For Quick Alerts
ALLOW NOTIFICATIONS  
For Daily Alerts
 

'ಕೊಹ್ಲಿಯೊಂದಿಗೆ ಡ್ರೆಸ್ಸಿಂಗ್ ರೂಮ್ ಶೇರ್ ಮಾಡಲು ಕಾತರನಾಗಿದ್ದೇನೆ'

Cant wait to share dressing room with the likes of Virat Kohli: Rahul Tewatia

ನವದೆಹಲಿ: ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ20ಐ ಸರಣಿಗಾಗಿ ಟೀಮ್ ಇಂಡಿಯಾ ಪ್ರಕಟವಾಗಿದೆ. ಇದೇ ಮೊದಲ ಬಾರಿಗೆ ಮುಂಬೈ ಬ್ಯಾಟ್ಸ್‌ಮನ್‌ ಸೂರ್ಯಕುಮಾರ್ ಯಾದವ್, ಹರ್ಯಾಣ ಆಲ್ ರೌಂಡರ್ ರಾಹುಲ್ ತೆವಾಟಿಯಾ ಮತ್ತು ಬಿಹಾರ್ ಬ್ಯಾಟ್ಸ್‌ಮನ್‌ ಕಮ್ ವಿಕೆಟ್ ಕೀಪರ್ ಇಶಾನ್ ಕಿಶನ್‌ಗೆ ರಾಷ್ಟ್ರೀಯ ತಂಡಕ್ಕೆ ಕರೆ ನೀಡಲಾಗಿದೆ.

ಟೀಮ್ ಇಂಡಿಯಾಕ್ಕೆ ಆಡುವ ಅವಕಾಶ ಹತ್ತಿರವಾಗಿರುವುದರಿಂದ ಸೂರ್ಯಕುಮಾರ್ ಯಾದವ್, ರಾಹುಲ್ ತೆವಾಟಿಯಾ ಮತ್ತು ಇಶಾನ್ ಕಿಶಾನ್ ಖುಷಿಯಾಗಿದ್ದಾರೆ. ವಿರಾಟ್ ಕೊಹ್ಲಿಯಂತ ಶ್ರೇಷ್ಠ ಆಟಗಾರರ ಜೊತೆಗೆ ಡ್ರೆಸ್ಸಿಂಗ್‌ ರೂಮ್‌ನಲ್ಲಿ ಇರುವ ಅವಕಾಶಕ್ಕಾಗಿ ಕಾತರನಾಗಿದ್ದೇನೆ ಎಂದು ತೆವಾಟಿಯಾ ಹೇಳಿದ್ದಾರೆ.

ಎಎನ್‌ಐ ಜೊತೆ ಮಾತನಾಡಿದ ತೆವಾಟಿಯಾ, 'ನಾನು ವಿರಾಟ್ ಕೊಹ್ಲಿ ವಿರುದ್ಧ ಐಪಿಎಲ್‌ನಲ್ಲಿ ಆಡಿದ್ದೇನೆ. ಈಗ ನಾನು ಕೊಹ್ಲಿ ಜೊತೆ ಆಡಲಿದ್ದೇನೆ, ಅವರ ಜೊತೆ ಡ್ರೆಸ್ಸಿಂಗ್ ರೂಮ್ ಶೇರ್ ಮಾಡಲಿದ್ದೇನೆ. ಕೊಹ್ಲಿ ಮತ್ತು ವಿಶ್ವ ಶ್ರೇಷ್ಠ ಭಾರತದ ಕೆಲ ಆಟಗಾರರೊಂದಿಗೆ ಡ್ರೆಸ್ಸಿಂಗ್ ರೂಮ್ ಶೇರ್ ಮಾಡಲು ಕಾತರನಾಗಿದ್ದೇನೆ,' ಎಂದು ಖುಷಿ ತೋರಿಕೊಂಡಿದ್ದಾರೆ.

ಮಾರ್ಚ್ 12ರಿಂದ ಭಾರತ-ಇಂಗ್ಲೆಂಡ್ ಐದು ಪಂದ್ಯಗಳ ಟಿ20ಐ ಸರಣಿ ಆರಂಭಗೊಳ್ಳಲಿದ್ದು, ಎಲ್ಲಾ ಪಂದ್ಯಗಳು ಅಹ್ಮದಾಬಾದ್‌ನ ಸರ್ದಾರ್ ಪಟೇಲ್ ಸ್ಟೇಡಿಯಂನಲ್ಲಿ ನಡೆಯಲಿವೆ. ಸದ್ಯ ಇತ್ತಂಡಗಳ ಮಧ್ಯೆ ಟೆಸ್ಟ್ ಸರಣಿ ನಡೆಯುತ್ತಿದೆ. ಟಿ20ಐ ಸರಣಿ ಬಳಿಕ ಮೂರು ಪಂದ್ಯಗಳ ಏಕದಿನ ಸರಣಿ ನಡೆಯಲಿದೆ.

Story first published: Saturday, February 20, 2021, 23:46 [IST]
Other articles published on Feb 20, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+