Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IND vs SA 1st Test: ಬುಮ್ರಾಗೆ 5 ವಿಕೆಟ್‌: ದಕ್ಷಿಣ ಆಫ್ರಿಕಾ 159 ರನ್‌ಗೆ ಆಲೌಟ್

ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಮೊದಲ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ ಆತಿಥೇಯ ತಂಡದ ಬೌಲರ್ಸ್‌ ಅಬ್ಬರಿಸಿದ್ದಾರೆ. ಶುಭಮನ್‌ ಗಿಲ್‌ ಪಡೆಯ ಬಿಗುವಿನ ದಾಳಿಯ ನೆರವಿನಿಂದ ದಕ್ಷಿಣ ಆಫ್ರಿಕಾ ತಂಡವನ್ನು ಮೊದಲ ಇನಿಂಗ್ಸ್‌ನಲ್ಲಿ 159 ರನ್‌ಗಳಿಗೆ ಆಲೌಟ್ ಆಯಿತು. ಭಾರತದ ಪರ ಯಾರ್ಕರ್‌ ಸ್ಪೇಷಲಿಸ್ಟ್‌ ಜಸ್ಪ್ರೀತ್‌ ಬುಮ್ರಾ 27 ರನ್‌ಗೆ 5 ವಿಕೆಟ್‌ ಪಡೆದು ಮಿಂಚಿದರು. ಈ ಮೂಲಕ ಟೆಸ್ಟ್‌ ಕ್ರಿಕೆಟ್‌ನಲ್ಲಿ 16ನೇ ಬಾರಿಗೆ ಐದಕ್ಕೂ ಹೆಚ್ಚು ವಿಕೆಟ್‌ ಪಡೆದ ಸಾಧನೆ ಮಾಡಿದೆ.

ಮೊದಲ ಟೆಸ್ಟ್‌ ಪಂದ್ಯದಲ್ಲಿ ಟಾಸ್‌ ಗೆದ್ದ ದಕ್ಷಿಣ ಆಫ್ರಿಕಾ ಮೊದಲು ಬ್ಯಾಟಿಂಗ್ ಮಾಡಲು ಮುಂದಾಯಿತು. ಈ ವೇಳೆ ಆರಂಭಿಕರಾದ ಐಡೇನ್‌ ಮಾರ್ಕ್ರಮ್‌ ಹಾಗೂ ರಿಯಾನ್‌ ರಿಕಲ್ಟನ್‌ ಜೋಡಿ ತಂಡಕ್ಕೆ ಉತ್ತಮ ಜೊತೆಯಾಟದ ಕಾಣಿಕೆ ನೀಡಿತು. ಈ ಜೋಡಿ ಮೊದಲ ವಿಕೆಟ್‌ಗೆ 57 ರನ್‌ ಸೇರಿಸಿತು. ಈ ವೇಳೆ ರಿಯಾನ್‌ ರಿಕಲ್ಟನ್‌ 22 ಎಸೆತಗಳಲ್ಲಿ 23 ರನ್‌ ಸಿಡಿಸಿ, ಬುಮ್ರಾ ತೋಡಿದ ಖೆಡ್ಡಾಗೆ ಬಲಿಯಾದರು. ಇನ್ನೋರ್ವ ಆರಂಭಿಕ ಆಟಗಾರ ಐಡೇನ್‌ ಮಾರ್ಕ್ರಮ್‌ ಸಹ 5 ಬೌಂಡರಿ, 1 ಸಿಕ್ಸರ್ ಸಹಾಯದಿಂದ 31 ರನ್‌ ಸಿಡಿಸಿದ್ದಾಗ ಬುಮ್ರಾ ಅವರ ಎಸೆತವನ್ನು ತಪ್ಪಾಗಿ ಗ್ರಹಿಸಿ ವಿಕೆಟ್‌ ಕೀಪರ್ ಪಂತ್‌ಗೆ ಕ್ಯಾಚ್ ನೀಡಿದರು.

Bumrah s Fiery 5-Wicket Haul Crushes South Africa for 159 in 1st Test

ನಾಯಕ ತೆಂಬು ಬವುಮಾ 3 ರನ್‌ ಗಳಿಗೆ ಆಟ ಮುಗಿಸಿದರು. ನಾಲ್ಕನೇ ವಿಕೆಟ್‌ಗೆ ಟೋನಿ ಡಿ ಜೋರ್ಜಿ ಹಾಗೂ ವಿಯಾನ್ ಮುಲ್ಡರ್ ಜೋಡಿ ತಂಡಕ್ಕೆ ಕೊಂಚ ಆಧಾರವಾಯಿತು. ಆದರೆ ಈ ಜೋಡಿಯನ್ನು ಹೆಚ್ಚು ಹೊತ್ತು ನೆಲಕಚ್ಚಿ ನಿಂತುಕೊಳ್ಳಲು ಸಾಧ್ಯವಾಗಲಿಲ್ಲ. 83 ಎಸೆತಗಳಲ್ಲಿ ಈ ಜೀಡಿ 43 ರನ್ ಸೇರಿಸಿತು. ಈ ವೇಳೆ ವಿಯಾನ್ ಮುಲ್ಡರ್ 3 ಬೌಂಡರಿ ನೆರವಿನಿಂದ 24 ರನ್‌ ಸೇರಿಸಿ ಕುಲ್‌ದೀಪ್ ಯಾದವ್ ಅವರಿಗೆ ವಿಕೆಟ್‌ ಒಪ್ಪಿಸಿದರು. ಮಧ್ಯಮ ಕ್ರಮಾಂಕದಲ್ಲಿ ಟೋನಿ ಡಿ ಜೋರ್ಜಿ 55 ಎಸೆತಗಳಲ್ಲಿ 24 ರನ್‌ ಸೇರಿಸಿ ಬುಮ್ರಾಗೆ ಔಟ್ ಆದರು.

ದಕ್ಷಿಣ ಆಫ್ರಿಕಾದ ಪರ ಟ್ರಿಸ್ಟನ್‌ ಸ್ಟಬ್ಸ್ ಅತಿ ಹೆಚ್ಚು ಎಸೆತಗಳನ್ನು ಎದುರಿಸಿದರು. ಇವರು 74 ಎಸೆತಗಳಲ್ಲಿ 1 ಬೌಂಡರಿ ನೆರವಿನಿಂದ 15 ರನ್‌ ಬಾರಿಸಿ ಅಜೇಯರಾಗಿ ಉಳಿದರು. ಕೈಲ್ ವೆರ್ರೆನ್ 2 ಬೌಂಡರಿ ನೆರವಿನಂದ 16 ರನ್‌ ಸಿಡಿಸಿ ಔಟ್ ಆದರು. ಉಳಿದ ಬ್ಯಾಟರ್‌ಗಳು ಡಬಲ್‌ ಡಿಜಿಟ್‌ ಮುಟ್ಟಲೇ ಇಲ್ಲ. ಪರಿಣಾಮ ದಕ್ಷಿಣ ಆಫ್ರಿಕಾ 55 ಓವರ್‌ಗಳಲ್ಲಿ 159 ರನ್‌ಗಳಿಗೆ ಆಲೌಟ್ ಆಯಿತು.

bumrahs-fiery-5-wicket-haul-crushes-south-africa-for-159-in-1st-test

ಬುಮ್ರಾ ಪಂಚ್

ಟೀಮ್ ಇಂಡಿಯಾದ ಸ್ಟಾರ್ ಬೌಲರ್‌ ಜಸ್ಪ್ರೀತ್ ಬುಮ್ರಾ 14 ಓವರ್‌ ಬೌಲಿಂಗ್ ಮಾಡಿ 27 ರನ್‌ ನೀಡಿ 5 ವಿಕೆಟ್‌ ಕಬಳಿಸಿದ್ದಾರೆ. ಉಳಿದಂತೆ ಮೊಹಮ್ಮದ್‌ ಸಿರಾಜ್‌ ಹಾಗೂ ಸ್ಪಿನ್ ಬೌಲರ್‌ ಕುಲ್‌ದೀಪ್‌ ಯಾದವ್ ತಲಾ 2 ವಿಕೆಟ್‌ ಕಬಳಿಸಿದರು. ಅಕ್ಷರ್‌ ಪಟೇಲ್ 1 ವಿಕೆಟ್‌ ಕಿತ್ತರು.

Story first published: Friday, November 14, 2025, 14:51 [IST]
Other articles published on Nov 14, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+