Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Cameron Green: ಐಪಿಎಲ್ 2025ರ ಮಧ್ಯದಲ್ಲಿ ಆರ್‌ಸಿಬಿ ಮಾಜಿ ಆಟಗಾರ ಫಿಟ್

ಐಪಿಎಲ್ 2025 ರ ಸೀಸನ್ ಅದ್ಧೂರಿಯಾಗಿ ನಡೆಯುತ್ತಿದೆ. ಎಲ್ಲಾ ತಂಡಗಳು ಗೆಲುವಿಗಾಗಿ ಹೋರಾಟ ನಡೆಸುತ್ತಿವೆ. ಪ್ರತಿ ತಂಡವೂ ಬಲಿಷ್ಠವಾಗಿದ್ದು, ಐಪಿಎಲ್ 2025 ರ ಸೀಸನ್ ಭಾರಿ ಕುತೂಹಲ ಮೂಡಿಸಿದೆ. ಇದರ ಮಧ್ಯೆ ಕೆಲವು ಆಟಗಾರರ ಗಾಯದಿಂದ ಹೊರಗುಳಿಯುತ್ತಿದ್ದಾರೆ. ಆದರೆ ಕೆಲವು ಆಟಗಾರರು ಮತ್ತೆ ಮೈದಾನಕ್ಕಿಳಿಯಲು ಸಜ್ಜಾಗುತ್ತಿದೆ. ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ಆಲ್‌ರೌಂಡರ್ ಕ್ಯಾಮೆರಾನ್ ಗ್ರೀನ್ ಗಾಯದಿಂದ ಚೇತರಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಕ್ಯಾಮೆರಾನ್ ಗ್ರೀನ್ ಗಾಯಗೊಂಡಿರುವ ಕಾರಣ ಐಪಿಎಲ್ 2025 ರ ಮೆಗಾ ಹರಾಜಿನಲ್ಲಿ ಭಾಗವಹಿಸಿರಲಿಲ್ಲ.

ಕ್ಯಾಮೆರಾನ್ ಗ್ರೀನ್ ಈಗ ಚೇತರಿಸಿಕೊಂಡಿರುವುದು ಆಸ್ಟ್ರೇಲಿಯಾ ತಂಡಕ್ಕೆ ಸಂತಸ ತರಿಸಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ 2023-25 ರ ಫೈನಲ್ ಪಂದ್ಯವು ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ನಡುವೆ ಲಂಡನ್‌ನ ಲಾರ್ಡ್ಸ್‌ ಅಂಗಳದಲ್ಲಿ ಜೂನ್‌ 11 ರಿಂದ 15 ರವರೆಗೆ ನಡೆಲಿದೆ. ಇಂತಹ ಸಂದರ್ಭದಲ್ಲಿ ಕ್ಯಾಮೆರಾನ್ ಗ್ರೀನ್ ಫಿಟ್ ಆಗಿರುವುದು ಕಾಂಗೂರು ಪಡೆಗೆ ಆನೆ ಬಲ ಬಂದಿದೆ.

Cameron Green is fit to play in the middle of IPL 2025

ಆಸ್ಟ್ರೇಲಿಯಾ ತಂಡ ಸತತ ಎರಡನೇ ಬಾರಿಗೆ ಫೈನಲ್ ಪಂದ್ಯವನ್ನು ಆಡಲು ಸಜ್ಜಾಗಿದೆ. ಮತ್ತೊಂದೆಡೆ ದಕ್ಷಿಣ ಆಫ್ರಿಕಾ ತಂಡ ಮೊದಲ ಬಾರಿಗೆ ಫೈನಲ್‌ಗೆ ಆರ್ಹತೆ ಪಡೆದಿದೆ. ಜೂನ್‌ನಲ್ಲಿ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೂ ಮುನ್ನ ಕ್ಯಾಮೆರನ್ ಗ್ರೀನ್ ಫಿಟ್ ಆಗಿರುವುದು ಆಸ್ಟ್ರೇಲಿಯಾ ತಂಡಕ್ಕೆ ಸಂತಸ ತರಿಸಿದೆ. ಗ್ರೀನ್ ಮಾತ್ರವಲ್ಲದೆ, ಸ್ಟಾರ್ ಸ್ಪಿನ್ನರ್ ಕೂಡ ಫೈನಲ್ ಆಡಲು ರೆಡಿಯಾಗಿದ್ದಾರೆ.

ಸೋಮವಾರ, ಇಂಗ್ಲೆಂಡ್‌ನಲ್ಲಿ ನಡೆಯಲಿರುವ ಕೌಂಟಿ ಪಂದ್ಯಗಳ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಕ್ಯಾಮೆರಾನ್ ಗ್ರೀನ್, ತಾನು ಫಿಟ್ ಆಗಿರುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ನಾನು ಫಿಟ್‌ ಆಗಿ ಚೆನ್ನಾಗಿದ್ದೇನೆ. ಶೀಲ್ಡ್ ಫೈನಲ್‌ಗೆ ಆಡಿದ್ದರೆ ತುಂಬಾ ಚೆನ್ನಾಗಿರುತ್ತಿತ್ತು. ನಾನು ಅದಕ್ಕಾಗಿ ಹತಾಶನಾಗಿದ್ದೆ, ಆದರೆ ಅದು ಆಗಲಿಲ್ಲ. ನಾನು ನಿಜವಾಗಿಯೂ ಸಂಪೂರ್ಣವಾಗಿ ಫಿಟ್ ಮತ್ತು ಆರೋಗ್ಯವಾಗಿದ್ದೇನೆ ಎಂದಿದ್ದಾರೆ.

ಇದಕ್ಕೂ ಮುನ್ನ ಆಸ್ಟ್ರೇಲಿಯಾ ತಂಡದ ಸ್ಟಾರ್ ಸ್ಪಿನ್ನರ್ ನಾಥನ್ ಲಿಯಾನ್ ಕೂಡ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ಗೆ ತಾನು ಫಿಟ್ ಎಂದು ಘೋಷಿಸಿಕೊಂಡಿದ್ದರು. ಲಿಯಾನ್ ಸೋಮವಾರ ಸಿಡ್ನಿಯಲ್ಲಿ ಈ ಬಗ್ಗೆ ಹೇಳಿದ್ದರು.

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಆರಂಭವಾದ ನಂತರ ಆಸ್ಟ್ರೇಲಿಯಾ ಸತತ ಎರಡನೇ ಬಾರಿಗೆ ಫೈನಲ್ ಆಡಲಿದೆ. ಇದಕ್ಕೂ ಮುನ್ನ 2021-23 ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಭಾರತ ತಂಡವನ್ನು ಸೋಲಿಸುವ ಮೂಲಕ ಆಸ್ಟ್ರೇಲಿಯಾ ಐಸಿಸಿ ಟ್ರೋಫಿಯನ್ನು ಗೆದ್ದಿತ್ತು. ಇತ್ತ ಭಾರತ ಇದೇ ಮೊದಲ ಬಾರಿಗೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಿಂದ ಹೊರಗುಳಿದಿದೆ. 2019-21 ರಲ್ಲಿ ಭಾರತ ತಂಡ ನ್ಯೂಜಿಲೆಂಡ್ ವಿರುದ್ಧ ಮೊದಲ ಫೈನಲ್ ಆಡಿತ್ತು. ಈ ವೇಳೆ ಭಾರತ ರನ್ನಪ್ ಆಪ್ ಆಗಿತ್ತು.

ಇದಾದ ಬಳಿಕ 2021-23 ರಲ್ಲಿ ಎರಡನೇ ಬಾರಿಗೆ ಫೈನಲ್ ತಲುಪಿ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ಸೋಲು ಕಂಡಿತ್ತು. 10 ವರ್ಷಗಳ ನಂತರ ಆಸ್ಟ್ರೇಲಿಯಾ ವಿರುದ್ಧ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿ ಸೋಲುವ ಮೂಲಕ ಭಾರತ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಿಂದ ಹೊರಗುಳಿಬೇಕಾಯಿತು.

Story first published: Monday, March 31, 2025, 19:20 [IST]
Other articles published on Mar 31, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+