ನಾಯಕಿ ಮಿಥಾಲಿ ದಿಟ್ಟ ಹೋರಾಟ, ಕಿವೀಸ್ ವಿರುದ್ಧ ಜಯ
ಬೆಂಗಳೂರು, ಜುಲೈ 06: ಟೀಂ ಇಂಡಿಯಾ ಮಹಿಳಾ ಕ್ರಿಕೆಟ್ ತಂಡ ಮತ್ತೊಮ್ಮೆ ಗೆಲುವಿನ ಹಾದಿ ಹಿಡಿದಿದೆ. ನ್ಯೂಜಿಲೆಂಡ್ ವಿರುದ್ಧ ಅತಿಥೇಯ ತಂಡಕ್ಕೆ ಜಯ ತಂದುಕೊಡುವಲ್ಲಿ ನಾಯಕಿ ಮಿಥಾಲಿ ರಾಜ್ ಮಹತ್ವದ ಪಾತ್ರವಹಿಸಿದ್ದಾರೆ. 221 ರನ್ ಚೇಸ್ ಮಾಡಿ ಕೀವಿಸ್ ವಿರುದ್ಧ ಜಯ ಗಳಿಸಿದ ಟೀಂ ಇಂಡಿಯಾ ಈಗ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ 2-2 ಸಮಬಲ ಸಾಧಿಸಿದೆ.
ಸೋಮವಾರ(ಜುಲೈ 06) ನಡೆದ ಪಂದ್ಯದಲ್ಲಿ ನಾಯಕಿ ಮಿಥಾಲಿ ರಾಜ್ (81 ಅಜೇಯ, 88ಎ, 10x4) ಏಕದಿನ ಕ್ರಿಕೆಟ್ ವೃತ್ತಿ ಬದುಕಿನಲ್ಲಿ 5,000 ರನ್ ಪೂರೈಸಿದರು. ಸ್ಮೃತಿ ಮಂದಾನ 66 ರನ್(99 ಎ, 8x4) ಗಳಿಸಿದರು.

ಸ್ಮೃತಿ ಹಾಗೂ ಮಿಥಾಲಿ ಜೋಡಿ ಎರಡನೇ ವಿಕೆಟ್ ಗೆ 124ರನ್ ಸೇರಿಸಿ ನ್ಯೂಜಿಲೆಂಡ್ ನೀಡಿದ್ದ 220ರನ್ ಗುರಿಯನ್ನು 34 ಎಸೆತಗಳು ಬಾಕಿ ಇರುವಂತೆಯೇ ದಾಟಿ ಜಯದ ನಗೆ ಬೀರಿತು. ಬುಧವಾರ(ಜುಲೈ 08) ನಡೆಯಲಿರುವ ಅಂತಿಮ ಪಂದ್ಯದಲ್ಲಿ ಗೆದ್ದವರಿಗೆ ಏಕದಿನ ಸರಣಿ ಲಭಿಸಲಿದೆ.
ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ ಕಿವೀಸ್ ತಂಡ ನಿಗದಿತ 50 ಓವರ್ ಗಳಲ್ಲಿ 220ರನ್ ಸ್ಕೋರ್ ಮಾಡಿ ಆಲೌಟ್ ಆಯಿತು. ಸೂಜಿ ಬ್ಯಾಟ್ಸ್ 27, ಎಮಿ ಸಟರ್ಥ್ ವೈಟ್ 43(55ಎ, 6x4,1x6), ಸೋಫಿ 89 ರನ್ ಗಳಿಸಿ ಉತ್ತಮ ಆಟ ಪ್ರದರ್ಶಿಸಿದರು.
ಭಾರತದ ಪರ ವೇಗಿ ನಿರಂಜನಾ ನಾಗರಾಜನ್ 35 ರನ್ನಿತ್ತು 3 ವಿಕೆಟ್, ಎಡಗೈ ಸ್ಪಿನ್ನರ್ ರಾಜೇಶ್ವರಿ ಗಾಯಕ್ವಾಡ್ 25 ರನ್ನಿತ್ತು 3 ವಿಕೆಟ್ ಪಡೆದು ಯಶಸ್ವಿ ಬೌಲರ್ ಗಳೆನಿಸಿದರು. ಭಾರತದಲ್ಲಿ ಥಿರುಷ್ ಕಾಮಿನಿ 31 ರನ್ ಹಾಗೂ ಸ್ಮೃತಿ 66 ರನ್ ಗಳಿಸಿ ಉತ್ತಮ ಆರಂಭ ಒದಗಿಸಿದರು. ನಂತರ ನಾಯಕಿ ಮಿಥಾಲಿ ರಾಜ್ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.
ಸಂಕ್ಷಿಪ್ತ ಸ್ಕೋರ್
ನ್ಯೂಜಿಲೆಂಡ್ 49.5 ಓವರ್ಸ್ 220 ಆಲೌಟ್
ಭಾರತ 44.2 ಓವರ್ಸ್ 221/2. (ಐಎಎನ್ ಎಸ್)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications