Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವದಂತಿಗಳು ನಿಜವಾಗಿದ್ದರೆ ಹಾರ್ದಿಕ್ ಪಾಂಡ್ಯರನ್ನು ತಂಡದಿಂದ ತೆಗೆದುಹಾಕಿ: ವೀರೇಂದ್ರ ಸೆಹ್ವಾಗ್

ಧರ್ಮಶಾಲಾದಲ್ಲಿ ನಡೆದ 19ನೇ ಆವೃತ್ತಿಯ ಪಂದ್ಯದಲ್ಲಿ ಆತಿಥೇಯ ಪಂಜಾಬ್ ಕಿಂಗ್ಸ್ ತಂಡವನ್ನು ಮಣಿಸಿದ ಮುಂಬೈ ಇಂಡಿಯನ್ಸ್‌ ಈ ಲೀಗ್‌ನಲ್ಲಿ ನಾಲ್ಕನೇ ಗೆಲುವು ದಾಖಲಿಸಿತು. ಈ ಮೂಲಕ ಪಂಜಾಬ್‌ ಪ್ಲೇ ಆಫ್‌ ಪ್ರವೇಶಿಸುವ ಹಾದಿ ಕಠಿಣವಾಗಿದೆ. ಪಂಜಾಬ್‌ ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸಿದ ಹೆಗ್ಗಳಿಕೆ ಜಸ್ಪ್ರೀತ್ ಬುಮ್ರಾ ಅವರದ್ದಾಗಿದೆ. ಒಂದೇ ಆವೃತ್ತಿಯ ಐಪಿಎಲ್‌ನಲ್ಲಿ ಮೂರು ನಾಯಕರನ್ನು ಮುಂಬೈ ಕಂಡಿದೆ.

ಮುಂಬೈ ಇಂಡಿಯನ್ಸ್ ತಂಡದ ನಿಯಮಿತ ನಾಯಕ ಬೆನ್ನು ನೋವಿನಿಂದ ಮೈದಾನದಿಂದ ದೂರ ಉಳಿದಿದ್ದಾರೆ. ಇನ್ನು ಇವರ ಅನುಪಸ್ಥಿತಿಯಲ್ಲಿ ತಂಡವನ್ನು ಮುನ್ನಡೆಸಿದ್ದ ಸೂರ್ಯಕುಮಾರ್ ಯಾದವ್ ಸಹ ಕೌಟುಂಬಿಕ ಕಾರಣಗಳಿಂದ ತಂಡದಿಂದ ದೂರ ಉಳಿದಿದ್ದರು. ಹಾರ್ದಿಕ್ ಅನುಪಸ್ಥಿತಿಯು ಬೆನ್ನು ನೋವು ಕಾರಣ ಎಂದು ಮುಂಬೈ ಹೇಳಿದ್ದರೂ, ಕಥೆಯಲ್ಲಿ ಕಣ್ಣಿಗೆ ಕಾಣುವುದಕ್ಕಿಂತ ಬೇರೆಯದ್ದೇ ಇದೆ ಎಂದು ವದಂತಿಗಳು ಸೂಚಿಸುತ್ತವೆ.

Hardik Pandya

ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಅವರ ಮೇಲೆ ಹಲವು ಪ್ರಶ್ನೆಗಳು ಎದ್ದಿವೆ. ಇವುಗಳ ಬಗ್ಗೆ ವೀರೆಂದ್ರ ಸೆಹ್ವಾಗ್‌ ತಮ್ಮ ಪ್ರಾಮಾಣಿಕ ಉತ್ತರ ನೀಡಿದ್ದಾರೆ. ಕ್ರಿಕೆಟ್‌ ಬಜ್‌ ಜೊತೆಗಿನ ಸಂವಾದದಲ್ಲಿ ವೀರೂ. ಹಾರ್ದಿಕ್ ಪಾಂಡ್ಯ ಪ್ಲೇಯಿಂಗ್‌ ಇಲೆವೆನ್‌ನಿಂದ ಹೊರಗುಳಿದಿದ್ದು, ಅವರ ಮತ್ತು ಡ್ರೆಸ್ಸಿಂಗ್ ರೂಮ್‌ನಲ್ಲಿರುವ ಕೆಲವು ಆಟಗಾರರ ನಡುವೆ ಬಿರುಕು ಉಂಟಾಗಿದೆ ಎಂಬ ವದಂತಿಗಳು ಹರಡುತ್ತಿವೆ ಎಂದು ಸೆಹ್ವಾಗ್ ಹೇಳಿದರು.

ನಿಜವಾಗಿದ್ದರೆ ತೆಗೆದುಹಾಕಿ

ಒಂದು ವೇಳೆ ಈಗ ಬರುತ್ತಿರುವ ವದಂತಿಗಳು ನಿಜವಾಗಿದ್ದರೆ, ತಂಡದಲ್ಲಿ ಎಲ್ಲವೂ ಸರಿಯಾಗಿಲ್ಲ ಎಂಬುದು ಇದ್ದರೆ, ಫ್ರಾಂಚೈಸಿ ಕಠಿಣ ಕ್ರಮ ಕೈಗೊಂಡು ಹಾರ್ದಿಕ್ ಅವರನ್ನು ತಂಡದಿಂದ ಕೈ ಬಿಡಬೇಕು. ಅಲ್ಲದೆ ಈಗ ಬರುತ್ತಿರುವ ಸುದ್ದಿಗಳು ಬರೀ ವದಂತಿಗಳೇ ಆಗಿದ್ದರೆ, ಹಾರ್ದಿಕ್ ಅವರನ್ನು ತಂಡ ಉಳಿಸಿಕೊಳ್ಳಬೇಕು. ಹಾರ್ದಿಕ್ ಒಬ್ಬ ಉತ್ತಮ ಹಾಗೂ ಪಂದ್ಯ ಗೆಲ್ಲಿಸಿಕೊಡುವ ಆಟಗಾರ. ಅವರ ಈ ಸಾಮರ್ಥ್ಯವನ್ನು ಅರಿತು ಫ್ರಾಂಚೈಸಿ ಇವರನ್ನು ತಂಡದಲ್ಲಿ ಉಳಿಸಿಕೊಳ್ಳಬೇಕು ಎಂದು ಮಾಜಿ ಆಟಗಾರ ಸೆಹ್ವಾಗ್ ಸ್ಪಷ್ಟಪಡಿಸಿದ್ದಾರೆ.

ವದಂತಿಗಳನ್ನು ಬದಿಗಿಟ್ಟು ಹಾರ್ದಿಕ್ ಅವರನ್ನು ಮುಂಬೈ ತಂಡ ಉಳಿಸಿಕೊಳ್ಳಲು ನಾನು ಯಾವಾಗಲು ಬಯಸುತ್ತೇನೆ ಎಂದಿದ್ದಾರೆ. ಡ್ರೆಸ್ಸಿಂಗ್ ರೂಮ್‌ನಲ್ಲಿ ಯಾವುದೇ ಭಿನ್ನಾಭಿಪ್ರಾಯಗಳು ಇದ್ದರೆ, ಅವುಗಳನ್ನು ಒಟ್ಟಿಗೆ ಕುಳಿತು ಬಗೆ ಹರಿಸಿಕೊಳ್ಳಬೇಕು. ಏಕೆಂದರೆ ಎಲ್ಲರೂ ಒಂದು ತಂಡವಾಗಿ ಆಡುವುದು ಅವಶ್ಯಕ. ಹಾರ್ದಿಕ್ ಪಾಂಡ್ಯ ತಂಡಕ್ಕೆ ಅತ್ಯಂತ ಅಮೂಲ್ಯರು, ಮತ್ತು ಮುಂಬೈ ಇಂಡಿಯನ್ಸ್‌ಗೆ ಅವರ ಅವಶ್ಯಕತೆ ಇದೆ ಎಂದು ವೀರೇಂದ್ರ ಸೆಹ್ವಾಗ್ ತಿಳಿಸಿದ್ದಾರೆ.

Story first published: Friday, May 15, 2026, 15:15 [IST]
Other articles published on May 15, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+