಮಾ ಅವರನ್ನು ಹೊರತು ಪಡಿಸಿ ಬೇರಾವ ನಟಿಯರನ್ನೂ ಫಾಲೋ ಮಾಡುತ್ತಿಲ್ಲವಂತೆ. ಕನ್ನಡ ಚಿತ್ರರಂಗದಲ್ಲಿ ಪುನಿತ್ ರಾಜ್ ಕುಮಾರ್ ನಟನೆಯ ನಟಸಾರ್ವಭೌಮ ಸಿನಿಮಾದಲ್ಲಿ ನಟಿಸಿರುವ ಅನುಪಮಾ ಪರಮೇಶ್ವರನ್, 2015ರ ತೆಲುಗು ಭಾಷೆಯ ಹಿಟ್ ಸಿನಿಮಾ 'ಪ್ರೇಮಂ'" ಮೂಲಕ ಜನಪ್ರಿಯತೆ ಗಿಟ್ಟಿಸಿದವರು.
ಬುಮ್ರಾ ಸದ್ಯ ವಿಶ್ವಕಪ್ ಟೂನರ್ನಿಯಲ್ಲಿ ಟೀಮ್ ಇಂಡಿಯಾ ಪರ ವಿಕೆಟ್ ಪಡೆದು ಪಂದ್ಯಗಳನ್ನು ಗೆದ್ದುಕೊಡುವುದರಲ್ಲಿ ಬ್ಯುಸಿಯಾಗಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications