ಸಿಪಿಎಲ್ 2020: ಕುತೂಹಲಕಾರಿ ಅಂಕಿ-ಅಂಶಗಳು, ವಿಶೇಷ ದಾಖಲೆಗಳು

ಪೋರ್ಟ್ ಆಫ್ ಸ್ಪೇನ್: ಗುರುವಾರ (ಸೆಪ್ಟೆಂಬರ್ 10) ಮುಕ್ತಾಯಗೊಂಡ ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಕೀರನ್ ಪೊಲಾರ್ಡ್ ನಾಯಕತ್ವದ ಟ್ರಿನ್‌ಬಾಗೊ ನೈಟ್ ರೈಡರ್ಸ್ ತಂಡ ಚಾಂಪಿಯನ್ಸ್ ಆಗಿ ಹೊರಹೊಮ್ಮಿದೆ. ನೈಟ್ ರೈಡರ್ಸ್‌ಗೆ ಲಭಿಸುತ್ತಿರುವ 4ನೇ ಸಿಪಿಎಲ್ ಟ್ರೋಫಿಯಿದು. ಈ ಬಾರಿy ಫೈನಲ್ ಪಂದ್ಯದಲ್ಲಿ ಡ್ಯಾರೆನ್ ಸಾಮಿ ನಾಯಕತ್ವದ ಸೇಂಟ್ ಲೂಸಿಯಾ ಝೌಕ್ಸ್ ಟಿಕೆಆರ್ ವಿರುದ್ಧ 8 ವಿಕೆಟ್ ಗೆಲುವನ್ನಾಚರಿಸಿದೆ. ಲೆಂಡ್ಲ್ ಸಿಮನ್ಸ್ ಮತ್ತು ಡ್ಯಾರೆನ್ ಬ್ರಾವೋ ಅದ್ಭುತ ಜೊತೆಯಾಟದಿಂದ ಟಿಕೆಆರ್‌ಚಾಂಪಿಯನ್ಸ್ ಆಗಿ ಮಿನುಗಿತು.
ವಿಶೇಷವೆಂದರೆ ಈ ಬಾರಿಯ ಸಿಪಿಎಲ್ ಟೂರ್ನಿಯಲ್ಲಿ ಟ್ರಿನ್‌ಬಾಗೊ ನೈಟ್ ರೈಡರ್ಸ್ ಸೋತಿದ್ದೇ ಇಲ್ಲ. ಲೀಗ್‌ನಲ್ಲಿ ಆಡಿದ ಎಲ್ಲಾ 10 ಪಂದ್ಯಗಳಲ್ಲಿ ಮತ್ತು ಪ್ಲೇ ಆಫ್‌ನಲ್ಲೂ ಟಿಕೆಆರ್ ಬಲಿಷ್ಠ ತಂಡವಾಗಿ ಹೊರಹೊಮ್ಮಿದೆ.
2020ರ ಸಿಪಿಎಲ್ ಅಪರೂಪದ ಅಂಕಿ-ಅಂಶಗಳಿಗೆ, ದಾಖಲೆಗಳಿಗೂ ಕಾರಣವಾಗಿದೆ. ಸಿಪಿಎಲ್‌ನ ಕುತೂಹಲಕಾರಿ ಅಂಕಿ-ಅಂಶಗಳು ಇಲ್ಲಿವೆ.

ಟೂರ್ನಿಯಲ್ಲಿ ಅತ್ಯಧಿಕ ರನ್
ಲೆಂಡ್ಲ್ ಸಿಮನ್ಸ್ (11 ಇನ್ನಿಂಗ್ಸ್, 356 ರನ್), ಗ್ಲೆನ್ ಫಿಲಿಪ್ (10 ಇನ್ನಿಂಗ್ಸ್, 316 ರನ್), ಡ್ಯಾರೆನ್ ಬ್ರಾವೋ (9 ಇನ್ನಿಂಗ್ಸ್, 297 ರನ್), ಶಿಮ್ರನ್ ಹೆಟ್ಮೈಯರ್ (11 ಇನ್ನಿಂಗ್ಸ್, 267 ರನ್), ನಿಕೋಲಸ್ ಪೂರನ್ (11 ಇನ್ನಿಂಗ್ಸ್, 245 ರನ್).

ಅತ್ಯಧಿಕ ವಿಕೆಟ್ ಸರದಾರರು
ಸ್ಕಾಟ್ ಕುಗ್ಗೆಲೀಜ್ನ್ (11 ಇನ್ನಿಂಗ್ಸ್, 17 ವಿಕೆಟ್), ಮುಜೀಬ್ ಉರ್ ರಹ್ಮಾನ್ (11 ಇನ್ನಿಂಗ್ಸ್, 16 ವಿಕೆಟ್), ಇಮ್ರಾನ್ ತಾಹಿರ್ (11 ಇನ್ನಿಂಗ್ಸ್, 15 ವಿಕೆಟ್), ಫವಾದ್ ಅಹ್ಮದ್ (11 ಇನ್ನಿಂಗ್ಸ್, 13 ವಿಕೆಟ್), ಕೆಸ್ರಿಕ್ ವಿಲಿಯಮ್ಸ್ (12 ಇನ್ನಿಂಗ್ಸ್, 13 ವಿಕೆಟ್).

ಅತ್ಯಧಿಕ ವೈಯಕ್ತಿಕ ರನ್
ನಿಕೋಲಸ್ ಪೂರನ್ (45 ಎಸೆತ, 100 ರನ್), ಲೆಂಡ್ಲ್ ಸಿಮನ್ಸ್ (63 ಎಸೆತ, 96 ರನ್), ಎವಿನ್ ಲೆವಿಸ್ (60 ಎಸೆತ, 89 ರನ್), ಕೈಲೆ ಮೇಯರ್ಸ್ (59 ಎಸೆತ, 85 ರನ್), ಲೆಂಡ್ಲ್ ಸಿಮನ್ಸ್ (49 ಎಸೆತ, 84 ರನ್).

ಬೆಸ್ಟ್ ಬೌಲಿಂಗ್ ಫಿಗರ್
ಮೊಹಮ್ಮದ್ ನಬಿ (4 ಓವರ್, 15 ರನ್, 5 ವಿಕೆಟ್), ನವೀನ್ ಉಲ್ ಹಕ್ (4 ಓವರ್, 14 ರನ್, 4 ವಿಕೆಟ್), ಕೀಮೋ ಪೌಲ್ (4 ಓವರ್, 19 ರನ್, 4 ವಿಕೆಟ್), ಫವಾದ್ ಅಹ್ಮದ್ (4 ಓವರ್, 21 ರನ್, 4 ವಿಕೆಟ್), ಕೀರನ್ ಪೊಲಾರ್ಡ್ (4 ಓವರ್, 30 ರನ್, 4 ವಿಕೆಟ್).

ಅತ್ಯಧಿಕ ಸಿಕ್ಸ್ ದಾಖಲೆ
ಲೆಂಡ್ಲೆ ಸಿಮನ್ಸ್ (11 ಇನ್ನಿಂಗ್ಸ್, 20 ಸಿಕ್ಸರ್), ಡ್ಯಾರೆನ್ ಬ್ರಾವೋ (9 ಇನ್ನಿಂಗ್ಸ್, 20 ಸಿಕ್ಸರ್), ಕೀರನ್ ಪೊಲಾರ್ಡ್ (7 ಇನ್ನಿಂಗ್ಸ್, 20 ಸಿಕ್ಸರ್), ಗ್ಲೆನ್ ಫಿಲಿಪ್ಸ್ (10 ಇನ್ನಿಂಗ್ಸ್, 18 ಸಿಕ್ಸರ್), ಎವಿನ್ ಲೆವಿಸ್ (10 ಇನ್ನಿಂಗ್ಸ್, 18 ಸಿಕ್ಸರ್).
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications