Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ನಾಯಕತ್ವದ ಹೊಣೆಗಾರಿಕೆ ನನ್ನ ಆಟವನ್ನು ಬದಲಾಯಿಸಲಿಲ್ಲ: ಬೆನ್ ಸ್ಟೋಕ್ಸ್

Captaincy Didnt Change Me As A Player Says Ben Stokes

ಇಂಗ್ಲೆಂಡ್ ತಂಡ ವೆಸ್ಟ್ ಇಂಡೀಸ್‌ಗೆ ತವರು ನೆಲದಲ್ಲೇ ಟೆಸ್ಟ್ ಪಂದ್ಯದಲ್ಲಿ ಶರಣಾಗಿದೆ. ಈ ಮೂಲಕ ಕ್ರಿಕೆಟ್ ಜನಕರು ವಿಂಡೀಸ್ ವಿರುದ್ಧದ ಟೆಸ್ಟ್ ಸರಣಿಯ ಆರಂಭದಲ್ಲೇ ಮುಖಭಂಗಕ್ಕೀಡಾಗಿದ್ದಾರೆ. ಈ ಬಗ್ಗೆ ಸಾಕಷ್ಟು ವಿಮರ್ಶೆಗಳು ನಡೆಯುತ್ತಿದ್ದು ವೆಸ್ಟ್ ಇಂಡೀಸ್ ತಂಡದ ಸಮಯೋಚಿತ ಆಟಕ್ಕೆ ಪ್ರಶಂಸೆಗಳು ವ್ಯಕ್ತವಾಗುತ್ತಿದೆ.

ಈ ಸೋಲಿನ ಬಳಿಕ ಇಂಗ್ಲೆಂಡ್ ತಂಡದ ನೂತನ ನಾಯಕ ಬೆನ್ ಸ್ಟೋಕ್ಸ್ ಪ್ರತಿಕ್ರಿಯಿಸಿದರು. ನಾಯಕನಾಗಿ ಮುನ್ನಡೆಸುವ ಜವಾಬ್ಧಾರಿ ತನ್ನ ಪ್ರದರ್ಶನದ ಮೇಲೆ ಪರಿಣಾಮ ಬೀರಿಲ್ಲ ಎಂದು ಹೇಳಿದ್ದಾರೆ. ಈ ಜವಾಬ್ಧಾರಿ ತನ್ನ ಆಟವನ್ನು ಬದಲಾಯಿಸಿಲ್ಲ ಎಂದು ಸ್ಟೋಕ್ಸ್ ಸ್ಪಷ್ಟಪಡಿಸಿದ್ದಾರೆ.

ವೆಸ್ಟ್ ಇಂಡೀಸ್‌ ತಂಡ ಅಂತಿಮ ದಿನದಂದು ಗೆಲ್ಲಲು 200 ರನ್‌ಗಳನ್ನು ಗಳಿಸುವ ಗುರಿಯನ್ನು ಪಡೆದುಕೊಂಡಿತ್ತು. ಆರಂಭದಲ್ಲಿ ಇಂಗ್ಲೆಂಡ್ ವೆಸ್ಟ್ ಇಂಡೀಸ್ ತಂಡದ ಬ್ಯಾಟ್ಸ್‌ಮನ್‌ಗಳನ್ನು ಬೇಗನೆ ಫೆವಿಲಿಯನ್‌ಗೆ ಅಟ್ಟುವಲ್ಲಿ ಯಶಸ್ವಿಯಾಗಿದ್ದರು. ಆದರೆ ಬಳಿಕ ಪಂದ್ಯವನ್ನು ಸುಲಭವಾಗಿ ವೆಸ್ಟ್ ಇಂಡೀಸ್ ಕೈಗೆ ಒಪ್ಪಿಸಿದರು.

ಹೀಗಾಗಿ ಪಂದ್ಯದ ಬಳಿಕ ಇಂಗ್ಲೆಂಡ್ ತಂಡದ ನಾಯಕ ಬೆನ್‌ ಸ್ಟೋಕ್ಸ್ ನಾಯಕತ್ವದಿಂದಾಗಿ ಎರಡನೇ ಇನ್ನಿಂಗ್ಸ್‌ ಬೌಲಿಂಗ್ ಸಂದರ್ಭದಲ್ಲಿ ಒತ್ತಡಕ್ಕೆ ಒಳಗಾದ ಕಾರಣ ಆಟದ ಮೇಲೆ ಪರಿಣಾಮ ಬೀರಿತು ಎಂಬ ರೀತಿಯ ವಿಮರ್ಶೆಗಳನ್ನು ಮಾಡಿದರು. ಆದರೆ ಇದನ್ನು ಬೆನ್‌ ಸ್ಟೋಕ್ಸ್ ನಿರಾಕರಿಸಿದ್ದಾರೆ.

ನನಗೆ ಸಿಕ್ಕ ಹೊಸ ಜವಾಬ್ಧಾರಿಯನ್ನು ನಾನು ಸಂಪೂರ್ಣವಾಗಿ ಅನುಭವಿಸಿದ್ದೇನೆ. ಆಟಗಾರನಾಗಿ ನಾನು ಈ ಹಿಂದೆ ಹೇಗೆ ಪ್ರದರ್ಶನವನ್ನು ನೀಡಿದ್ದೇನೋ ಅದೇ ಪ್ರದರ್ಶನವನ್ನು ಮುಂದುವರಿಸಿದ್ದೇನೆ ಎಂದು ಹೇಳಿದ್ದಾರೆ. ಬೆನ್ ಸ್ಟೋಕ್ಸ್ ಮೊದಲ ಪಂದ್ಯದ ಎರಡು ಇನ್ನಿಂಗ್ಸ್‌ಗಳಲ್ಲಿ ಒಟ್ಟು ಆರು ವಿಕೆಟ್ ಪಡೆದಿದ್ದಾರೆ. ಇದರಲ್ಲಿ ನಾಲ್ಕು ವಿಕೆಟ್ ಮೊದಲ ಇನ್ನಿಂಗ್ಸ್‌ನಲ್ಲಿ ಬಂದಿದ್ದರೆ ಎರಡನೇ ಇನ್ನಿಂಗ್ಸ್‌ನಲ್ಲಿ ಎರಡು ವಿಕೆಟ್ ಕಿತ್ತಿದ್ದರು.

Story first published: Tuesday, July 14, 2020, 9:43 [IST]
Other articles published on Jul 14, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+