
ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿಯ 71ನೇ ಶತಕಕ್ಕಾಗಿ ಕಾದು ಕುಳಿತಿರುವ ಅಭಿಮಾನಿಗಳು ಈಗ ಮತ್ತೊಂದು ಪಂದ್ಯವನ್ನು ಎದುರು ನೊಡುತ್ತಿದ್ದಾರೆ. ಇದೀಗ ಭಾರತ ಹಾಗೂ ಶ್ರಿಲಂಕಾ ತಂಡಗಳು ಎರಡನೇ ಟೆಸ್ಟ್ ಪಂದ್ಯವನ್ನು ಬೆಂಗಳೂರಿನಲ್ಲಿ ಆಡಲು ಸಜ್ಜಾಗಿದ್ದು ಈ ಪಂದ್ಯದಲ್ಲಾದರೂ ವಿರಾಟ್ ಕೊಹ್ಲಿಯ ಶತಕದ ಬರ ನೀಗಲಿದೆಯಾ ಎಂಬುದು ಕುತೂಹಲ ಮೂಡಿಸಿದೆ.
ಮೊಹಾಲಿಯಲ್ಲಿ ವಿರಾಟ್ ಕೊಹ್ಲಿ ಆಡಿದ 100ನೇ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅದ್ಭುತ ಆರಂಭವನ್ನು ಪಡೆದುಕೊಂಡರೂ ಅದನ್ನು ದೊಪಡ್ಡ ಮೊತ್ತವನ್ನಾಗಿ ಪರಿವರ್ತಿಸಲು ವಿಫಲವಾಗಿದ್ದರು. ಕೊಹ್ಲಿ 45 ರನ್‌ಗಳಿಗೆ ಇನ್ನಿಂಗ್ಸ್ ಮುಗಿಸಿದ್ದರು. ಇದೀಗ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಎರಡನೇ ಪಂದ್ಯದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಈ ಪಂದ್ಯ ಅರ್ಹರ್ನಿಶಿಯಾಗಿ ನಡೆಯಲಿದ್ದು ಶನಿವಾರ ಈ ಪಂದ್ಯ ಆರಂಭವಾಗಲಿದೆ.
ಐಪಿಎಲ್‌ನಲ್ಲಿ ಆರ್‌ಸಿಬಿ ಪರವಾಗಿ ಆಡುತ್ತಿರುವ ವಿರಾಟ್ ಕೊಹ್ಲಿಗೆ 2008ರಿಂದಲೂ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಹೋಮ್‌ಗೌಂಡ್ ಎಂಬುದು ಗಮನಾರ್ಹ ಅಂಶ. ಹೀಗಾಗಿ ಚಿನ್ನ ಸ್ವಾಮಿ ಕ್ರೀಡಾಂಗಣದಲ್ಲಿ ವಿರಾಟ್ ಕೊಹ್ಲಿ ಸ್ಮರಣೀಯ ಇನ್ನಿಂಗ್ಸ್‌ಅನ್ನು ನಿಡಲಿದ್ದಾರಾ ಎಂಬುದು ಕುತೂಹಲ ಮೂಡಿಸಿದೆ.
ಹಾಗಾದರೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವಿರಾಟ್ ಕೊಹ್ಲಿಯ ಅಂಕಿಅಂಶಗಳು ಹೇಗಿದೆ? ಮುಂದೆ ಓದಿ..
ಬೆಂಗಳೂರಿನಲ್ಲಿ ಕೊಹ್ಲಿ ಟೆಸ್ಟ್ ದಾಖಲೆ: ವಿರಾಟ್ ಕೊಹ್ಲಿ ಬೆಂಗಳೂರಿನಲ್ಲಿ ಈವರೆಗೆ 3 ಟಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ಒಂದು ಶತಕ ಹಾಗೂ ಒಂದು ಅರ್ಧ ಶತಕ ದಾಖಲಿಸಿದ್ದು 60.33ರ ಸರಾಸರಿಯಲ್ಲಿ 181 ರನ್‌ಗಳಿಸಿದ್ದಾರೆ. 103 ರನ್ ಅವರ ಹೈಯೆಸ್ಟ್ ಸ್ಕೋರ್ ಆಗಿದೆ.
ಬೆಂಗಳೂರಿನಲ್ಲಿ ಏಕದಿನ ದಾಖಲೆ: ಏಕದಿನ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಉತ್ತಮ ದಾಖಲೆ ಹೊಂದಿಲ್ಲ ಎಂಬುದು ಅವರ ಅಂಕಿಅಂಶಗಳಿಂದ ಬಹಿರಂಗವಾಗುತ್ತದೆ. 6 ಏಕದಿನ ಪಂದ್ಯಗಳನ್ನು ಈ ಕ್ರೀಡಾಂಗನದಲ್ಲಿ ಆಡಿರುವ ಕೊಹ್ಲಿ 25ರ ಸರಾಸರಿಯಲ್ಲಿ 152 ರನ್‌ಗಳಿಸಿದ್ದಾರೆ. ಒಮದು ಅರ್ಧ ಶತಕ ಮಾತ್ರ ಕೊಹ್ಲಿ ಹೆಸರಿನಲ್ಲಿದೆ.
ಟಿ20 ಕ್ರಿಕೆಟ್‌ನಲ್ಲಿ ಕೊಹ್ಲಿ ದಾಖಲೆ: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಐದು ಟಿ20ಐ ಪಂದ್ಯಗಳನ್ನು ಆಡಿದ್ದಾರೆ. 29ರ ಸರಾಸರಿಯಲ್ಲಿ ಕೊಹ್ಲಿ 116 ರನ್‌ಗಳಿಸಿದ್ದಾರೆ. 76 ರನ್ ವಿರಾಟ್ ಕೊಹ್ಲಿ ಬೆಂಗಳೂರು ಕ್ರೀಡಾಂಗಣದಲ್ಲಿ ದಾಖಲಿಸಿದ ಹೈಯೆಸ್ಟ್ ಸ್ಕೋರ್ ಆಗಿದೆ.
ಶ್ರೀಲಂಕಾ ವಿರುದ್ಧ ವಿರಾಟ್ ಕೊಹ್ಲಿ ಟೆಸ್ಟ್ ದಾಖಲೆ: ವಿರಾಟ್ ಕೊಹ್ಲಿ ಶ್ರೀಲಂಕಾ ತಂಡದ ವಿರುದ್ಧ ಈವರೆಗೆ 10 ಟೆಸ್ಟ್ ಪಂದ್ಯಗಳನ್ನು ಆಡಿದ್ದು 74.93ರ ಸರಾಸರಿಯಲ್ಲಿ 1049 ರನ್‌ಗಳಿಸಿದ್ದಾರೆ. ಐದು ಶತಕಗಳನ್ನು ವಿರಾಟ್ ಕೊಹ್ಲಿ ಶ್ರಿಲಂಕಾ ವಿರುದ್ಧ ದಾಖಲಿಸಿದ್ದಾರೆ. ಹೀಗಾಗಿ ತನ್ನ ನೆಚ್ಚಿನ ಎದುರಾಳಿಯ ವಿರುದ್ಧ ವಿರಾಟ್ ಕೊಹ್ಲಿ 71ನೇ ಶತಕ ದಾಖಲಿಸಲಿದ್ದಾರಾ ಎಂಬುದು ಕುತೂಹಲ ಮೂಡಿಸಿದೆ.