T20 World Cup 2026: ಭಾರತ, ಶ್ರೀಲಂಕಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೆ 13 ತಂಡಗಳು ಆಯ್ಕೆ
ಟೀಮ್ ಇಂಡಿಯಾ ಸದ್ಯ ಇಂಗ್ಲೆಂಡ್ ಪ್ರವಾಸದಲ್ಲಿ ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡುತ್ತಿದೆ. ಇದಾದ ಬಳಿಕ ಹಲವು ಪ್ರಮುಖ ಸರಣಿಗಳನ್ನು ಆಡಲಿದೆ. ಇದಾದ ಬಳಿಕ ಮುಂದಿನ ವರ್ಷ ಭಾರತ ಟಿ20 ವಿಶ್ವಕಪ್‌ಗೆ ಆತಿಥ್ಯವನ್ನು ವಹಿಸಲಿದೆ. ಭಾರತ ಹಾಗೂ ಶ್ರೀಲಂಕಾ ತಂಡಗಳು ಈ ವಿಶ್ವಕಪ್‌ನ್ನು ಆಯೋಜಿಸಲಿವೆ. ಈ ಟೂರ್ನಿಯಲ್ಲಿ ಒಟ್ಟು 20 ತಂಡಗಳು ಭಾಗವಹಿಸಲಿವೆ. ಈಗಾಗಲೇ ಈ ವಿಶ್ವಕಪ್‌ಗೆ 13 ತಂಡಗಳು ಕ್ವಾಲಿಫೈ ಆಗಿವೆ.
ಇತ್ತೀಚಿಗೆ ಅಮೆರಿಕ ರೀಜನಲ್ ಫೈನಲ್ ಗೆಲ್ಲುವ ಮೂಲಕ ಕೇನಡಾ ತಂಡ ಮುಂದಿನ ವರ್ಷದ ಟಿ20 ವಿಶ್ವಕಪ್‌ಗೆ ಅರ್ಹತೆ ಪಡೆದಿದೆ. ಟಿ20 ವಿಶ್ವಕಪ್‌ನ್ನು ಆಯೋಜಿಸುತ್ತಿರುವ ಶ್ರೀಲಂಕಾ ಹಾಗೂ ಭಾರತ ನೇರವಾಗಿ ಅರ್ಹತೆ ಪಡೆದಿವೆ. ಟಿ20 ವಿಶ್ವಕಪ್‌ಗೆ ಐಸಿಸಿ ಶ್ರೇಯಾಂಕದಲ್ಲಿ ಅಗ್ರ 8 ತಂಡಗಳು 2026ರ ವಿಶ್ವಕಪ್‌ಗೆ ನೇರವಾಗಿ ಅರ್ಹತೆ ಪಡೆಯಲಿವೆ. ಇಂಗ್ಲೆಂಡ್, ವೆಸ್ಟ್ ಇಂಡೀಸ್, ಬಾಂಗ್ಲಾದೇಶ, ಆಸ್ಟ್ರೇಲಿಯಾ, ಯುಎಸ್ಎ, ಅಫ್ಘಾನಿಸ್ತಾನ ಹಾಗೂ ದಕ್ಷಿಣ ಆಫ್ರಿಕಾ 8 ಹಂತವನ್ನು ತಲುಪಿವೆ.

ಟಿ20 ವಿಶ್ವಕಪ್‌ಗೆ 7 ತಂಡಗಳು ಅರ್ಹತಾ ಸುತ್ತಿನ ಪಂದ್ಯಗಳನ್ನು ಗೆದ್ದು ಅರ್ಹತೆ ಪಡೆಯಲಿದ್ದಾರೆ. ಈ ವೇಳೆ ಪ್ರಾದೇಶಿಕ ಅರ್ಹತಾ ಪಂದ್ಯಗಳ ಆಧಾರದ ಮೇಲೆ, ಆಫ್ರಿಕಾದಿಂದ 2, ಏಷ್ಯಾ ಮತ್ತು ಪೂರ್ವ ಏಷ್ಯಾ-ಪೆಸಿಫಿಕ್ ಪ್ರದೇಶದಿಂದ 3, ಯುರೋಪ್‌ನಿಂದ 2, ಅಮೆರಿಕನ್ ರೀಜನ್ ನಿಂದ ಒಂದಿ ತಂಡಗಳು ಅರ್ಹತಾ ಪಂದ್ಯಗಳ ಮೂಲಕ ಅರ್ಹತೆ ಪಡೆಯಲಿವೆ.
ಪಂದ್ಯದ ಫಲಿತಾಂಶ
ಅಮೆರಿಕ ರೀಜನ್ ಪಂದ್ಯದಲ್ಲಿ ಕೆನಡಾ ಐಸಿಸಿ ಟಿ20 ವಿಶ್ವಕಪ್ ಗೆ ಬಹಾಮಾಸ್ ತಂಡವನ್ನು ಮಣಿಸಿದೆ. ಕಿಂಗ್ ಸಿಟಿ ಅಂಗಳದಲ್ಲಿ ನಡೆದ ಪಂದ್ಯದಲ್ಲಿ ಕೆನಡಾ ಸತತ ಐದು ಗೆಲುವುಗಳನ್ನು ದಾಖಲಿಸುವ ಮೂಲಕ ಟಿ20 ವಿಶ್ವಕಪ್‌ಗೆ ಅರ್ಹತೆ ಪಡೆದಿದೆ. ಬಹಾಮಾಸ್ ವಿರುದ್ಧ ಟಾಸ್ ಗೆದ್ದ ಕೆನಾಡ ಮೊದಲು ಬೌಲಿಂಗ್ ಮಾಡುವ ಆಯ್ಕೆಯನ್ನು ಮಾಡಿಕೊಂಡಿತು. ನಾರ್ತ್ ವೆಸ್ಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಕೆನಡಾ ಪರ ಜೊನಾಥನ್ ಬ್ಯಾರಿ, ಜಾವೆಲ್ಲೆ ಗ್ಯಾಲಿಮೋರ್ ಮಾತ್ರ ಡಬಲ್ ಡಿಜಿಟ್ ಮುಟ್ಟಿದರು. ಉಳಿದ ಬ್ಯಾಟರ್‌ಗಳು ರನ್ ಕಲೆ ಹಾಕುವಲ್ಲಿ ವಿಫಲರಾದರು.
ಕೆನಡಾ ಪರ ಕಲೀಮ್ ಸನಾ ಹಾಗೂ ಶಿವಂ ಶರ್ಮಾ ತಲಾ ಮೂರು ವಿಕೆಟ್‌ಗಳನ್ನು ಪಡೆದು ಬಹಾಮಾಸ್ ತಂಡವನ್ನು ಕಾಡಿದರು. ಪರಿಣಾಮ ಬಹಾಮಾಸ್ 19.5 ಓವರ್‌ಗಳಲ್ಲಿ 57 ರನ್‌ಗಳಿಗೆ ಆಲೌಟ್ ಆಯಿತು. ಗುರಿಯನ್ನು ಬೆನ್ನಟ್ಟಿದ ಕೆನಡಾ ಪರ ದಿಲ್‌ಪ್ರೀತ್ ಬಾಜ್ವಾ ಉತ್ತಮ ಆಟದ ಪ್ರದರ್ಶನ ನೀಡಿದರು. ಇವರು 14 ಎಸೆತಗಳಲ್ಲಿ 5 ಬೌಂಡರಿ, 1 ಸಿಕ್ಸರ್ ಸಹಾಯದಿಂದ 36 ರನ್ ಬಾರಿಸಿ ತಂಡಕ್ಕೆ ನೆರವಾದರು. ಅಂತಿಮವಾಗಿ ಕೆನಡಾ 5.3 ಓವರ್‌ಗಳಲ್ಲಿ 61 ರನ್‌ಗಳಿಸಿ ಜಯ ಸಾಧಿಸಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications