IPL 2025: ಈ ಬಾರಿಯಾದ್ರೂ ಬ್ರೇಕ್ ಆಗುತ್ತಾ ಕೊಹ್ಲಿಯ ವಿರಾಟ ದಾಖಲೆ
18ನೇ ಆವೃತ್ತಿಯ ಐಪಿಎಲ್ ಸಂಭ್ರಮ ಮಾರ್ಚ್ 22 ರಿಂದ ಆರಂಭವಾಗಲಿದೆ. ಇನ್ನು 2 ತಿಂಗಳು ದೇಶದಲ್ಲಿ ಕ್ರಿಕೆಟ್ ಜ್ವರ ಆವರಿಸಿಕೊಳ್ಳಲಿದೆ. ಮೊದಲ ಪಂದ್ಯಕ್ಕೆ ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ ಆತಿಥ್ಯ ನೀಡಲಿದೆ. ಉದ್ಘಾಟನಾ ಪಂದ್ಯದಲ್ಲಿ ಕೆಕೆಆರ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಕಾದಾಟ ನಡೆಸಲಿವೆ. ಈ ವೇಳೆ ಎಲ್ಲರ ಕಣ್ಣುಗಳು ವಿರಾಟ್ ಕೊಹ್ಲಿ ಅವರ ಮೇಲೆ ನೆಟ್ಟಿರಲಿವೆ. ಕಾರಣ ವಿರಾಟ್ ಸದ್ಯ ಇರುವ ಫಾರ್ಮ್.
ಚಾಂಪಿಯನ್ಸ್ ಟ್ರೋಫಿಯಲ್ಲಿ ಭರ್ಜರಿ ಲಯಕ್ಕೆ ಮರಳಿರುವ ವಿರಾಟ್ ಕೊಹ್ಲಿ, ಐಪಿಎಲ್‌ನಲ್ಲೂ ಇದೇ ಫಾರ್ಮ್ ಕಂಟಿನ್ಯೂ ಮಾಡ್ತಾರಾ ಎಂಬ ಪ್ರಶ್ನೆಗಳು ಎದ್ದಿವೆ. ಈ ಬಾರಿಯೂ ವಿರಾಟ್ ತಮ್ಮ ಅಮೋಘ ಫಾರ್ಮ್‌ನ್ನು ಐಪಿಎಲ್‌ನಲ್ಲೂ ಮುಂದುವರೆಸಿದ್ರೆ, ಆ ದಾಖಲೆಗೆ ಅಪಾಯ ಕಾದಂತೆ ಕಾಣುತ್ತಿದೆ. ಇಷ್ಟು ಆವೃತ್ತಿಗಳ ಐಪಿಎಲ್ ನಡೆದ್ರೂ ಸಹ ಆ ದಾಖಲೆಯ ಸನೀಹಕ್ಕೂ ಯಾರೂ ಹೋಗಿಲ್ಲ.

ವಿರಾಟ್ ಕೊಹ್ಲಿ 2016ರಲ್ಲಿ ಪ್ರೈಂ ಫಾರ್ಮ್‌ನಲ್ಲಿದ್ದರು. ಈ ವೇಳೆ ಐಪಿಎಲ್‌ನಲ್ಲಿ ವಿರಾಟ್ ಅಮೋಘ ಪ್ರದರ್ಶನ ನಡೆಸಿ ತಂಡಕ್ಕೆ ಆಧಾರವಾಗಿದ್ದರು. ಆರ್‌ಸಿಬಿ ಇನ್ನು ಒಂದೇ ಒಂದು ಐಪಿಎಲ್ ಪ್ರಶಸ್ತಿ ಗೆಲ್ಲದೇ ಇದ್ರೂ ಸಹ ವಿರಾಟ್, ಮಾತ್ರ ಪ್ರತಿ ಆವೃತ್ತಿಯಲ್ಲೂ ತಮ್ಮ ಸ್ಥಿರ ಪ್ರದರ್ಶನ ನೀಡುತ್ತಲೇ ಬಂದಿದ್ದಾರೆ. ವಿರಾಟ್ ಕೊಹ್ಲಿ 2016ರ ಐಪಿಎಲ್‌ನಲ್ಲಿ 973 ರನ್ ಬಾರಿಸಿ ಅಬ್ಬರಿಸಿದ್ರು. ಈ ದಾಖಲೆಯ ಸನಿಹಕ್ಕೂ ಇನ್ನು ಯಾರು ಸಹ ಬರಲು ಸಾಧ್ಯವಾಗಿಲ್ಲ.
ಬ್ರೇಕ್ ಆಗುತ್ತಾ ವಿರಾಟ ದಾಖಲೆ
2016ರ ಬಳಿಕ ವಿರಾಟ್ ಸಹ 8 ಆವೃತ್ತಿಯ ಐಪಿಎಲ್‌ಗಳನ್ನು ಆಡಿದ್ದಾರೆ. ಆದರೆ ಅವರಿಂದಲೂ ಸಹ ಆ ದಾಖಲೆಯನ್ನು ಮುರಿಯಲು ಸಾಧ್ಯವಾಗಲಿಲ್ಲ. 2016ರ ಐಪಿಎಲ್‌ನಲ್ಲಿ ವಿರಾಟ್ ಮುಟ್ಟಿದೆಲ್ಲವೂ ಚಿನ್ನ. ಈ ಆವೃತ್ತಿಯಲ್ಲಿ ವಿರಾಟ್ ಒಟ್ಟು 4 ಶತಕ ಹಾಗೂ 7 ಅರ್ಧಶತಕವನ್ನು ಬಾರಿಸಿದ್ದರು. ಈ ವರ್ಷ ಆರ್‌ಸಿಬಿ ಕಪ್ ಗೆಲ್ಲುವುದು ಫಿಕ್ಸ್ ಎಂದೇ ಅಭಿಮಾನಿಗಳು ಲೆಕ್ಕಾಚಾರ ಹಾಕಿಕೊಂಡಿದ್ರು ಆದ್ರೆ ಫೈನಲ್‌ನಲ್ಲಿ ಅದೇ ನಿರಾಸೆ. ಕಳೆದ ಆವೃತ್ತಿಯಲ್ಲಿ ವಿರಾಟ್ ಆಡಿದ 15 ಪಂದ್ಯಗಳಲ್ಲಿ 741 ರನ್ ಕಲೆ ಹಾಕಿದ್ರು.
ವಿರಾಟ್ ಕೊಹ್ಲಿ ಐಪಿಎಲ್‌ನಲ್ಲಿ ಅತಿ ಹೆಚ್ಚು ರನ್‌ಗಳನ್ನು ಬಾರಿಸಿದ ಮೊದಲ ಹಾಗೂ ಎರಡನೇ ಬ್ಯಾಟರ್ ಎಂಬ ಹೆಗ್ಗಳಿಕೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ವಿರಾಟ್ ಅವರ ಈ ದಾಖಲೆಯ ಹತ್ತಿರಕ್ಕೂ ಯಾವುದೇ ಬ್ಯಾಟರ್ ಬರಲು ಸಾಧ್ಯವಾಗಿಲ್ಲ. ಈ ಬಾರಿಯಾದ್ರೂ ಈ ದಾಖಲೆ ಮುರಿಯುತ್ತಾ ಎಂಬ ಪ್ರಶ್ನೆ ಎದ್ದಿವೆ. ವಿರಾಟ್ ಕೊಹ್ಲಿ ಅವರ ದಾಖಲೆಯನ್ನು ಅವರೇ ಮುರಿಯಬಹುದು ಎಂಬ ಲೆಕ್ಕಾಚಾರಗಳು ಸಹ ಆರಂಭವಾಗಿವೆ. ಐಪಿಎಲ್ ಇತಹಾಸದಲ್ಲಿ ಅತಿ ಹೆಚ್ಚು ರನ್ ಬಾರಿಸಿದ ದಾಖಲೆಯನ್ನು ಹೊಂದಿರುವ ಕೊಹ್ಲಿ, ಐಪಿಎಲ್‌ನಲ್ಲಿ ಅತಿ ಹೆಚ್ಚು ಶತಕಗಳನ್ನು ಬಾರಿಸಿದ ಹಿರಿಮೆಯನ್ನು ಸಹ ತಮ್ಮದಾಗಿಸಿಕೊಂಡಿದ್ದಾರೆ. ಮುಂಬರು ಐಪಿಎಲ್‌ನಲ್ಲಿ ಮತ್ತೆ ಯಾವ ದಾಖಲೆ ಸೃಷ್ಟಿಯಾಗುತ್ತವೋ ಕಾದು ನೋಡಬೇಕಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications