ಸಂಗಕ್ಕಾರ ಕೊನೆ ಟೆಸ್ಟ್ ನಲ್ಲಿ ಕೊಹ್ಲಿಗೆ ಮೊದಲ ಗೆಲುವು
ಕೊಲಂಬೋ, ಆಗಸ್ಟ್ 24: ಟೀಂ ಇಂಡಿಯಾ ನಾಯಕರಾಗಿ ವಿರಾಟ್ ಕೊಹ್ಲಿ ಅವರು ಸೋಮವಾರ ಪ್ರಪ್ರಥಮ ಬಾರಿಗೆ ಗೆಲುವಿನ ಸಿಹಿ ಉಂಡಿದ್ದಾರೆ. ಕ್ರಿಕೆಟ್ ದಿಗ್ಗಜ ಕುಮಾರ್ ಸಂಗಕ್ಕಾರ ಅವರ ವೃತ್ತಿ ಬದುಕಿನ ವಿದಾಯದ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅವರು ಮೊದಲ ಗೆಲುವು ದಾಖಲಿಸಿದ್ದಾರೆ.
ಮೊದಲ ಟೆಸ್ಟ್ ಪಂದ್ಯದಲ್ಲಿ 63 ರನ್ ಗಳಿಂದ ಸೋಲು ಕಂಡಿದ್ದ ವಿರಾಟ್ ಕೊಹ್ಲಿ ಅವರು ಈ ಪಂದ್ಯದಲ್ಲಿ ಬೇರೆ ರಣತಂತ್ರವನ್ನು ಹೆಣೆದು ಯಶಸ್ವಿಯಾದರು. ಬೌಲರ್ ಗಳ ಜೊತೆಗೆ ಬ್ಯಾಟಿಂಗ್ ಕೂಡಾ ತಂಡಕ್ಕೆ ಬಲ ತಂದಿದ್ದು ಟೀಂ ಇಂಡಿಯಾ ಹಾಗೂ ಕೊಹ್ಲಿ ಗೆಲುವಿಗೆ ಕಾರಣವಾಯಿತು. [ಶ್ರೀಲಂಕಾ ವಿರುದ್ಧ ಭಾರತಕ್ಕೆ ಜಯ, ರಾಹುಲ್ ಪಂದ್ಯಶ್ರೇಷ್ಠ]
2ನೇ ಟೆಸ್ಟ್ ಪಂದ್ಯದ ಕೊನೆ ದಿನದಂದು ಶ್ರೀಲಂಕಾ ವಿರುದ್ಧ 278ರನ್ ಗಳ ಅಂತರದ ಜಯ ದಾಖಲಿಸಿದ ಕೊಹ್ಲಿ ಅವರು ಕೊನೆಗೂ ಜಯದ ನಗೆ ಬೀರಿದ್ದಾರೆ. [ಕೊಹ್ಲಿ ಕ್ರಿಕೆಟ್ ಲೋಕದ ಮರಡೋನಾ: ಗಂಗೂಲಿ]
ಕಳೆದ ವರ್ಷದ ಡಿಸೆಂಬರ್ ತಿಂಗಳಲ್ಲಿ ಟೀಂ ಇಂಡಿಯಾ ನಾಯಕತ್ವದ ಪಟ್ಟ ವಹಿಸಿಕೊಂಡ ಕೊಹ್ಲಿ ಮೊದಲ ಗೆಲುವು ಸಾಧಿಸಲು ಐದು ಪಂದ್ಯಗಳ ತನಕ ಕಾಯಬೇಕಾಯಿತು. ನಾಯಕತ್ವ ವಹಿಸಿಕೊಂಡ ಮೇಲೆ ಬ್ಯಾಟಿಂಗ್ ಮೇಲೆ ಕೆಟ್ಟ ಪರಿಣಾಮವಾಗುತ್ತದೆ ಎಂಬುದನ್ನು ಕೊಹ್ಲಿ ಸುಳ್ಳಾಗಿಸಿದರು. ಸತತವಾಗಿ ಶತಕ ಬಾರಿಸಿ ದಾಖಲೆ ಬರೆದರು.

ಬದಲಿ ನಾಯಕನ ಸ್ಥಾನದಿಂದ ಬಡ್ತಿ ಪಡೆದ ಕೊಹ್ಲಿ
26 ವರ್ಷ ವಯಸ್ಸಿನ ವಿರಾಟ್ ಕೊಹ್ಲಿ ಅವರು ಎಂಎಸ್ ಧೋನಿ ಅವರು ಗಾಯಗೊಂಡು ಪಂದ್ಯಕ್ಕೆ ಅಲಭ್ಯರಾದಾಗ. ಅಡಿಲೇಡ್ ನಲ್ಲಿ ಮೊದಲ ಬಾರಿಗೆ ಟೀಂ ಇಂಡಿಯಾ ನಾಯಕತ್ವ ವಹಿಸಿಕೊಂಡರು. ನಂತರ ಧೋನಿ ಅವರು ಟೆಸ್ಟ್ ಜೀವನಕ್ಕೆ ನಿವೃತ್ತಿ ಘೋಷಿಸಿದ ಬಳಿಕೆ ಬಾಂಗ್ಲಾ ದೇಶ ಸರಣಿಯಲ್ಲಿ ಪೂರ್ಣ ಪ್ರಮಾಣದ ನಾಯಕನಾಗಿ ಬಡ್ತಿ ಪಡೆದುಕೊಂಡರು.

ಸಂಗಕ್ಕಾರನಿಗೆ ಸಲಾಂ ಎಂದ ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ ಮೆಚ್ಚುಗೆ ಮಾತು ಬರೆದಿದ್ದು ಹೀಗೆ
"Dear Kumar, It's been an absolute pleasure knowing you as a person first and no words can explain your great cricketing achievements. You have inspired so many people and shown team them the way. Lucky to have played in the same era as you.[....]

ಆಗಸ್ಟ್ 24, 2015ರ ತನಕ ನಾಯಕನಾಗಿ ಕೊಹ್ಲಿ
1. vs ಆಸ್ಟ್ರೇಲಿಯಾ, ಅಡಿಲೇಡ್, ಡಿಸೆಂಬರ್ 2014 (48ರನ್ ಗಳಿಂದ ಸೋಲು)
2. vs ಆಸ್ಟ್ರೇಲಿಯಾ, ಸಿಡ್ನಿ,ಜನವರಿ 2015 (ಡ್ರಾ)
3. vs ಬಾಂಗ್ಲಾದೇಶ, ಫಾತುಲ್ಲಾ, ಜೂನ್ 2015 (ಡ್ರಾ)
4.vs ಶ್ರೀಲಂಕಾ, ಗಾಲೆ, ಆಗಸ್ಟ್ 2015 ( 63 ರನ್ ಗಳಿಂದ ಸೋಲು)
5.vs ಶ್ರೀಲಂಕಾ, ಕೊಲಂಬೋ, ಆಗಸ್ಟ್ 2015 (278ರನ್ ಗಳಿಂದ ಜಯ)

ದಿಗ್ಗಜ ಗವಾಸ್ಕಾರ್ ಸಾಲಿಗೆ ಸೇರಿದ ನಾಯಕ ಕೊಹ್ಲಿ
ಟೆಸ್ಟ್ ತಂಡದ ನಾಯಕರಾಗಿ ಮೊದಲ ನಾಲ್ಕು ಟೆಸ್ಟ್ ಪಂದ್ಯಗಳಲ್ಲೇ 4 ಶತಕಗಳನ್ನು ಬಾರಿಸಿದ ಮೂರನೇ ಆಟಗಾರ ಎನಿಸಿಕೊಂಡಿದ್ದಾರೆ. ಈ ಮೂಲಕ ಸುನಿಲ್ ಗವಾಸ್ಕರ್ ಹಾಗೂ ಇಂಗ್ಲೆಂಡ್ ನಾಯಕ ಅಲೆಸ್ಟರ್ ಕುಕ್ ಸಾಲಿಗೆ ಕೊಹ್ಲಿ ಸೇರಿದ್ದಾರೆ. ಮೊದಲ ಟೆಸ್ಟ್ ಪಂದ್ಯದಲ್ಲಿ ಕೊಹ್ಲಿ ಅವರು ಶತಕ (103 ರನ್) ಗಳಿಸಿದ್ದರು. ಇದು ಅವರ ವೃತ್ತಿ ಬದುಕಿನ 11ನೇ ಶತಕವಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications