ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ದಿಗ್ಗಜ ಗವಾಸ್ಕಾರ್ ಸಾಲಿಗೆ ಸೇರಿದ ನಾಯಕ ಕೊಹ್ಲಿ

By Mahesh

ಗಾಲೆ (ಶ್ರೀಲಂಕಾ), ಆಗಸ್ಟ್ 13: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರು ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಶತಕ ಬಾರಿಸುವ ಮೂಲಕ ಮತ್ತೆ ಲಯಕ್ಕೆ ಮರಳಿದ್ದಾರೆ. ಇದರ ಜೊತೆಗೆ ಟೆಸ್ಟ್ ಇತಿಹಾಸದಲ್ಲಿ ದಿಗ್ಗಜ ಸುನಿಲ್ ಗವಾಸ್ಕರ್ ಹಾಗೂ ಇಂಗ್ಲೆಂಡಿನ ನಾಯಕ ಕುಕ್ ಅವರ ಸಾಲಿಗೆ ವಿರಾಟ್ ಕೊಹ್ಲಿ ಸೇರ್ಪಡೆಗೊಂಡಿದ್ದಾರೆ.

2ನೇ ದಿನದ ವರದಿ 2ನೇ ದಿನದ ವರದಿ

ವಿರಾಟ್ ಕೊಹ್ಲಿ ಅವರು 103 ರನ್ ಬಾರಿಸಿ ವೃತ್ತಿ ಬದುಕಿನ 11ನೇ ಶತಕ ಬಾರಿಸಿದರು. ಈ ಮೂಲಕ ಸುನಿಲ್ ಗವಾಸ್ಕರ್ ಹಾಗೂ ಇಂಗ್ಲೆಂಡ್ ನಾಯಕ ಅಲೆಸ್ಟರ್ ಕುಕ್ ಮಾತ್ರ ಟೆಸ್ಟ್ ತಂಡದ ನಾಯಕರಾಗಿ ಮೊದಲ ನಾಲ್ಕು ಟೆಸ್ಟ್ ಪಂದ್ಯಗಳಲ್ಲೇ 4 ಶತಕಗಳನ್ನು ಬಾರಿಸಿದ ಮೂರನೇ ಆಟಗಾರ ಎನಿಸಿಕೊಂಡಿದ್ದಾರೆ.

Captain Kohli joins elite company of Gavaskar and Cook


ಕುಕ್ ಅವರು ನಾಯಕರಾಗಿ 5 ಟೆಸ್ಟ್ ಪಂದ್ಯಗಳಲ್ಲಿ 5 ಶತಕ ಬಾರಿಸಿದ್ದಾರೆ. 26 ವರ್ಷ ವಯಸ್ಸಿನ ಕೊಹ್ಲಿ ನಾಯಕನಾಗಿ ತಮ್ಮ ಮೊದಲ ಟೆಸ್ಟ್ ಅನುಭವದಲ್ಲೇ 115 ಹಾಗೂ 141 ರನ್ ಗಳಿಸಿದ್ದರು. ಅದೂ ಕಳೆದ ಡಿಸೆಂಬರ್ ನಲ್ಲಿ ಆಸ್ಟ್ರೇಲಿಯಾದ ವಿರುದ್ಧ.

ಜನವರಿಯಲ್ಲಿ ಮತ್ತೆ ಆಸ್ಟ್ರೇಲಿಯಾ ವಿರುದ್ಧ 147 ರನ್ ಗಳಿಸಿದರು. ಗುರುವಾರ ಶ್ರೀಲಂಕಾ ವಿರುದ್ಧ ಮತ್ತೆ ಶತಕ ಗಳಿಸಿ ದಾಖಲೆ ಬರೆದಿದ್ದಾರೆ. ವಿಶಿಷ್ಟ ಸಾಧನೆ ಮಾಡಿದ ಕೊಹ್ಲಿ ಶತಕಗಳ ಪಟ್ಟಿ

* 115 and 141 - Vs ಆಸ್ಟ್ರೇಲಿಯಾ, ಅಡಿಲೇಡ್ (ಡಿಸೆಂಬರ್ 2014)
* 147 and 46 - Vs ಆಸ್ಟ್ರೇಲಿಯಾ, ಸಿಡ್ನಿ (ಜನವರಿ 2015)
[ 14 - Vs ಬಾಂಗ್ಲಾದೇಶ, ಫಾತುಲ್ಲಾ (ಜೂನ್ 2015) ]
* 103 - Vs ಶ್ರೀಲಂಕಾ, ಗಾಲೆ (ಆಗಸ್ಟ್ 2015)

ಗವಾಸ್ಕರ್ ಅವರು 1976 ರಿಂದ 1979ರ ಅವಧಿಯಲ್ಲಿ ಸತತವಾಗಿ ನಾಲ್ಕು ಶತಕ ಬಾರಿಸಿದ್ದರು. ಕುಕ್ ಅವರು 2010 ಇಂದ 2012ರ ಅವಧಿಯಲ್ಲಿ ಈ ಸಾಧನೆ ಮಾಡಿದ್ದರು ( ಒನ್ ಇಂಡಿಯಾ ಸುದ್ದಿ)

Story first published: Wednesday, January 3, 2018, 10:03 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X