For Quick Alerts
ALLOW NOTIFICATIONS  
For Daily Alerts
 

IND vs AUS ODI: ಸರಣಿಗೂ ಮುನ್ನ ಆಸೀಸ್‌ ತಂಡಕ್ಕೆ ದೊಡ್ಡ ಪೆಟ್ಟು: ಸ್ಟಾರ್ ಆಲೌಂಡರ್‌ ಔಟ್

ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಮೂರು ಏಕದಿನ ಪಂದ್ಯಗಳ ಸರಣಿ ಅಕ್ಟೋಬರ್‌ 19 ರಂದು ಪರ್ತ್‌ನಲ್ಲಿ ಆರಂಭವಾಗಲಿದೆ. ಈ ಸರಣಿಗೆ ಈಗಾಗಲೇ ಉಭಯ ತಂಡಗಳನ್ನು ಪ್ರಕಟಿಸಲಾಗಿದೆ. ಟೀಮ್ ಇಂಡಿಯಾ ಈ ಸರಣಿಗಾಗಿ ಮೈದಾನದಲ್ಲಿ ತಾಲೀಮು ನಡೆಸಿದೆ. ಈ ನಡುವೆ ಆಸ್ಟ್ರೇಲಿಯಾಕ್ಕೆ ಸರಣಿ ಆರಂಭಕ್ಕೂ ಮುನ್ನವೇ ದೊಡ್ಡ ಪೆಟ್ಟು ಬಿದ್ದಿದೆ. ತಂಡದ ಸ್ಟಾರ್ ಆಲ್‌ರೌಂಡರ್ ಕ್ಯಾಮರೂನ್‌ ಗ್ರೀನ್‌ ಗಾಯದ ಕಾರಣದಿಂದ ಇಡೀ ಸರಣಿಯಿಂದ ಹೊರ ನಡೆದಿದ್ದಾರೆ. ಇವರ ಬದಲಿಗೆ ಬೇರೆ ಆಟಗಾರನನ್ನು ಸಹ ಕ್ರಿಕೆಟ್ ಆಸ್ಟ್ರೇಲಿಯಾ ಘೋಷಣೆ ಮಾಡಿದೆ.

ಪರ್ತನ್‌ನಲ್ಲಿ ಆರಂಭವಾಗಲಿರುವ ಏಕದಿನ ಪಂದ್ಯಕ್ಕೂ ಮುನ್ನ ಬಂದಿರುವ ಸುದ್ದಿ ಆಸ್ಟ್ರೇಲಿಯಾ ತಂಡದ ಮನೋಬಲವನ್ನು ಕುಗ್ಗಿಸಿದೆ. ಕ್ಯಾಮರೂನ್‌ ಗ್ರೀನ್ ಅವರ ಸ್ಥಾನದಲ್ಲಿ ಮಾರ್ನಸ್‌ ಲಂಬುಶೇನ್‌ ಅವರನ್ನು ಆಯ್ಕೆ ಮಾಡಲಾಗಿದೆ. ಇವರು ಭಾರತ ವಿರುದ್ಧದ ಸರಣಿಯಲ್ಲಿ ಕಣಕ್ಕೆ ಇಳಿಯಲು ಸಿದ್ಧರಾಗಿದ್ದಾರೆ. ಇವರು ಈಗಾಗಲೇ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ದೇಶೀಯ ಟೂರ್ನಿಯಲ್ಲಿ ಆಡುತ್ತಿದ್ದರು.

Cameron Green Ruled Out of India ODI Series Due to Injury Marnus Labuschagne Named Replacement

ಕ್ಯಾಮರೂನ್‌ ಗ್ರೀನ್‌ ಸಹ ಆಸ್ಟ್ರೇಲಿಯಾದ ದೇಶೀಯ ಕ್ರಿಕೆಟ್‌ ಟೂರ್ನಿಯಲ್ಲಿ ವೆಸ್ಟರ್ನ್‌ ಆಸ್ಟ್ರೇಲಿಯಾ ತಂಡದ ಪರ ಆಡುತ್ತಿದ್ದರು. ನ್ಯೂ ಸೌತ್ ವೇಲ್ಸ್‌ ವಿರುದ್ಧದ ಪಂದ್ಯದಲ್ಲಿ ಆಡುವಾಗ ಇವರು 8 ಓವರ್ ಬೌಲಿಂಗ್ ನಡೆಸಬೇಕಿತ್ತು. ಆದರೆ ಇವರು ಕೇವಲ ನಾಲ್ಕು ಓವರ್‌ ಬೌಲಿಂಗ್ ಮಾಡಿ 1 ವಿಕೆಟ್‌ ಕಬಳಿಸಿ ದೂರ ಸರಿದರು. ಆ ಬಳಿಕ ಇವರು ಆಸ್ಟ್ರೇಲಿಯಾದ ವೈದ್ಯಕೀಯ ಸಿಬ್ಬಂದಿ ಮೇಲ್ವಿಚಾರಣೆಯಲ್ಲಿ ಚಿಕಿತ್ಸೆ ಪಡೆದರು. ಅವರ ಗಾಯ ಚಿಕ್ಕದಾಗಿದ್ದು, ಮುನ್ನೆಚ್ಚರಿಕೆಯಾಗಿ ಅವರನ್ನು ತಂಡದಿಂದ ಹೊರಗಿಡಲಾಗಿದೆ.

ಆಸ್ಟ್ರೇಲಿಯಾ ತಂಡಕ್ಕೆ ಗಾಯ ಬಹುವಾಗಿ ಕಾಡುತ್ತಿದೆ. ಈಗಾಗಲೇ ತಂಡದ ಸ್ಟಾರ್ ಆಟಗಾರ ಪ್ಯಾಟ್ ಕಮಿನ್ಸ್‌ ಗಾಯದ ಕಾರಣದಿಂದಾಗಿ ಹೊರಗುಳಿದಿದ್ದಾರೆ. ಈ ಮಧ್ಯೆ ಕ್ಯಾಮರೂನ್ ಗ್ರೀನ್‌ ಸಹ ತಂಡದಿಂದ ಹೊರ ನಡೆದಿರುವುದು ತಂಡಕ್ಕೆ ದೊಡ್ಡ ಪೆಟ್ಟು ಬಿದ್ದಿದೆ. ಇವರು ಇತ್ತೀಚಿಗೆ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಪಂದ್ಯದಲ್ಲಿ ಬಿರುಸಿನ ಬ್ಯಾಟಿಂಗ್ ಪ್ರದರ್ಶನ ನೀಡಿ ಶತಕ ಬಾರಿಸಿದ್ದರು. ಇನ್ನು ಆಸೀಸ್ ತಂಡದ ವಿಕೆಟ್‌ ಕೀಪರ್ ಜೋಶ್ ಇಂಗ್ಲಿಸ್ ಸಹ ಸ್ನಾಯು ಸೆಳೆತಕ್ಕೆ ಒಳಗಾಗಿದ್ದು, ಮೊದಲೆರೆಡು ಪಂದ್ಯಗಳಿಂದ ದೂರ ಉಳಿಯುವ ಸಾಧ್ಯತೆ ಇದೆ.

Cameron Green Ruled Out of India ODI Series Due to Injury Marnus Labuschagne Named Replacement

ಆಲ್‌ರೌಂಡರ್‌ ಸಾಧನೆ

ಮಾರ್ನಸ್‌ ಲಂಬುಶೇನ್‌ ಅವರು ಏಕದಿನ ಕ್ರಿಕೆಟ್‌ನಲ್ಲಿ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದರಿಂದ ಅವರನ್ನು ತಂಡದಿಂದ ಕೈ ಬಿಡಲಾಗಿತ್ತು. ಆ ಬಳಿಕ ಇವರು ದೇಶೀಯ ಕ್ರಿಕೆಟ್‌ನಲ್ಲಿ ಬೆವರು ಹರಿಸಿದ್ದಾರೆ. ಇವರು ತಾವು ಆಡಿದ ಕೊನೆಯ 5 ದೇಶೀಯ ಪಂದ್ಯಗಳಲ್ಲಿ 4 ಶತಕ ಬಾರಿಸಿದ್ದಾರೆ. ಇವರ ಕ್ಲಾಸಿಕ್‌ ಫಾರ್ಮ್‌ ನೋಡಿದರೆ, ಭಾರತದ ವಿರುದ್ಧದ ಸರಣಿಯಲ್ಲಿ ಆಡುವ ಅವಕಾಶವನ್ನು ಪಡೆಯುವ ಸಾಧ್ಯತೆ ಇದೆ. ಮಾರ್ನಸ್‌ ಈಗಾಗಲೇ ಆಸ್ಟ್ರೇಲಿಯಾ ಪರ 66 ಏಕದಿನ ಪಂದ್ಯಗಳಲ್ಲಿ ಆಸೀಸ್ ಪರ ಕಣಕ್ಕೆ ಇಳಿದ್ದು, 1871 ರನ್ ಗಳಿಸಿದ್ದಾರೆ. ಇದರಲ್ಲಿ 2 ಶತಕ 12 ಅರ್ಧಶತಕ ಸೇರಿವೆ.

Story first published: Friday, October 17, 2025, 13:07 [IST]
Other articles published on Oct 17, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+