
ಬೈಜೂಸ್ ಸಂಸ್ಥೆ ಬಿಸಿಸಿಐ ಜೊತೆಗಿನ ಜರ್ಸಿ ಪ್ರಾಯೋಜಕತ್ವ ಒಪ್ಪಂದದಿಂದ ಹೊರಬರುವುದು ಬಹುತೇಕ ಖಚಿತವಾಗಿದೆ. ಆರ್ಥಿಕ ಸಂಕಷ್ಟಕ್ಕೆ ಒಳಗಾಗಿರುವ ಬೈಜೂಸ್ ಈ ನಿರ್ಧಾರವನ್ನು ತೆಗೆದುಕೊಳ್ಳಲು ಮುಂದಾಗಿದೆ ಎನ್ನಲಾಗಿದೆ. ಈ ವಿಚಾರವನ್ನು ಬಿಸಿಸಿಐ ಅಧಿಕಾರಿಯೊಬ್ಬರು ಖಚಿತಪಡಿಸಿದ್ದು ಈ ವಿಚಾರವಾಗಿ ಬಿಸಿಸಿಐಗೆ ಬೈಜೂಸ್ ಸಂಸ್ಥೆ ಪತ್ರಬರೆದಿದೆ ಎಂದಿದ್ದಾರೆ.
ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರ ಪ್ರತಿಕ್ರಿಯೆಯನ್ನು ಇನ್‌ಸೈಡ್‌ಸ್ಪೋರ್ಟ್ ಪ್ರಕಟಿಸಿದ್ದು ಬೈಜೂಸ್ ಪತ್ರಬರೆದಿರುವುದನ್ನು ಖಚಿತಪಡಿಸಿದ್ದಾರೆ. ಬಿಸಿಸಿಐಗೆ ಬೈಜೂಸ್ ಪತ್ರವನ್ನು ಪಡೆದಿದ್ದು ಅವರು ಜರ್ಸಿ ಪ್ರಾಯೋಜಕತ್ವದಿಂದ ಹೊರಬರಲು ಅವರು ಬಯಸಿದ್ದಾರೆ ಎಂದು ಬಿಸಿಸಿಐ ಅಧಿಕಾರಿ ಪ್ರತಿಕ್ರಿಯಿಸಿದ್ದಾರೆ.
"ಹೌದು ಅವರು ನಮಗೆ ಪತ್ರವನ್ನು ಬರೆದಿದ್ದು ಜರ್ಸಿ ಪ್ರಯೋಜಕತ್ವದಿಂದ ಹೊರಬರಲು ಬಯಸಿದ್ದಾರೆ. ಈ ವಿಚಾರವನ್ನು ಅಪೆಕ್ಸ್ ಕೌನ್ಸಿಲ್ ಮೀಟಿಂಗ್‌ನಲ್ಲಿ ಚರ್ಚಿಸಲಾಗುತ್ತದೆ. ಈ ಒಪ್ಪಂದ ಎಲ್ಲಾ ಜವಾಬ್ಧಾರಿಗಳನ್ನು ನಿರ್ವಹಿಸಿದ ಬಳಿಕ ಅವರು ಪ್ರಾಯೋಜಕತ್ವದಿಂದ ಹೊರಬರಬಹುದು" ಎಂದಿದ್ದಾರೆ ಬಿಸಿಸಿಐನ ಹಿರಿಯ ಅಧಿಕಾರಿ.
ಬೈಜೂಸ್ ಸಂಸ್ಥೆ ಬಿಸಿಸಿಐ ಜೊತೆಗಿನ ತನ್ನ ಒಪ್ಪಂದವನ್ನು 2023ರ ವರ್ಷಾಂತ್ಯದ ವರೆಗೆ ವಿಸ್ತರಿಸಿಕೊಂಡಿತ್ತು. 55 ಮಿಲಿಯನ್ ಡಾಲರ್‌ನ ಒಪ್ಪಂದ ಇದಾಗಿತ್ತು. ಆದರೆ ಈಗ ಎಜ್‌ಟೆಕ್ ಕಂಪನಿ ಆರ್ಥಕವಾಗಿ ಸಂಕಷಟದಲ್ಲಿದೆ. ಹೀಗಾಗಿ ಮಾರ್ಚ್ ತಿಂಗಳಿಗೂ ಮುನ್ನವೇ ಒಪ್ಪಂದಿಂದ ಹೊರಬರಲು ನಿರ್ಧರಿಸಿದೆ. ಮೂಲ ಒಪ್ಪಂದ 2022ರ ಮಾರ್ಚ್‌ಗೆ ಅಂತ್ಯವಾಗಿತ್ತು.