ಬುಷ್ ಫೈರ್ ಕ್ರಿಕೆಟ್ ಬ್ಯಾಷ್ : ದಿಗ್ಗಜರ ಕಾಳಗದಲ್ಲಿ ಪಾಂಟಿಂಗ್ ಪಡೆಗೆ ಗೆಲುವು!

ಕ್ರಿಕೆಟ್ ನಿಂದ ನಿವೃತ್ತಿಯನ್ನು ಪಡೆದುಕೊಂಡ ಆಟಗಾರರು ಇಂದು ಮತ್ತೆ ಕ್ರಿಕೆಟ್ ಆಡಲು ಕಣಕ್ಕಿಳಿದಿದ್ದರು. ಆಸ್ಟ್ರೇಲಿಯಾದಲ್ಲಿ ಬುಷ್ ಫೈರ್ ಸಂತ್ರಸ್ತರ ನೆರವಿಗಾಗಿ ಕ್ರಿಕೆಟ್ ಆಸ್ಟ್ರೇಲಿಯಾ ಚ್ಯಾರಿಟಿ ಪಂದ್ಯವನ್ನು ಆಯೋಜಿಸಿದ್ದು ಈ ಪಂದ್ಯದಲ್ಲಿ ಗಿಲ್‌ಕ್ರಿಸ್ಟ್ XI ಮತ್ತು ರಿಕಿ ಪಾಂಟಿಂಗ್ XI ಮಧ್ಯೆ ಈ ಹಣಾಹಣಿ ನಡೆದಿದೆ.
ಬ್ರ್ಯಾನ್ ಲಾರಾ, ,ರಿಕಿ ಪಾಂಟಿಂಗ್, ಗಿಲ್‌ಕ್ರಿಸ್ಟ್, ಮ್ಯಾಥ್ಯೂ ಹೇಡನ್, ಯುವರಾಜ್ ಸಿಂಗ್, ವಾಸಿಂ ಅಕ್ರಂ ಸೇರಿದಂತೆ ಅನೇಕ ದಿಗ್ಗಜರು ಈ ಕ್ರಿಕೆಟ್‌ನಲ್ಲಿ ಪಾಲ್ಗೊಂಡಿದ್ದರು. ಸ್ನೇಹಪೂರ್ವಕವಾಗಿ ನಡೆದ ಈ ಪಂದ್ಯದ ಅಂತ್ಯ ಮಾತ್ರ ರೋಚಕವಾಗಿತ್ತು.
ಮೊದಲ ಇನ್ನಿಂಗ್ಸ್‌ನ ಬ್ರೇಕ್‌ನಲ್ಲಿ ಸಚಿನ್ ತೆಂಡೂಲ್ಕರ್ ಆಸ್ಟ್ರೇಲಿಯಾದ ಮಹಿಳಾ ಕ್ರಿಕೆಟರ್‌ನ ವೇಗಿ ಎಲ್ಯಾಸ್ ಪೆರ್ರಿ ಅವರ ಚಾಲೆಂಜ್ ಸ್ವೀಕರಿಸಿ ಒಂದು ಓವರ್ ಆಡಿ ಪ್ರೇಕ್ಷಕರ ಗಮನ ಸೆಳೆದರು.
ಪಾಂಟಿಂಗ್ XI: ಮ್ಯಾಥ್ಯೂ ಹೇಡನ್, ಜಸ್ಟಿನ್ ಲ್ಯಾಂಗರ್, ರಿಕಿ ಪಾಂಟಿಂಗ್ (ಸಿ), ಎಲಿಸ್ ವಿಲ್ಲಾನಿ, ಬ್ರಿಯಾನ್ ಲಾರಾ, ಫೋಬೆ ಲಿಚ್‌ಫೀಲ್ಡ್, ಬ್ರಾಡ್ ಹ್ಯಾಡಿನ್ (ವಿಕೆ), ಬ್ರೆಟ್ ಲೀ, ವಾಸಿಮ್ ಅಕ್ರಮ್, ಡಾನ್ ಕ್ರಿಶ್ಚಿಯನ್, ಲ್ಯೂಕ್ ಹಾಡ್ಜ್. ಕೋಚ್: ಸಚಿನ್ ತೆಂಡೂಲ್ಕರ್.
ಗಿಲ್‌ಕ್ರಿಸ್ಟ್ XI: ಆ್ಯಡಮ್ ಗಿಲ್‌ಕ್ರಿಸ್ಟ್ (ಸಿ & ವಿಕೆ), ಶೇನ್ ವ್ಯಾಟ್ಸನ್, ಬ್ರಾಡ್ ಹಾಡ್ಜ್, ಯುವರಾಜ್ ಸಿಂಗ್, ಅಲೆಕ್ಸ್ ಬ್ಲ್ಯಾಕ್‌ವೆಲ್, ಆ್ಯಡ್ರ್ಯೂ ಸೈಮಂಡ್ಸ್, ಕರ್ಟ್ನಿ ವಾಲ್ಷ್, ನಿಕ್ ರಿಯೊವಾಲ್ಡ್, ಪೀಟರ್ ಸಿಡಲ್, ಫವಾದ್ ಅಹ್ಮದ್ (ಇನ್ನೊಬ್ಬನ ಹೆಸರು ಪ್ರಕಟಿಸಬೇಕಿದೆ). ಕೋಚ್: ಟಿಮ್ ಪೈನೆ.

ಪಾಂಟಿಂಗ್ ಪಡೆಗೆ ಗೆಲುವು:
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ರಿಕಿ ಪಾಂಟಿಂಗ್ ನೇತೃತ್ವದ ತಂಡ ನಿಗದಿತ 10 ಓವರ್‌ಗಳಲ್ಲಿ 104 ರನ್‌ಗಳಿಸುವಲ್ಲಿ ಯಶಸ್ವಿಯಾಗಿತ್ತು. ಇದನ್ನು ಬೆನ್ನತ್ತಿದ ಗಿಲ್‌ಕ್ರಿಸ್ಟ್ ಪಡೆ ಅಂತಿಮವಾಗಿ ಈ ಮೊತ್ತಕ್ಕಿಂತ ಒಂದು ರನ್ ಕಡಿಮೆ ಪೇರಿಸಿ ಪಾಂಟಿಂಗ್ ಪಡೆಗೆ ಶರಣಾಯಿತು.

ಉತ್ತಮವಾಗಿ ಆಡಿದ ಮಾಜಿ ಆಟಗಾರರು:
ಪಾಂಟಿಂಗ್ ತಂಡದ ಪರವಾಗಿ ಲಾರಾ ಮತ್ತು ಪಾಂಟಿಂಗ್ ಉತ್ತಮ ಆಟವನ್ನು ಪ್ರದರ್ಶಿಸಿದರು. ಪಾಂಟಿಂಗ್ 26ರನ್ ಮತ್ತು ಲಾರಾ 30 ರನ್‌ಗಳಿಸಿ ಆಟದಿಂದ ನಿವೃತ್ತಿ ಪಡೆದುಕೊಂಡರು. ಗಿಲ್‌ಕ್ರಿಸ್ಟ್ ತಂಡದ ಪರವಾಗಿ ಶೇನ್ ವಾಟ್ಸನ್ 30 ರನ್ ಮತ್ತು ಸೈಮಂಡ್ಸ್ 29 ರನ್‌ಗಳಿಸಿ ನಿವೃತ್ತಿಯನ್ನು ಪಡೆದುಕೊಂಡರು.

ಹತ್ತು ಓವರ್‌ಗಳ ಪಂದ್ಯ:
ಬುಷ್‌ಫೈರ್ ಸಂತ್ರಸ್ತರಿಗಾಗಿ ಹತ್ತು ಓವರ್‌ಗಳ ಪಂದ್ಯವನ್ನು ಅಯೋಜನೆ ಮಾಡಲಾಗಿತ್ತು. ಈ ವಿಶೇಷ ಪಂದ್ಯದಲ್ಲಿ ಕೆಲ ವಿಶೇಷ ನಿಯಮಗಳೂ ಇದ್ದವು. ಮೊದಲ ಎಸೆತಕ್ಕೆ ಔಟಾದರೆ ಅದು ಔಟಲ್ಲ. ಇದು ಪ್ರಮುಖವಾದ ನಿಯಮವಾಗಿದೆ.

ಸಚಿನ್‌ಗೆ ಚಾಲೆಂಜ್ ಮಾಡಿದ ಮಹಿಳಾ ಕ್ರಿಕೆಟರ್:
ಟೂರ್ನಿಗೂ ಮುನ್ನ ಸಚಿನ್ ತೆಂಡೂಲ್ಕರ್‌ಗೆ ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟರ್ ಎಲ್ಯಾಸ್ ಪೆರ್ರಿ ಚಾಲೆಂಜ್ ಮಾಡಿದ್ದರು. ಒಂದು ಓವರ್ ಎದುರಿಸುವಂತೆ ಮಾಡಿದ ಸವಾಲನ್ನು ಸಚಿನ್ ತೆಂಡೂಲ್ಕರ್ ಸ್ವೀಕರಿಸಿದ್ದರು. ಇಂದಿನ ಚ್ಯಾರಿಟಿ ಪಂದ್ಯದ ಇನ್ನಿಂಗ್ಸ್ ಬ್ರೇಕ್ ಸಂದರ್ಭದಲ್ಲಿ ಸಚಿನ್ ಪೆರ್ರಿ ಓವರನ್ನು ಎಸುರಿಸಿದರು. ಈ ಓವರ್‌ನ ಮೊದಲ ಎಸೆತದಲ್ಲೇ ಬೌಂಡರಿ ಬಾರಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications