ಬಾಂಗ್ಲಾ ವಿರುದ್ಧ ಗೆದ್ದು, ಅಜರ್ ದಾಖಲೆ ಮುರಿದ ಕೊಹ್ಲಿ
ಹೈದರಾಬಾದ್, ಫೆಬ್ರವರಿ 13: ಪ್ರವಾಸಿ ಬಾಂಗ್ಲಾದೇಶ ವಿರುದ್ಧ ಇಲ್ಲಿನ ರಾಜೀವ್ ಗಾಂಧಿ ಸ್ಟೇಡಿಯಂನಲ್ಲಿ ನಡೆದ ಏಕೈಕ ಟೆಸ್ಟ್ ಪಂದ್ಯವನ್ನು ಗೆಲ್ಲುವ ಮೂಲಕ ಭಾರತದ ನಾಯಕ ವಿರಾಟ್ ಕೊಹ್ಲಿ ಅವರು ಹೊಸ ದಾಖಲೆ ಬರೆದಿದ್ದಾರೆ. ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಟೆಸ್ಟ್ ಪಂದ್ಯ ಸೋಮವಾರದಂದು (ಫೆಬ್ರವರಿ 13) ಅಂತ್ಯ ಕಂಡಿದ್ದು, ಬಾಂಗ್ಲಾದೇಶ 208ರನ್ ಗಳಿಂದ ಸೋಲು ಅನುಭವಿಸಿದೆ.
ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ಜಯ ಗಳಿಸುವ ಮೂಲಕ ವಿರಾಟ್ ಕೊಹ್ಲಿ ಅವರು ಮೊಹಮ್ಮದ್ ಅಜರುದ್ದೀನ್ ಅವರ ದಾಖಲೆಯನ್ನು ಮುರಿದಿದ್ದಾರೆ. [ಬಾಂಗ್ಲಾ ವಿರುದ್ಧ ಸುಲಭ ಜಯ ದಾಖಲಿಸಿದ ಭಾರತ]
2000 ರಲ್ಲಿ ಟೆಸ್ಟ್ ಮಾನ್ಯತೆ ಪಡೆದ ಬಾಂಗ್ಲಾದೇಶ ಇಲ್ಲಿ ತನಕ ನಾಲ್ಕು ಬಾರಿ ಭಾರತ ಪ್ರವಾಸ ಕೈಗೊಂಡಿದ್ದರೂ, ಇದೇ ಮೊದಲ ಬಾರಿಗೆ ಟೆಸ್ಟ್ ಪಂದ್ಯವಾಡುತ್ತಿದೆ. ಭಾರತ ವಿರುದ್ಧ ಇನ್ನೂ ಟೆಸ್ಟ್ ವಿಜಯ ಸಾಧಿಸಲು ಸಾಧ್ಯವಾಗಿಲ್ಲ.
ಈ ಪಂದ್ಯಕ್ಕೂ ಮುನ್ನ ಕೊಹ್ಲಿ ಹಾಗೂ ಅಜರುದ್ದೀನ್ ಅವರು ನಾಯಕರಾಗಿ ತಲಾ 14 ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದರು. ಈಗ 15 ಗೆಲುವಿನೊಂದಿಗೆ ಭಾರತದ ಶ್ರೇಷ್ಠ ನಾಯಕರ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದ್ದಾರೆ. ಯಶಸ್ವಿ ನಾಯಕರ ಪಟ್ಟಿಯಲ್ಲಿ ಎಂಎಸ್ ಧೋನಿ ಹಾಗೂ ಸೌರವ್ ಗಂಗೂಲಿ ನಂತರದ ಸ್ಥಾನದಲ್ಲಿ ಕೊಹ್ಲಿ ಇದ್ದಾರೆ. ಕೊಹ್ಲಿ ಅವರು ಸತತ 6 ಸರಣಿಯನ್ನು ಗೆದ್ದುಕೊಂಡಿದ್ದಾರೆ.

ಮೂರನೇ ಯಶಸ್ವಿ ನಾಯಕ
ಈ ಪಂದ್ಯಕ್ಕೂ ಮುನ್ನ ಕೊಹ್ಲಿ ಹಾಗೂ ಅಜರುದ್ದೀನ್ ಅವರು ನಾಯಕರಾಗಿ ತಲಾ 14 ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದರು. ಈಗ 15 ಗೆಲುವಿನೊಂದಿಗೆ ಭಾರತದ ಶ್ರೇಷ್ಠ ನಾಯಕರ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದ್ದಾರೆ. ಯಶಸ್ವಿ ನಾಯಕರ ಪಟ್ಟಿಯಲ್ಲಿ ಎಂಎಸ್ ಧೋನಿ ಹಾಗೂ ಸೌರವ್ ಗಂಗೂಲಿ ನಂತರದ ಸ್ಥಾನದಲ್ಲಿ ಕೊಹ್ಲಿ ಇದ್ದಾರೆ. ಕೊಹ್ಲಿ ಅವರು ಸತತ 6 ಸರಣಿಯನ್ನು ಗೆದ್ದುಕೊಂಡಿದ್ದಾರೆ.

ಸತತ 6ನೇ ಸರಣಿ
* 2015ರಲ್ಲಿ ಶ್ರೀಲಂಕಾ ವಿರುದ್ಧ 2-1
* ದಕ್ಷಿಣ ಆಫ್ರಿಕಾ ವಿರುದ್ಧ 3-0
* ವೆಸ್ಟ್ ಇಂಡೀಸ್ ವಿರುದ್ಧ 2-0
* ನ್ಯೂಜಿಲೆಂಡ್ ವಿರುದ್ಧ 3-0
* ಇಂಗ್ಲೆಂಡ್ ವಿರುದ್ಧ 4-0
* 2017ರಲ್ಲಿ ಬಾಂಗ್ಲಾದೇಶ ವಿರುದ್ಧ 1-0

ಟೆಸ್ಟ್ ಕ್ರಿಕೆಟ್ ನ ಯಶಸ್ವಿ ನಾಯಕರು
* ಎಂಎಸ್ ಧೋನಿ- 60 ಟೆಸ್ಟ್ ಪಂದ್ಯಗಳಲ್ಲಿ 27 ಗೆಲುವು
* ಸೌರವ್ ಗಂಗೂಲಿ - 49 ಟೆಸ್ಟ್ ಪಂದ್ಯಗಳಲ್ಲಿ 21 ಗೆಲುವು
* ವಿರಾಟ್ ಕೊಹ್ಲಿ (23)-15 ಜಯ
* ಮೊಹಮ್ಮದ್ ಅಜರುದ್ದೀನ್ (47) -14 ಗೆಲುವು
* ಸುನಿಲ್ ಗವಾಸ್ಕರ್ (47), ಮನ್ಸೂರ್ ಆಲಿ ಖಾನ್ ಪಟೌಡಿ (40) -9 ಜಯ
* ರಾಹುಲ್ ದ್ರಾವಿಡ್ (25) -8 ಗೆಲುವು

ದ್ವಿಶತಕ ಸಿಡಿಸಿದ ಸರಣಿ ಸೋತಿಲ್ಲ
* ವೆಸ್ಟ್ ಇಂಡೀಸ್ ವಿರುದ್ಧ ಜುಲೈನಲ್ಲಿ 200ರನ್.
* ನ್ಯೂಜಿಲೆಂಡ್ ವಿರುದ್ಧ 211,
* ಇಂಗ್ಲೆಂಡ್ ವಿರುದ್ಧ ಮುಂಬೈನಲ್ಲಿ 235 ರನ್(ವೈಯಕ್ತಿಕ ಗರಿಷ್ಠ ಮೊತ್ತ)ಗಳಿಸಿ ಮೂರು ದ್ವಿಶತಕ ಸಿಡಿಸಿದ ಟೀಂ ಇಂಡಿಯಾದ ನಾಯಕ ಎನಿಸಿದ್ದರು. ಈಗ ನಾಲ್ಕು ದ್ವಿಶತಕ ಗಳಿಸಿ ಹೊಸ ದಾಖಲೆ ಬರೆದಿದ್ದಾರೆ. ಎಲ್ಲಾ ದ್ವಿಶತಕಗಳನ್ನು ನಾಯಕನಾಗಿ ಗಳಿಸಿದ್ದಲ್ಲದೆ, ಒಂದು ಟೆಸ್ಟ್ ಸರಣಿ ಕೂಡಾ ಇಲ್ಲಿ ತನಕ ಸೋತಿಲ್ಲ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications