ಇಂಗ್ಲೆಂಡ್ ಕ್ರಿಕೆಟರ್ ಜೋಸ್ ಬಟ್ಲರ್‌ಗೆ ಮಾಜಿ ವೇಗಿ ಡ್ಯಾರೆನ್ ಗೌಫ್ ಎಚ್ಚರಿಕೆ

ಲಂಡನ್, ಜುಲೈ 13: ಫಾರ್ಮ್ ಕಳೆದುಕೊಂಡಿರುವ ಅನುಭವಿ ಇಂಗ್ಲೆಂಡ್ ಬ್ಯಾಟ್ಸ್‌ಮನ್ ಕಮ್ ವಿಕೆಟ್ ಕೀಪರ್ ಜೋಸ್ ಬಟ್ಲರ್ ಅವರು ವೆಸ್ಟ್ ಇಂಡೀಸ್ ವಿರುದ್ಧದ ಉಳಿದ ಎರಡು ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಬೇಕಾದ ಒತ್ತಡದಲ್ಲಿದ್ದಾರೆ ಎಂದು ಇಂಗ್ಲೆಂಡ್ ಮಾಜಿ ವೇಗಿ ಡ್ಯಾರೆನ್ ಗೌಫ್ ಅಭಿಪ್ರಾಯಪಟ್ಟಿದ್ದಾರೆ.
ಕಳೆದ 12 ಟೆಸ್ಟ್ ಇನ್ನಿಂಗ್ಸ್‌ಗಳಲ್ಲಿ 50 ರನ್ ಕೂಡ ಬಾರಿಸದ ಜೋಸ್ ಬಟ್ಲರ್, 4ನೇ ಇನ್ನಿಂಗ್ಸ್‌ನಲ್ಲಿ ಪಂದ್ಯ ಗೆಲುವಿನ 95 ರನ್ ಬಾರಿಸಿದ್ದ ವೆಸ್ಟ್ ಇಂಡೀಸ್‌ನ ಜರ್ಮೈನ್ ಬ್ಲ್ಯಾಕ್‌ವುಡ್ ಅವರನ್ನು ಎರಡನೇ ಇನ್ನಿಂಗ್ಸ್‌ನಲ್ಲಿ ಆಡಿಸದಿದ್ದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು. ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಬಟ್ಲರ್ 35+9 ರನ್ ಬಾರಿಸಿದ್ದರು.
'ನನ್ನ ಪ್ರಕಾರ ತನ್ನ ವೃತ್ತಿ ಜೀವನವನ್ನು ಉಳಿಸಿಕೊಳ್ಳಲು ಬಟ್ಲರ್ ಅವರಿಗಿನ್ನೂ ಎರಡು ಟೆಸ್ಟ್ ಪಂದ್ಯಗಳಿವೆ. ಅವರಿಗೆ ಭಯಂಕರ ಪ್ರತಿಭೆಯಿದೆ. ಯುವ ಆಟಗಾರರು ನೋಡಿ ಕಲಿಯುವಂತ ಆಟ ಬಟ್ಲರ್ ಅವರಲ್ಲಿದೆ. ಆದರೆ ಟೆಸ್ಟ್ ಕ್ರಿಕೆಟ್‌ನಲ್ಲಿ ನೀವು ಹೀಗೇ ಪದೇ ಪದೇ ಬೇಗನೆ ಔಟ್ ಆಗೋದನ್ನೇ ಮುಂದುವರೆಸಲಾಗೋಲ್ಲ. ಬಟ್ಲರ್ ಈಗ ಅದನ್ನೇ ಮಾಡುತ್ತಿದ್ದಾರೆ,' ಎಂದು ಗೌಫ್ ಹೇಳಿದ್ದಾರೆ.
ಸ್ಕೈ ಸ್ಪೋರ್ಟ್ಸ್ ಕ್ರಿಕೆಟ್ ಜೊತೆ ಮಾತನಾಡಿದ ಡ್ಯಾರೆನ್ ಗೌಫ್ ಈ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಗೌಫ್ ಇಂಗ್ಲೆಂಡ್ ಪರ 58 ಟೆಸ್ಟ್ ಪಂದ್ಯಗಳಲ್ಲಿ 229 ವಿಕೆಟ್ ದಾಖಲೆ ಹೊಂದಿದ್ದಾರೆ. ಅಂದ್ಹಾಗೆ, ವೆಸ್ಟ್ ಇಂಡೀಸ್ ವಿರುದ್ಧದ ಕಳಪೆ ಬ್ಯಾಟಿಂಗ್‌ನಿಂದಾಗಿ ಇಂಗ್ಲೆಂಡ್ ತಂಡ ಮೊದಲ ಟೆಸ್ಟ್‌ನಲ್ಲಿ 4 ವಿಕೆಟ್ ಸೋಲನುಭವಿಸಿದೆ. ಇದೇ ಕಾರಣಕ್ಕೆ ಗೌಫ್ ಇಂಗ್ಲೆಂಡ್ ತಂಡದ ಅನುಭವಿ ಆಟಗಾರನನ್ನು ಎಚ್ಚರಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications