ಮೊಹಮ್ಮದ್ ಶಹಝಾದ್ ಅಫ್ಘಾನ್ ನ ಜಯಸೂರ್ಯ ಅನ್ನಿಸಲಿದ್ದಾರೆಯೆ?

ದುಬೈ, ಸೆಪ್ಟೆಂಬರ್ 26: ಭಾರತ ಮತ್ತು ಅಫ್ಘಾನಸ್ತಾನ ನಡುವಿನ ಏಷ್ಯಾ ಕಪ್ 5ನೇ ಸೂಪರ್ ಫೋರ್ ಪಂದ್ಯದಲ್ಲಿ ಭರ್ಜರಿಯಾಗಿ ಮಿಂಚಿದ್ದು ಅಫ್ಘಾನ್ ತಂಡ ಮತ್ತು ಅಫ್ಘಾನ್ ಆಟಗಾರ ಮೊಹಮ್ಮದ್ ಶಹಝಾದ್. ಅಫ್ಘಾನ್ ಇನ್ನಿಂಗ್ಸ್ ವೇಳೆಯಂತೂ ಶಹಝಾದ್ ಮೇಲೆಯೇ ಟಿವಿ ಕ್ಯಾಮರಾಗಳು ಮುಖ ಮಾಡಿದ್ದವು.
ಪಂದ್ಯದಲ್ಲಿ ಆಕರ್ಷಕ 124 ರನ್ ಸಿಡಿಸಿದ್ದ ಶಹಝಾದ್ ಭಾರತ ವಿರುದ್ಧ ಶತಕ ಬಾರಿಸಿದ ಮೊದಲ ಅಫ್ಘಾನಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಜೊತೆಗೆ ತಂಡದ ಮೊತ್ತ ಕಡಿಮೆ (131 ರನ್) ಇದ್ದಾಗ ಶತಕ ಪೂರೈಸಿದ ವಿಶ್ವದ ಆಟಗಾರರಲ್ಲಿ ಪಾಕ್ ಆಟಗಾರ ಶಾಹಿದ್ ಅಫ್ರಿದಿ ಜೊತೆಗೂ ಸ್ಥಾನ ಹಂಚಿಕೊಂಡಿದ್ದರು.
ಏಷ್ಯಾ ಕಪ್ 2018ರ ಭಾರತ-ಅಫ್ಘಾನ್ ಅಂತಿಮ ಮುಖಾಮುಖಿಯಲ್ಲಿ ಶಹಝಾದ್ ಬರೀ ಆಟಗಾರನಾಗಿ ಕಾಣಿಸಲಿಲ್ಲ, ಬದಲಿಗೆ ಅದ್ಭುತ ಆಟ ಪ್ರದರ್ಶಿಸುವ ಅಪ್ಪಟ ಪ್ರತಿಭಾನ್ವಿರಾಗಿ ಕಂಡರು. ಅವರು ಬ್ಯಾಟ್ ಬೀಸುತ್ತಿದ್ದ ಪರಿ ಒಮ್ಮೆ ಕ್ರಿಕೆಟ್ ದಿಗ್ಗಜ ಸನತ್ ಜಯಸೂರ್ಯ ಅವರನ್ನು ನೆನಪಿಸುವಂತಿತ್ತು.

ಹೊಸಬರನ್ನೇ ಗುರಿಯನ್ನಾಗಿದ್ದೆ
ಅಫ್ಘಾನ್ ಇನ್ನಿಂಗ್ಸ್ ಬಳಿಕ ಮಾತನಾಡಿದ ಶಹಝಾದ್, 'ಇಂದು (ಸೆ.25) ಭಾರತ ತಂಡದಲ್ಲಿ ಹೊಸ ಬೌಲರ್ ಗಳಿದ್ದಾರೆ ಎಂದು ನನಗೆ ಅರಿವಾಗಿತ್ತು. ಬ್ಯಾಟ್ ಬೀಸುವಿಕೆಗೆ ಈ ದಿನ ಅವರನ್ನೇ ಗುರಿಯನ್ನಾಗಿಸಬೇಕು ಎಂದು ಅನ್ನಿಸಿದ್ದೂ ಹೌದು. ಹಾಗೇ ಮಾಡಿದೆ' ಎಂದಿದ್ದರು.

ಮನ ಗೆದ್ದ ಅಫ್ಘಾನ್
ಶಹಝಾದ್ ಅಮೋಘ ಬ್ಯಾಟಿಂಗ್ ನೆರವಿನಿಂದಲೇ ಏಷ್ಯಾ ಕಪ್ 2018ರಲ್ಲಿ ಎಲ್ಲಾ ಪಂದ್ಯಗಳನ್ನು ಗೆದ್ದಿದ್ದ ಭಾರತ ತಂಡ ಅಫ್ಘಾನ್ ಎದುರು ಪಂದ್ಯ ಟೈ ಗೊಳಿಸಿಕೊಂಡಿತ್ತು. 50 ಓವರ್ ಗೆ ಎರಡೂ ತಂಡಗಳು 252 ರನ್ ಪೇರಿಸಿ ಸಮಬಲ ಸಾಧಿಸಿದ್ದವು. ಆದರೆ ಅಂದು (ಸೆ.25) ಕ್ರಿಕೆಟ್ ಅಭಿಮಾನಿಗಳ ಮನ ಗೆದ್ದಿದ್ದು ಅಫ್ಘಾನೇ! (ಚಿತ್ರ: ಪಂದ್ಯದ ವೇಳೆ ಶಹಝಾದ್ ಶೂ ಲೇಸ್ ಕಟ್ಟಲು ಸಹಾಯ ಮಾಡಿ ಮನಗೆದ್ದಿದ್ದ ದಿನೇಶ್ ಕಾರ್ತಿಕ್)

ನಬಿ ಹಿಂದಿಕ್ಕಿದ ಶಹಝಾದ್!
ಏಕದಿನ ಕ್ರಿಕೆಟ್ ನಲ್ಲಿ ಅಫ್ಘಾನ್ ಪರ ಅಧಿಕ ರನ್ ಗಳಿಸಿದವರ ಪಟ್ಟಿಯಲ್ಲಿ ಮೊಹಮ್ಮದ್ ಶಹಝಾದ್ ಅಗ್ರ ಸ್ಥಾನಕ್ಕೇರಿದ್ದಾರೆ. ಈ ಮೊದಲು ಅಗ್ರ ಸ್ಥಾನದಲ್ಲಿದ್ದ ಹಿರಿಯ ಆಟಗಾರ ಮೊಹಮ್ಮದ್ ನಬಿ ಅವರನ್ನು ಶಹಝಾದ್ ಹಿಂದಿಕ್ಕಿದ್ದಾರೆ. 106 ಪಂದ್ಯಗಳಲ್ಲಿ ನಬಿ 2,435 ರನ್ ಸಾಧನೆ ಹೊಂದಿದ್ದರೆ, ಶಹಝಾದ್ ಕೇವಲ 76 ಪಂದ್ಯಗಳಲ್ಲಿ 2,508 ರನ್ ಸಾಧನೆ ಮಾಡಿದ್ದಾರೆ.

ಸನತ್ ಜಯಸೂರ್ಯ ನೆನಪು
ಆರಂಭಿಕ ಆಟಗಾರ ಶಹಝಾದ್ ಅವರ ಆಕರ್ಷಕ ಆಟ ಶ್ರೀಲಂಕಾ ದಂತಕತೆ ಸನತ್ ಜಯಸೂರ್ಯ ಅವರನ್ನು ನೆನಪಿಸಿತು. 1990ರ ಅವಧಿಯಲ್ಲಿ ಜಯಸೂರ್ಯ ಅವರು ಅದ್ಭುತ ಆಟದಿಂದ ಶ್ರೀಲಂಕಾದ ಅದೃಷ್ಟವನ್ನೇ ಬದಲಿಸಿದ್ದರು. ಶ್ರೀಲಂಕಾ ವಿಶ್ವ ಮಟ್ಟದಲ್ಲಿ ಮಿನುಗುವಂತೆ ನೋಡಿಕೊಂಡಿದ್ದರು. ಜಯಸೂರ್ಯ 34 ಏಕದಿನ ಇನ್ನಿಂಗ್ಸ್ ಗಳಲ್ಲಿ ಮೊದಲ ಅರ್ಧ ಶತಕ ಬಾರಿಸಿದ್ದರು. ಅದರಲ್ಲೂ ಜಯಸೂರ್ಯ ಆರಂಭಿರಾಗಿ ಜವಾಬ್ದಾರಿ ನಿರ್ವಹಿಸಿದ್ದು ಒಮ್ಮೆ ಮಾತ್ರ! (ಚಿತ್ರ ಕೃಪೆ: ಗೆಟ್ಟಿ ಇಮೇಜಸ್)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications