ಯುವರಾಜ್ ಸಿಂಗ್ ಕೋಚಿಂಗ್ ಬಹಳ ಉಪಯೋಗಕ್ಕೆ ಬಂತು: ಗಿಲ್

ಚಂಡೀಗಢ: ಮೆಲ್ಬರ್ನ್ ಸ್ಟೇಡಿಯಂನಲ್ಲಿನ ಪಾದಾರ್ಪಣೆ ಪಂದ್ಯದಲ್ಲಿ ನೇಥನ್ ಲಿಯಾನ್ ಎಸೆತಗಳಿಗೆ ಫ್ರಂಟ್ ಫೂಟ್ ಆಟ, ಗಬ್ಬಾ ಸ್ಟೇಡಿಯಂನಲ್ಲಿ ಮಿಚೆಲ್ ಸ್ಟಾರ್ಕ್ ಅವರ ಮಾರಕ ಎಸೆತಗಳಿಗೆ ನಿರ್ಭೀತಿಯಾಗಿ ಆಡುತ್ತಿದ್ದ ಪರಿ ಶುಬ್ಮನ್ ಗಿಲ್ ಅವರನ್ನು ಎಲ್ಲರೂ ಮೆಚ್ಚಿಕೊಳ್ಳುವಂತೆ ಮಾಡಿತ್ತು.
ಆಸ್ಟ್ರೇಲಿಯಾದಲ್ಲಿ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ 2-1ರ ಐತಿಹಾಸಿಕ ಗೆಲುವು ದಾಖಲಿಸುವಲ್ಲಿ ಶುಬ್ಮನ್ ಗಿಲ್ ಕೊಡುಗೆ ಮಹತ್ವದ್ದಾಗಿತ್ತು. ಸರಣಿ ಮುಗಿಸಿ ಭಾರತಕ್ಕೆ ಬಂದಿರುವ ಗಿಲ್ ಮಾತನಾಡಿ, 'ನಾನೀಗ ಆರಾಮವಾಗಿದ್ದೇನೆ. ಭಾರತಕ್ಕೆ ಪಾದಾರ್ಪಣೆ ಮಾಡಿದ್ದು ನನಗೆ ದೊಡ್ಡ ಸಮಾಧಾನ ನೀಡಿದೆ,' ಎಂದಿದ್ದಾರೆ.
ಟೆಸ್ಟ್ ಸರಣಿ ಬಗ್ಗೆ ಅಭಿಪ್ರಾಯ ಹಂಚಿಕೊಂಡ ಗಿಲ್, 'ಆರಂಭದಲ್ಲಿ ನಾನು ಕೊಂಚ ನರ್ವಸ್ ಆಗಿದ್ದೆ. ಆದರೆ ಇನ್ನಿಂಗ್ಸ್ ಆಡಿದಂತೆಲ್ಲ ನನ್ನ ಆತ್ಮವಿಶ್ವಾಸ ಬೆಳೆಯುತ್ತಿತ್ತು,' ಎಂದಿದ್ದಾರೆ. ಐಪಿಎಲ್‌ಗೂ ಮುನ್ನ ಭಾರತದ ಮಾಜಿ ಆಲ್ ರೌಂಡರ್, ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್ ಪಂಜಾಬ್ ಯುವ ಆಟಗಾರರಿಗೆ ಕೋಚಿಂಗ್ ಕ್ಯಾಂಪ್ ನಡೆಸಿದ್ದರು. ಆ ಕ್ಯಾಂಪ್ ಆಸ್ಟ್ರೇಲಿಯಾದಲ್ಲಿ ನೆರವಿಗೆ ಬಂತು ಎಂದು ಗಿಲ್ ಹೇಳಿಕೊಂಡಿದ್ದಾರೆ.
'ಐಪಿಎಲ್‌ಗೂ ಮುನ್ನ ಯುವರಾಜ್ ಸಿಂಗ್ ಜೊತೆಗೆ ನಡೆದ ಕ್ಯಾಂಪ್ ಬಹಳ ಉಪಯೋಗಕ್ಕೆ ಬಂತು. ಆ ಕ್ಯಾಂಪ್‌ನಲ್ಲಿ ಯುವಿ ನಾನು ಮಾರಕ ಎಸೆತಗಳಿಗೆ ತಯಾರಾಗುವಂತೆ ಮಾಡಿದ್ದರು. ಅಂದು ಯುವಿ ನನ್ನ ವಿರುದ್ಧ ಬೇರೆ ಬೇರೆ ಕೋನಗಳಲ್ಲಿ ನೂರಾರು ಶಾರ್ಟ್ ಪಿಚ್ ಎಸೆತಗಳನ್ನು ಎಸೆದಿದ್ದರು. ಇದೇ ಬಹಳ ಉಪಯೋಗಕ್ಕೆ ಬಂತು ಎಂದು ನನಗನ್ನಿಸುತ್ತದೆ,' ಎಂದು ಗಿಲ್ ವಿವರಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications