For Quick Alerts
ALLOW NOTIFICATIONS  
For Daily Alerts
 

ಬ್ಯಾನ್ ಆಗಿದ್ದ ಬ್ಯಾನ್‌ಕ್ರಾಫ್ಟ್ ಈಗ ಕ್ರಿಕೆಟ್ ತಂಡವೊಂದರ ನಾಯಕ!

Cameron Bancroft: Durham name Australian as captain after return from ban

ಸಿಡ್ನಿ, ಮಾರ್ಚ್ 22: ಚೆಂಡು ವಿರೂಪ ಪ್ರಕರಣದಲ್ಲಿ ನಿಷೇಧಕ್ಕೀಡಾಗಿದ್ದ ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಕೆಮರಾನ್ ಬ್ಯಾನ್‌ಕ್ರಾಫ್ಟ್‌ ಆಸೀಸ್‌ ಕೌಂಟಿ ಚಾಂಪಿಯನ್‌ಶಿಪ್‌ನ ತಂಡ ಡರ್ಹಾಮ್‌ನ ನಾಯಕರಾಗಿ ಆಯ್ಕೆಯಾಗಿದ್ದಾರೆ. ಕಳೆದ ವರ್ಷ ಬ್ಯಾನ್‌ಕ್ರಾಫ್ಟ್‌ ಅವರು ಕ್ರಿಕೆಟ್ ಆಸ್ಟ್ರೇಲಿಯಾದಿಂದ ನಿಷೇಧಕ್ಕೆ ಗುರಿಯಾಗಿದ್ದರು.

ದಕ್ಷಿಣ ಆಫ್ರಿಕಾ ವಿರುದ್ಧ ನಡೆದಿದ್ದ ಟೆಸ್ಟ್ ವೇಳೆ ಬಾಲ್ ಟ್ಯಾಂಪರಿಂಗ್‌ನಲ್ಲಿ ಪಾಲ್ಗೊಂಡು ಆಸ್ಟ್ರೇಲಿಯಾ ಆಟಗಾರರಾದ ಸ್ಟೀವ್ ಸ್ಮಿತ್, ಡೇವಿಡ್ ವಾರ್ನರ್ ಮತ್ತು ಕೆಮರಾನ್ ಬ್ಯಾನ್‌ಕ್ರಾಫ್ಟ್‌ 2018ರ ಮಾರ್ಚ್ 28ರಂದು ನಿಷೇಧಿಸಲ್ಪಟ್ಟಿದ್ದರು. ಸ್ಮಿತ್-ವಾರ್ನರ್‌ಗೆ ಒಂದು ವರ್ಷ ಮತ್ತು ಬ್ಯಾನ್‌ಕ್ರಾಫ್ಟ್‌ಗೆ 9 ತಿಂಗಳ ನಿಷೇಧ ಹೇರಲಾಗಿತ್ತು.

26ರ ಹರೆಯದ ಕೆಮರಾನ್ ಅವರ ನಿಷೇಧ ಕಳೆದ ಡಿಸೆಂಬರ್‌ಗೆ ಕೊನೆಗೊಂಡಿತ್ತು. ಇದೀಗ ಬ್ಯಾನ್‌ಕ್ರಾಫ್ಟ್‌ ಮತ್ತೆ ಕ್ರಿಕೆಟ್‌ನಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ಕಳೆದ ವರ್ಷ ನಿಷೇಧಕ್ಕೀಡಾಗಿದ್ದ ಆಸೀಸ್ ಆಟಗಾರರಾದ ಸ್ಮಿತ್ ಮತ್ತು ವಾರ್ನರ್ ಮೇಲಿನ ನಿಷೇಧವೂ ಇದೇ ಮಾರ್ಚ್ 28ರಂದು ಅಂತ್ಯಗೊಳ್ಳಲಿದೆ. ಇಬ್ಬರೂ ಐಪಿಎಲ್‌ನಲ್ಲಿ ಮತ್ತೆ ಕಣಕ್ಕಿಳಿಯುತ್ತಿದ್ದಾರೆ.

Story first published: Friday, March 22, 2019, 13:48 [IST]
Other articles published on Mar 22, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+