Rohit Sharma: ವಿಶ್ವ ದಾಖಲೆ ಗೆಲುವು ಸರಿಟ್ಟುವ ವಿಶ್ವಾಸದಲ್ಲಿ ರೋಹಿತ್ ಶರ್ಮಾ
ಟೀಮ್ ಇಂಡಿಯಾದ ಸ್ಟಾರ್ ಆಟಗಾರ ಹಾಗೂ ನಾಯಕ ರೋಹಿತ್ ಶರ್ಮಾ ಚುಟುಕು ಫಾರ್ಮೆಟ್‌ನಲ್ಲಿ ಮತ್ತೊಮ್ಮೆ ತಂಡವನ್ನು ಮುನ್ನಡೆಸಲಿದ್ದಾರೆ. ಸುಮಾರು 14 ತಿಂಗಳ ಬಳಿಕ ಅಖಾಡಕ್ಕೆ ಇಳಿಯುತ್ತಿರುವ ಹಿಟ್ ಮ್ಯಾನ್ ದಾಖಲೆಯ ಮೇಲೆ ಕಣ್ಣು ನೆಟ್ಟಿದ್ದಾರೆ. ಮುಂಬೈಕರ್ ದಾಖಲೆಯ ದಾಹ ಹೆಚ್ಚಾಗಿದೆ. ಹೀಗಾಗಿ ಭಾರತದಲ್ಲಿ ನಡೆಯಲಿರುವ ಅಫ್ಘಾನಿಸ್ತಾನ ವಿರುದ್ಧದ ಸರಣಿಯನ್ನು ಕ್ಲೀಸ್ ಸ್ವೀಪ್ ಮಾಡಿದ್ದೇ ಆದಲ್ಲಿ ದಾಖಲೆಯ ಪುಟದಲ್ಲಿ ತಮ್ಮ ಹೆಸರನ್ನು ನಮೂದಿಸುತ್ತಾರೆ.
ಜನವರಿ 11 ರಿಂದ ಭಾರತ ಮತ್ತು ಅಫ್ಘಾನಿಸ್ತಾನ ನಡುವೆ ಟಿ20 ಪಂದ್ಯಗಳ ಸರಣಿ ನಡೆಯಲಿದೆ. ದ್ವಿಪಕ್ಷೀಯ ಸರಣಿಗಾಗಿ ಅಫ್ಘಾನಿಸ್ತಾನ ತಂಡ ಭಾರತ ಪ್ರವಾಸ ಬೆಳೆಸಿರುವುದು ಇದೇ ಮೊದಲು. ಟಿ20 ವಿಶ್ವಕಪ್ ತಯಾರಿಗೆ ಇದುವೇ ಕೊನೆಯ ಅವಕಾಶ. ಈ ಸರಣಿ ಆದ ಬಳಿಕ ಟಿ20 ಫಾರ್ಮೆಟ್‌ನಲ್ಲಿ ಟೀಮ್ ಇಂಡಿಯಾ ಮೈದಾನಕ್ಕೆ ಇಳಿಯುವುದಿಲ್ಲ. ಈ ಸರಣಿಯ ಬಳಿಕ ಟೀಮ್ ಇಂಡಿಯಾ ತವರಿನಲ್ಲಿ ಇಂಗ್ಲೆಂಡ್ ವಿರುದ್ಧ ಐದು ಪಂದ್ಯಗಳ ಟೆಸ್ಟ್ ಸರಣಿ ಆಡಲಿದ್ದು, ಬಳಿಕ ಐಪಿಎಲ್‌ನಲ್ಲಿ ಟೀಮ್ ಇಂಡಿಯಾ ಆಟಗಾರರು ಬ್ಯೂಸಿ.

ಅಫ್ಘಾನಿಸ್ತಾನ ವಿರುದ್ಧದ ಸರಣಿಯಲ್ಲಿ ಬಿಸಿಸಿಐ ಹಲವು ಪ್ರಯೋಗಗಳನ್ನು ಮಾಡುತ್ತಿದೆ. ಒಂದೆಡೆ, ಆಯ್ಕೆ ಸಮಿತಿ ಅನುಭವಿ ಬ್ಯಾಟ್ಸಮನ್ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿಯನ್ನು ತಂಡಕ್ಕೆ ಸೇರಿಸಿಕೊಂಡಿದೆ. ಮತ್ತೊಂದೆಡೆ, ದೇಶದ ಟಾಪ್-5 ಬೌಲರ್‌ಗಳ ಪೈಕಿ ಯಾರೂ ತಂಡಕ್ಕೆ ಸೇರ್ಪಡೆಗೊಂಡಿಲ್ಲ.
ನಾಯಕ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ 15 ತಿಂಗಳ ನಂತರ ಭಾರತ ಕ್ರಿಕೆಟ್ ತಂಡಕ್ಕೆ ಮರಳಿದ್ದಾರೆ. ಇವರಿಬ್ಬರೂ ತಂಡದ ಯಶಸ್ವಿ ಬ್ಯಾಟ್ಸ್‌ಮನ್‌ಗಳಷ್ಟೇ ಅಲ್ಲ, ಅತ್ಯಂತ ಅನುಭವಿಗಳು. ರೋಹಿತ್ ಶರ್ಮಾ 2007 ರಿಂದ ಮತ್ತು ವಿರಾಟ್ 2010 ರಿಂದ ಭಾರತಕ್ಕಾಗಿ ಟಿ20 ಪಂದ್ಯಗಳನ್ನು ಆಡುತ್ತಿದ್ದಾರೆ. ವಿರಾಟ್ ಅವರ ಹೆಸರಿನಲ್ಲಿ 4000 ಕ್ಕೂ ಹೆಚ್ಚು T20 ಅಂತಾರಾಷ್ಟ್ರೀಯ ರನ್‌ಗಳನ್ನು ಹೊಂದಿದ್ದಾರೆ ಮತ್ತು ರೋಹಿತ್ ಅವರ ಹೆಸರಿನಲ್ಲಿ 3800 ಕ್ಕೂ ಹೆಚ್ಚು ರನ್‌ಗಳನ್ನು ಹೊಂದಿದ್ದಾರೆ.
ವಿಶ್ವ ದಾಖಲೆ ಮುರಿಯುವ ಸನಿಹದಲ್ಲಿ ರೋಹಿತ್
ರೋಹಿತ್ ಶರ್ಮಾ 14 ತಿಂಗಳ ನಂತರ ಭಾರತ ಟಿ20 ತಂಡಕ್ಕೆ ಮರಳಿದ್ದಾರೆ. 2022ರ ಟಿ20 ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ಪರ ಕೊನೆಯ ಟಿ20 ಪಂದ್ಯವನ್ನು ರೋಹಿತ್ ಆಡಿದ್ದರು. ಆದರೆ 2024ರ ಟಿ20 ವಿಶ್ವಕಪ್‌ಗೂ ಮುನ್ನ ಮತ್ತೊಮ್ಮೆ ತಂಡಕ್ಕೆ ಮರಳಿದ್ದಾರೆ. ಹೀಗಿರುವಾಗ ಟಿ20ಯಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಗೆದ್ದ ನಾಯಕ ಎಂಬ ವಿಶ್ವದಾಖಲೆ ಮುರಿಯುವ ಸುವರ್ಣಾವಕಾಶ ಇದೀಗ ಅವರಿಗಿದೆ.

4 ಪಂದ್ಯಗಳಲ್ಲಿ ಗೆಲುವು ಅವಶ್ಯಕ
ರೋಹಿತ್ ಶರ್ಮಾ ಟಿ20 ಮಾದರಿಯಲ್ಲಿ ಭಾರತದ ಅತ್ಯಂತ ಯಶಸ್ವಿ ನಾಯಕ. ಅಫ್ಘಾನಿಸ್ತಾನವನ್ನು 3-0 ಅಂತರದಿಂದ ಸೋಲಿಸುವಲ್ಲಿ ರೋಹಿತ್ ಯಶಸ್ವಿಯಾದರೆ, ಅವರು ಭಾರತದ ಅತ್ಯಂತ ಯಶಸ್ವಿ ಟಿ20 ನಾಯಕರಾಗುತ್ತಾರೆ. ಸದ್ಯ ಈ ದಾಖಲೆ ಎಂಎಸ್ ಧೋನಿ ಹೆಸರಿನಲ್ಲಿದೆ. ಎಂಎಸ್ ಧೋನಿ 72 ಪಂದ್ಯಗಳಲ್ಲಿ 41 ಪಂದ್ಯಗಳನ್ನು ಗೆದ್ದಿದ್ದರು. ಅದೇ ವೇಳೆ ಈ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡುವ ಮೂಲಕ ಟಿ20ಯಲ್ಲಿ ನಾಯಕನಾಗಿ ಅತಿ ಹೆಚ್ಚು ಪಂದ್ಯಗಳನ್ನು ಗೆದ್ದ ವಿಶ್ವದಾಖಲೆಯನ್ನೂ ಸರಿಗಟ್ಟಲಿದ್ದಾರೆ. ಅವರು ಟಿ20 ವಿಶ್ವಕಪ್‌ನಲ್ಲೂ ನಾಯಕರಾದರೆ ಈ ವಿಶ್ವ ದಾಖಲೆಯನ್ನು ಮುರಿಯುವ ಅವಕಾಶವಿದೆ.
T20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಗೆದ್ದ ನಾಯಕರು
ಅಸ್ಗರ್ ಅಫ್ಘಾನ್- ಅಫ್ಘಾನಿಸ್ತಾನ- 42
ಬಾಬರ್ ಆಜಂ- ಪಾಕಿಸ್ತಾನ- 42
ಇಯಾನ್ ಮಾರ್ಗನ್- ಇಂಗ್ಲೆಂಡ್ - 42
ಬ್ರಿಯಾನ್ ಮಸಾಬಾ- ಉಗಾಂಡಾ- 42
ಎಂಎಸ್ ಧೋನಿ- ಭಾರತ- 41
ಆರನ್ ಫಿಂಚ್- ಆಸ್ಟ್ರೇಲಿಯಾ- 40
ರೋಹಿತ್ ಶರ್ಮಾ- ಭಾರತ 39
ಸ್ಟಾರ್ ಬೌಲರ್‌ಗಳಿಗೆ ವಿಶ್ರಾಂತಿ
ಭಾರತ ಜನವರಿ ಕೊನೆಯ ವಾರದಿಂದ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯನ್ನು ಆಡಬೇಕಿದೆ. ಹೀಗಾಗಿ ಜಸ್ಪ್ರೀತ್ ಬುಮ್ರಾ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಹಾರ್ದಿಕ್ ಪಾಂಡ್ಯ ಗಾಯಗೊಂಡಿದ್ದಾರೆ. ಕಳಪೆ ಪ್ರದರ್ಶನದ ಹಿನ್ನೆಲೆ ಭುವನೇಶ್ವರ್ ಕುಮಾರ್ ತಂಡದಲ್ಲಿ ಸ್ಥಾನ ಕಳೆದುಕೊಂಡಿದ್ದಾರೆ. ಯುಜ್ವೇಂದ್ರ ಚಾಹಲ್ ಮತ್ತು ಅಶ್ವಿನ್ ಅವರ ಪ್ರದರ್ಶನವು ತಂಡದಲ್ಲಿ ಆಯ್ಕೆಯಾಗಲು ಯೋಗ್ಯವಾಗಿಲ್ಲ. ಆದರೆ ಆಯ್ಕೆದಾರರು ಬಹುಶಃ ಹೊಸ ಬೌಲರ್‌ಗಳಿಗೆ ಅವಕಾಶ ನೀಡಲು ಈ ಇಬ್ಬರನ್ನು ಹೊರಗಿಟ್ಟಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications