Cameron Green: 25 ಕೋಟಿ ಆಟಗಾರ ಈ ಐಪಿಎಲ್‌ನಲ್ಲಿ ಎದುರಿಸಿದ್ದು 14 ಎಸೆತ ಬಾರಿಸಿದ್ದು 24 ರನ್
ಇಂಡಿಯನ್ ಪ್ರೀಮಿಯರ್ ಲೀಗ್ ( ಐಪಿಎಲ್) ಆರಂಭವಾಗಿದೆ. ಈ ಲೀಗ್‌ನಲ್ಲಿ ಹಲವು ಸ್ಟಾರ್ ಆಟಗಾರರು ತಮ್ಮ ಘನತೆಗೆ ತಕ್ಕ ಪ್ರದರ್ಶನ ನೀಡುತ್ತಿದ್ದಾರೆ. ಇನ್ನು ಹಲವು ಆಟಗಾರರು ಲಯಕ್ಕಾಗಿ ಪರದಾಡುತ್ತಿದ್ದಾರೆ. ಈ ಆಟಗಾರರ ಪಟ್ಟಿಯಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಳ್ಳುವ ಆಟಗಾರ ಕೋಲ್ಕತ್ತ ನೈಟ್ ರೈಡರ್ಸ್ ( ಕೆಕೆಆರ್) ತಂಡದ ಆಲ್‌ರೌಂಡರ್ ಕ್ಯಾಮರೂನ್ ಗ್ರೀನ್. ಇವರ ಮೇಲೆ ಇಟ್ಟ ಭರವಸೆಯನ್ನು ಮೂರು ಪಂದ್ಯಗಳಲ್ಲಿ ನುಚ್ಚುನೂರು ಮಾಡಿದ್ದಾರೆ.
ಆಸ್ಟ್ರೇಲಿಯಾ ತಂಡದ ಸ್ಟಾರ್ ಆಲ್‌ರೌಂಡರ್ ಕ್ಯಾಮರೂನ್ ಗ್ರೀನ್ ಅವರನ್ನು ಕೆಕೆಆರ್ ಖರೀದಿಸಿತ್ತು. ಇವರಿಗೆ ಐಪಿಎಲ್ ಹರಾಜಿನಲ್ಲಿ ಭಾರೀ ಮೊತ್ತವನ್ನು ನೀಡಿ ತಂಡಕ್ಕೆ ಸೇರಿಸಿಕೊಂಡಿತ್ತು. ಇವರು ಐಪಿಎಲ್ ಹರಾಜಿನ ಅಂಗಳದಲ್ಲಿ 2 ಕೋಟಿ ರೂ. ಮೂಲ ಬೆಲೆಯೊಂದಿಗೆ ಕಣಕ್ಕೆ ಇಳಿದಿದ್ದರು. ಇವರಿಗೆ ಕೆಕೆಆರ್ 25.20 ಕೋಟಿ ನೀಡಿ ತನ್ನ ತಂಡಕ್ಕೆ ಖರೀದಿಸಿತು. ಆದರೆ ಇವರು ತಂಡ ತಮ್ಮ ಮೇಲೆ ಇಟ್ಟ ನಂಬಿಕೆಗೆ ಪೂರಕವಾಗಿ ಆಟವಾಡಲಿಲ್ಲ.

ಕೆಕೆಆರ್ ತಂಡದ ಸ್ಟಾರ್ ಆಟಗಾರ ಆಂಡ್ರೆ ರಸೆಲ್ ಅವರನ್ನು ತಂಡದಿಂದ ಕೈ ಬಿಡಲಾಗಿತ್ತು. ಇವರ ಸ್ಥಾನವನ್ನು ತುಂಬ ಬಲ್ಲ ಆಟಗಾರನಿಗೆ ಕೆಕೆಆರ್ ಹುಡುಕಾಟ ನಡೆಸಿತ್ತು. ಆಗ ಕೆಕೆಆರ್ ತಂಡದ ಚಿತ್ತ ಕದ್ದ ಆಟಗಾರ ಕ್ಯಾಮರೂನ್ ಗ್ರೀನ್. ಇವರ ಅನುಭವವನ್ನು ನೋಡಿಕೊಂಡು ಕೆಕೆಆರ್ ಮಣೆ ಹಾಕಿತು. ಅಲ್ಲದೆ ಭಾರೀ ಮೊತ್ತವನ್ನು ಸಹ ನೀಡಿತು. ಆದರೆ ಈ ಪ್ಲೇಯರ್ ಕಳೆದ ಮೂರು ಪಂದ್ಯಗಳಲ್ಲಿ ಆಡಿದ ಧಾಟಿ ನಿಜಕ್ಕೂ ಕೆಕೆಆರ್ ತಲೆನೋವು ಹೆಚ್ಚು ಮಾಡಿದೆ.
ಕ್ಯಾಮರೂನ್ ಗ್ರೀನ್ ಈ ಆವೃತ್ತಿಯಲ್ಲಿ ಆಡಿದ ಮೂರು ಪಂದ್ಯಗಳಲ್ಲಿ 14 ಎಸೆತದ ನೆರವಿನಿಂದ 24 ರನ್ ಸಿಡಿಸಿದರು. ಇದರಲ್ಲಿ 2 ಬೌಂಡರಿ, 1 ಸಿಕ್ಸರ್ ಸೇರಿದೆ.
ಲಯಕ್ಕಾಗಿ ಪರದಾಟ
26 ವರ್ಷದ ಕೆಕೆಆರ್ ಆಟಗಾರ ನಿಜಕ್ಕೂ ಪ್ರತಿಭಾನ್ವಿತ. ಆದರೆ ಸದ್ಯ ಲಯಕ್ಕಾಗಿ ಪರದಾಡುತ್ತಿದ್ದಾರೆ. ಇವರು ಈಗಾಗಲೇ ಐಪಿಎಲ್‌ನಲ್ಲಿ ಮೂರು ತಂಡಗಳ ಪರ ಆಡಿದ್ದಾರೆ. ಇವರು ಮೊದಲು ಮುಂಬೈ ಇಂಡಿಯನ್ಸ್ ಪರ ಪದಾರ್ಪಣೆ ಮಾಡಿದರು. ಅಲ್ಲದೆ ಅದೇ ಆವೃತ್ತಿಯಲ್ಲಿ ಶತಕ ಬಾರಿಸಿ ಮಿಂಚಿದರು. ಆದರೆ ಇವರನ್ನು ಮುಂಬೈ ಮೆಗಾ ಹರಾಜಿಗೂ ಮುನ್ನ ಕೈ ಬಿಟ್ಟಿತು. ಆಗ ಆರ್‌ಸಿಬಿ ಇವರನ್ನು ತನ್ನ ತಂಡಕ್ಕೆ ಸೇರಿಸಿಕೊಂಡಿತು. ಆರ್‌ಸಿಬಿ ಪರ 2024ರಲ್ಲಿ 13 ಪಂದ್ಯ ಆಡಿದ ಗ್ರೀನ್, 255 ರನ್ ಸಿಡಿಸಿದರು. 2025ರಲ್ಲಿ ಇವರು ಗಾಯದಿಂದಾಗಿ ಅಂಗಳಕ್ಕೆ ಪ್ರವೇಶಿಸಲಿಲ್ಲ. ಇವರನ್ನು ಆರ್‌ಸಿಬಿ ರಿಲೀಸ್ ಮಾಡಿತ್ತು. ಇವರಿಗೆ ಕೆಕೆಆರ್ ಖರೀದಿಸಿತು.
ಕ್ಯಾಮರೂನ್ ಗ್ರೀನ್ ಐಪಿಎಲ್‌ನಲ್ಲಿ ಆಡಿದ 32 ಪಂದ್ಯಗಳಲ್ಲಿ 36ರ ಸರಾಸರಿಯಲ್ಲಿ 731 ರನ್ ಸಿಡಿಸಿದ್ದಾರೆ. ಆದರೆ ಇವರು 16 ವಿಕೆಟ್ ಪಡೆದಿದ್ದಾರೆ. ಇವರು ಆಸ್ಟ್ರೇಲಿಯಾ ಪರ 37 ಟೆಸ್ಟ್, 31 ಏಕದಿನ, 28 ಟಿ20 ಪಂದ್ಯಗಳನ್ನು ಆಡಿದ ಅನುಭವ ಹೊಂದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications