Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಯುಕೆ ವಿಮಾನದಲ್ಲಿ ಕೋವಿಡ್-19 ಪ್ರಕರಣ, ಕಾರ್ಲೋಸ್ ಬ್ರಾಥ್‌ವೇಟ್‌ ಐಸೊಲೇಶನ್

Carlos Brathwaite isolating after Covid positive case found on flight from United Kingdom

ಪೋರ್ಟ್ ಆಫ್‌ ಸ್ಪೇನ್: ಕೆರಿಬಿಯನ್ ಪ್ರೀಮಿಯರ್ ಲೀಗ್‌ (ಸಿಪಿಎಲ್‌)ನಲ್ಲಿ ವೆಸ್ಟ್‌ ಇಂಡೀಸ್ ಆಲ್ ರೌಂಡರ್ ಕಾರ್ಲೋಸ್ ಬ್ರಾಥ್‌ವೇಟ್ ಜಮೈಕಾ ತಲೈವಾಸ್ ಪರ ಆರಂಭಿಕ ಪಂದ್ಯದಲ್ಲಿ ಆಡೋದು ಅನುಮಾನವಾಗಿದೆ. ಯುನೈಟೆಡ್ ಕಿಂಗ್ಡಮ್‌ನಿಂದ ವಾಪಸ್ಸಾಗುವಾಗ ವಿಮಾನದಲ್ಲಿ ಕೋವಿಡ್-19 ಪ್ರಕರಣ ಪತ್ತೆಯಾಗಿದ್ದರಿಂದ ಮುನ್ನೆಚ್ಚರಿಕೆಯಾಗಿ ಬ್ರಾಥ್‌ವೇಟ್ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ.

ಇಂಗ್ಲೆಂಡ್‌ ಕ್ರಿಕೆಟ್ ಬೋರ್ಡ್‌ನ ಉದ್ಘಾಟನಾ ಆವೃತ್ತಿ ದ ಹಂಡ್ರೆಡ್‌ನಲ್ಲಿ ಮ್ಯಾನ್ಚೆಸ್ಟರ್ ಒರಿಜಿನಲ್ಸ್ ತಂಡವನ್ನು ಮುನ್ನಡೆಸಿದ್ದ ಬಳಿಕ ಕಾರ್ಲೋಸ್ ಬ್ರಾಥ್‌ವೇಟ್ ಅವರು ಮ್ಯಾನ್ಚೆಸ್ಟರ್‌ನಿಂದ ಬಾಸೆಟೆರೆಗೆ ಪ್ರಯಾಣಿಸಿದ್ದರು. ಆ ವೇಳೆ ಇವರ ಜೊತೆ ಪ್ರಯಾಣಿಸಿದ್ದ ಸಹ ಪ್ರಯಾಣಿಕನಿಗೆ ಕೋವಿಡ್ ಸೋಂಕು ತಗುಲಿದ್ದು ಪತ್ತೆಯಾಗಿತ್ತು. ಹೀಗಾಗಿ ಬ್ರಾಥ್‌ವೇಟ್ ಕೂಡ ಈ ಐಸೊಲೇಶನ್ ಪಾಲಿಸುವ ಅನಿವಾರ್ಯತೆ ಬಂದಿದೆ.

"ನನ್ನ ಕೋವಿಡ್ ಪರೀಕ್ಷೆಯ ಫಲಿತಾಂಶ ನೆಗೆಟಿವ್ ಬಂದಿದೆ. ಆದರೂ ಕ್ವಾರಂಟೈನ್ ಪಾಲಿಸಲು ನಮಗೆ ಸೂಚಿಸಿದ್ದಾರೆ. ನನಗೆ ಇದರ ಬಗ್ಗೆ ಹೆಚ್ಚಿನ ಮಾಹಿತಿಯಿಲ್ಲ. ಒಟ್ಟಿನಲ್ಲಿ ನನ್ನನ್ನು ಕ್ವಾರಂಟೈನ್‌ಗೆ ಹಾಕಲಾಗಿದೆ. ಆರಂಭದಲ್ಲಿ ಹೋಟೆಲ್‌ನಲ್ಲಿ ಓಡಾಡಲು ನನಗೆ ವಿರೋಧ ವ್ಯಕ್ತವಾಗಿತ್ತಾದರೂ ಬಳಿಕ ಅನುಮತಿ ನೀಡಲಾಗಿದೆ. ಹೀಗಾಗಿ ನಾನು ದುರದೃಷ್ಟಕರವಾಗಿ ಕತ್ತಲೆಯಲ್ಲಿದ್ದೇನೆ," ಎಂದು ಬ್ರಾಥ್‌ವೇಟ್ ಇಎಸ್‌ಪಿಎನ್‌ ಕ್ರಿಕ್‌ ಇನ್ಫೋ ಜೊತೆ ಹೇಳಿದ್ದಾರೆ.

ಕಳೆದ ಸೀಸನ್‌ನಲ್ಲಿ ಸೆಮಿ ಫೈನಲ್‌ನಲ್ಲಿ ಹೊರ ಬಿದ್ದಿದ್ದ ಜಮೈಕಾ ತಲೈವಾಸ್ ತಂಡದಲ್ಲಿ ಬ್ರಾಥ್‌ವೇಟ್ ಅವರನ್ನು ಉಳಿಸಿಕೊಳ್ಳಲಾಗಿದೆ. ಇವರ ಜೊತೆ ಆಲ್ ರೌಂಡರ್ ಆ್ಯಂಡ್ರೆ ರಸೆಲ್ ಅವರನ್ನೂ ತಲೈವಾಸ್ ಈ ಸೀಸನ್‌ಗೆ ಉಳಿಸಿಕೊಂಡಿತ್ತು. ಆರು ತಂಡಗಳ ಕೆರಿಬಿಯನ್ ಪ್ರೀಮಿಯರ್ ಲೀಗ್‌ ಟೂರ್ನಿ ಆಗಸ್ಟ್ 28ರಿಂದ ಶುರುವಾಗಲಿದೆ.

Story first published: Tuesday, August 24, 2021, 19:25 [IST]
Other articles published on Aug 24, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+