Rohit Sharma: ಲಯ ಕಳೆದುಕೊಂಡು ತಂಡದಿಂದ ಹೊರ ನಡೆದಿರುವ ನಾಯಕರ ಪಟ್ಟಿ ಇಲ್ಲಿದೆ
ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮಾ ಐದನೇ ಟೆಸ್ಟ್ ಪಂದ್ಯದಲ್ಲಿ ಮೈದಾನಕ್ಕೆ ಇಳಿಯುವದಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ. ಕಳಪೆ ಫಾರ್ಮ್‌ನಿಂದಾಗಿ ಅವರನ್ನು ತಂಡದಿಂದ ಕೈ ಬಿಡಲಾಗಿದೆ. ಇವರು ಪ್ರಸಕ್ತ ಬಾರ್ಡರ್ ಗವಾಸ್ಕರ್ ಸರಣಿಯಲ್ಲಿ ಸತತ ರನ್ ಬರವನ್ನು ಅನುಭವಿಸಿದ್ದರು. ಹೀಗಾಗಿ ಇವರನ್ನು ತಂಡದಿಂದ ಕೈ ಬಿಡುವ ಬಗ್ಗೆ ಮಾತುಗಳು ಕೇಳಿ ಬರುತ್ತಿವೆ. ಈ ಹಿನ್ನೆಯಲ್ಲಿ ಟೀಮ್ ಇಂಡಿಯಾ ಐದನೇ ಟೆಸ್ಟ್‌ನಲ್ಲಿ ಬದಲಾವಣೆಯೊಂದಿಗೆ ಕಣಕ್ಕೆ ಇಳಿಯಬಹದು.
ಪರ್ತ್ ಟೆಸ್ಟ್‌ನಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸಿದ್ದ ಸ್ಟಾರ್ ಬೌಲರ್ ಜಸ್ಪ್ರಿತ್ ಬುಮ್ರಾ, ಐದನೇ ಟೆಸ್ಟ್‌ನಲ್ಲಿ ತಂಡವನ್ನು ಮುನ್ನಡೆಸುವ ಸಾಧ್ಯತೆ ದಟ್ಟವಾಗಿದೆ. ಒಂದು ವೇಳೆ ಜಸ್ಪ್ರಿತ್ ಬುಮ್ರಾ ಟೆಸ್ಟ್ ತಂಡದ ಚುಕ್ಕಾಣಿಯನ್ನು ಹಿಡಿದಲ್ಲಿ, ರೋಹಿತ್ ಬೆಂಚ್ ಕಾಯಬೇಕಾಗುತ್ತದೆ. ಒಂದು ವೇಳೆ ಹೀಗೆ ಆದಲ್ಲಿ ರೋಹಿತ್ ಶರ್ಮಾ ವಿಶೇಷ ನಾಯಕರ ಪಟ್ಟಿಗೆ ಎಂಟ್ರಿ ಪಡೆಯುತ್ತಾರೆ.

ಲಯ ಕಳೆದುಕೊಂಡ ರೋಹಿತ್
ಹೌದು.. ಫಾರ್ಮ್ ಇಲ್ಲದೆ ತಂಡದಿಂದ ಹೊರ ಹೋಗುವ ನಾಯಕರ ಪಟ್ಟಿ ಏನು ಸಣ್ಣದಿಲ್ಲ. ಈ ಪಟ್ಟಿಯಲ್ಲಿ ಹಲವು ಸ್ಟಾರ್ ಆಟಗಾರರು ಇದ್ದಾರೆ. ಈ ಸಾಲಿಗೆ ರೋಹಿತ್ ಶರ್ಮಾ ಎಂಟ್ರಿ ಪಡೆಯುತ್ತಾರೆ. ರೋಹಿತ್ ಪ್ರಸಕ್ತ ಸರಣಿಯಲ್ಲಿ ಆಡಿದ ಮೂರು ಪಂದ್ಯಗಳಲ್ಲಿ 31 ರನ್ ಸಿಡಿಸಿದ್ದು, ನಿರಾಸೆ ಮೂಡಿಸಿದ್ದಾರೆ.
ಸಿಡ್ನಿ ಟೆಸ್ಟ್‌ನಲ್ಲಿ ಇವರು ಮೈದಾನಕ್ಕೆ ಇಳಿಯುವುದ ಕಷ್ಟ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಪ್ರಶ್ನೆಯನ್ನು ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಗೌತಮ್ ಗಂಭೀರ್ ಅವರಿಗೆ ಕೇಳಲಾಯಿತು. ಆಗ ಅವರು ಪಿಚ್ ಮರ್ಮ್ ನೋಡಿಕೊಂಡು ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ವಿಶೇಷ ಪಟ್ಟಿ ಸೇರುತ್ತಾರಾ ರೋಹಿತ್?
ಲಯ ಕಳೆದುಕೊಂಡು ಕ್ಯಾಪ್ಟನ್ ಹಾಗೂ ತಂಡದಿಂದ ಹೊರಗುಳಿದಿರುವ ಆಟಗಾರರ ಪಟ್ಟಿಯಲ್ಲಿ ಇಂಗ್ಲೆಂಡ್ ತಂಡದ ಪ್ಲೇಯರ್ ಎದ್ದು ಕಾಣುತ್ತದೆ. ಇಂಗ್ಲೆಂಡ್ ತಂಡ 1974-75ರಲ್ಲಿ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿತ್ತು. ಆರಂಭಿಕ ಪಂದ್ಯದಲ್ಲಿ ಸೋಲು ಕಂಡಿತ್ತು. ಆಗ ತಂಡದ ಮಾಜಿ ನಾಯಕ ಮೈಕ್ ಡೆನ್ನೆಸ್ ಅವರನ್ನು ಕೈ ಬಿಡಲಾಯಿತು.
ಈ ಪಟ್ಟಿಯಲ್ಲಿ ಇನ್ನು ಹಲವು ಸ್ಟಾರ್ ಆಟಗಾರರು ಇದ್ದಾರೆ. ಈ ಪಟ್ಟಿಯಲ್ಲಿ ಎದ್ದು ಕಾಣುವ ಇನ್ನೊಂದು ಹೆಸರು ಪಾಕಿಸ್ತಾನ ತಂಡದ ಬ್ಯಾಟರ್ ಮಿಸ್ಬಾ ಉಲ್ ಹಕ್ ಹೆಸರು ಸಹ ಸೇರಿದೆ. ಉಳಿಂದತೆ ಶ್ರೀಲಂಕಾದ ದಿನೇಶ್ ಚಾಂಡಿಮಲ್, ಆಸ್ಟ್ರೇಲಿಯಾದ ಖ್ಯಾತ ನಾಯಕ ಮೈಕಲ್ ಕ್ಲಾರ್ಕ್, ನ್ಯೂಜಿಲೆಂಡ್ ತಂಡದ ಬ್ರೆಂಡನ್ ಮೆಕಲಮ್, ಇಂಗ್ಲೆಂಡ್ ತಂಡದ ಅಲೆಸ್ಟರ್ ಕುಕ್ ಸಹ ತಂಡದಿಂದ ಹೊರಗುಳಿದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications