MI vs KKR IPL 2025: ಹ್ಯಾಟ್ರಿಕ್ ಸೋಲಿನ ಭೀತಿಯಲ್ಲಿ ಮುಂಬೈ: ಇಂದು ಕೆಕೆಆರ್ ವಿರುದ್ಧ ಫೈಟ್
ಮುಂಬೈ ಇಂಡಿಯನ್ಸ್ ಈ ಬಾರಿಯ ಐಪಿಎಲ್‌ನಲ್ಲಿ ನೀರಸ ಆರಂಭವನ್ನು ಕಂಡಿದೆ. ಆಡಿದ ಎರಡೂ ಪಂದ್ಯಗಳಲ್ಲಿ ಸೋಲು ಕಂಡಿರುವ ಮುಂಬೈಗೆ ಹ್ಯಾಟ್ರಿಕ್ ಸೋಲಿನ ಭೀತಿ ಕಾಡುತ್ತಿದೆ. ವಾಂಖೆಡೆ ಅಂಗಳದಲ್ಲಿ ನಡೆಯಲಿರುವ ಪ್ರಸಕ್ತ ಸಾಲಿನ ಮೊದಲ ಐಪಿಎಲ್ ಪಂದ್ಯದಲ್ಲಿ ಆತಿಥೇಯ ಮುಂಬೈ ಇಂಡಿಯನ್ಸ್ ಹಾಗೂ ಹಾಲಿ ಚಾಂಪಿಯನ್ಸ್ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಕಾದಾಟ ನಡೆಸಲಿವೆ. ಈ ಪಂದ್ಯದಲ್ಲಿ ಗೆಲುವು ದಾಖಲಿಸುವುದು ಹಾರ್ದಿಕ್ ಪಾಂಡ್ಯ ಪಡೆಗೆ ಮಹತ್ವದಾಗುದೆ.
ಅಂಕಿ ಅಂಶಗಳ ಲೆಕ್ಕಾಚಾರದಲ್ಲಿ ಮುಂಬೈ ಇಂಡಿಯನ್ಸ್ ಕೈ ಮೇಲಿದೆ. ಈ ವರೆಗೆ ಆಡಿದ 34 ಪಂದ್ಯಗಳಲ್ಲಿ ಮುಂಬೈ 23 ರಲ್ಲಿ ಜಯ ಸಾಧಿಸಿದೆ. ಕೆಕೆಆರ್ 11 ಪಂದ್ಯಗಳನ್ನು ಗೆದ್ದು ಬೀಗಿದೆ. ಎರಡೂ ತಂಡಗಳು ಅಂಗಳಕ್ಕೆ ಇಳಿದಾಗ 210 ರನ್ ಗರಿಷ್ಠ ಮೊತ್ತವಾಗಿದೆ. ಅಜಿಂಕ್ಯ ರಹಾನೆ ಇದೇ ಅಂಗಳದಲ್ಲಿ ಆಡಿ ಬೆಳೆದಿದ್ದರಿಂದ ಅವರಿಗೂ ಈ ಪಿಚ್‌ನ ಬಗ್ಗೆ ಚೆನ್ನಾಗಿ ತಿಳಿದಿದೆ.

ಹೇಗಿದೆ ಪಿಚ್?
ಸಾಮಾನ್ಯವಾಗಿ ವಾಂಖೆಡೆ ಅಂಗಳದಲ್ಲಿ ಬ್ಯಾಟರ್‌ಗಳು ಅಬ್ಬರಿಸುತ್ತಾರೆ. ಇಲ್ಲಿ ಬೌಂಡರಿಗಳು ಚಿಕ್ಕದಾಗಿದ್ದು, ದೊಡ್ಡ ಹೊಡೆತಗಳನ್ನು ಸಲೀಸಾಗಿ ಬಾರಿಸಬಹುದು. ಇನ್ನು ಈ ಮೈದಾನದಲ್ಲಿ ಈಗಾಗಲೇ 118 ಐಪಿಎಲ್ ಪಂದ್ಯಗಳು ನಡೆದಿದ್ದು, ಇದರಲ್ಲಿ ಮೊದಲು ಬ್ಯಾಟ್ ಮಾಡಿದ ತಂಡ 54, ಗುರಿಯನ್ನು ಬೆನ್ನಟ್ಟಿದ ತಂಡ 64 ಪಂದ್ಯಗಳನ್ನು ಗೆದ್ದಿದೆ. ಟಾಸ್ ಈ ಅಂಗಳದಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ.
ರೋಹಿತ್ ಶರ್ಮಾ ಫಾರ್ಮ್
ಚಾಂಪಿಯನ್ಸ್ ಟ್ರೋಫಿಯ ಫೈನಲ್‌ನಲ್ಲಿ ಅರ್ಧಶತಕ ಬಾರಿಸಿದ್ದ ರೋಹಿತ್ ಶರ್ಮಾ ಐಪಿಎಲ್‌ನಲ್ಲಿ ರನ್ ಕಲೆ ಹಾಕುವಲ್ಲಿ ವಿಫಲರಾಗಿದ್ದಾರೆ. ಇವರ ಕಳಪೆ ಫಾರ್ಮ್ ತಂಡದ ಚಿಂತೆಯನ್ನು ಹೆಚ್ಚಿಸಿದೆ. ಗುಜರಾತ್ ವಿರುದ್ಧ 2 ಬೌಂಡರಿ ಬಾರಿಸಿ ಭರವಸೆ ಮೂಡಿಸಿದ್ದ ರೋಹಿತ್ ಮತ್ತೆ ಇಲ್ಲದ ಶಾಟ್‌ಗೆ ಬಲಿಯಾದರು. ಉಳಿದಂತೆ ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ ಸೇರಿದಂತೆ ಸ್ಟಾರ್ ಆಟಗಾರರು ತಂಡ ತಮ್ಮ ಮೇಲೆ ಇಟ್ಟ ನಂಬಿಕೆಗೆ ಪೂರಕವಾಗಿ ಬ್ಯಾಟ್ ಮಾಡಬೇಕಿದೆ. ಆಲ್‌ರೌಂಡರ್‌ಗಳು ನೈಜ್ಯ ಆಟವನ್ನು ಆಡಬೇಕಿದೆ. ವೇಗದ ಬೌಲರ್‌ಗಳು ಹಾಗೂ ಸ್ಪಿನ್ ಬೌಲರ್‌ಗಳು ಬಿಗುವಿನ ದಾಳಿ ನಡೆಸಿದರೆ, ಹ್ಯಾಟ್ರಿಕ್ ಸೋಲಿನ ಭೀತಿಯಿಂದ ಪಾರಾಗಬಹುದು.

ಸಂಭಾವ್ಯ ಮುಂಬೈ ತಂಡ: ರೋಹಿತ್ ಶರ್ಮಾ, ರಯಾನ್ ರಿಕಲ್ಟನ್ (ವಿಕೆಟ್ ಕೀಪರ್), ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ (ನಾಯಕ), ರಾಬಿನ್ ಮಿಂಜ್, ನಮನ್ ಧೀರ್, ದೀಪಕ್ ಚಾಹರ್, ಮಿಚೆಲ್ ಸ್ಯಾಂಟ್ನರ್/ಮುಜೀಬ್ ಉರ್ ರೆಹಮಾನ್, ಟ್ರೆಂಟ್ ಬೌಲ್ಟ್, ಎಸ್ ರಾಜು,ರೀಸ್ ಟೋಪ್ಲಿ
ನರೈನ್ ಆಡುವುದು ಅನುಮಾನ
ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯವನ್ನು ಆಡುವಲ್ಲಿ ವಿಫಲರಾಗಿದ್ದ ಸ್ಟಾರ್ ಆಲ್‌ರೌಂಡರ್ ಸುನಿಲ್ ನರೈನ್, ಈ ಪಂದ್ಯದಲ್ಲಿ ಆಡುತ್ತಾರೋ ಇಲ್ಲವೋ ಎಂಬುದು ಅವರ ಫಿಟ್ನೆಸ್ ಮೇಲೆ ಅವಲಂಬಿತವಾಗಿದೆ. ಶನಿವಾರ ನರೈನ್ ಅಭ್ಯಾಸ ಆರಂಭಿಸಿರುವುದು ಕೆಕೆಆರ್ ಪಾಲಿಗೆ ಗುಡ್ ನ್ಯೂಸ್. ಹರ್ಷಿತ್ ರಾಣಾ ಮತ್ತು ವೈಭವ್ ಅರೋರಾ ವೇಗದ ಬೌಲಿಂಗ್ ನೊಗವನ್ನು ಹೊರಲಿದ್ದಾರೆ. ಆದರೆ ಕೆಕೆಆರ್ ತಂಡದ ಶಕ್ತಿಯಾಗಿರುವ ಸುನಿಲ್ ನರೈನ್ ಹಾಗೂ ವರುಣ್ ಚಕ್ರವರ್ತಿ ಎದುರಾಳಿಗಳನ್ನು ಕಾಡಬಲ್ಲರು. ಬ್ಯಾಟಿಂಗ್‌ನಲ್ಲಿ ರಹಾನೆ, ವೆಂಕಟೇಶ್ ಅಯ್ಯರ್ ಮತ್ತು ಅಂಗಕೃಷ್ ರಘುವಂಶಿ ಇದ್ದಾರೆ. ರಿಂಕು ಸಿಂಗ್ ಮತ್ತು ಆಂಡ್ರೆ ರಸೆಲ್ ತಮ್ಮ ಜವಾಬ್ದಾರಿಯನ್ನು ಅರಿತು ಆಡಬೇಕಿದೆ.
ಸಂಭಾವ್ಯ ಕೆಕೆಆರ್ ತಂಡ: ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ಸುನಿಲ್ ನರೈನ್, ಅಜಿಂಕ್ಯ ರಹಾನೆ (ನಾಯಕ), ಆಂಗ್‌ಕ್ರಿಶ್ ರಘುವಂಶಿ, ವೆಂಕಟೇಶ್ ಅಯ್ಯರ್, ರಿಂಕು ಸಿಂಗ್, ಆಂಡ್ರೆ ರಸೆಲ್, ರಮಣದೀಪ್ ಸಿಂಗ್, ಸ್ಪೆನ್ಸರ್ ಜಾನ್ಸನ್, ವೈಭವ್ ಅರೋರಾ, ವರುಣ ಚಕ್ರವರ್ತಿ, ಹರ್ಷಿತ್ ರಾಣಾ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications