Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2024: ವಿನ್ನರ್, ರನ್ನರ್-ಅಪ್‌, ಆರೆಂಜ್, ಪರ್ಪಲ್ ಕ್ಯಾಪ್ ಹೋಲ್ಡರ್ಸ್‌ಗೆ ಸಿಗುವ ನಗದು ಬಹುಮಾನವೆಷ್ಟು?

ಮೇ 26 ಭಾನುವಾರ, ಸತತ ಎರಡು ತಿಂಗಳಿಗೂ ಹೆಚ್ಚು ದಿನಗಳು ಭಾರತದಲ್ಲಿ ನಡೆದ 2024ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌)ಗೆ ಇಂದು ತೆರೆ ಬೀಳಲಿದೆ. ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್‌) ಮತ್ತು ಸನ್‌ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಹೆಚ್) ನಡುವೆ ಐಪಿಎಲ್ 2024ರ ಫೈನಲ್‌ ಪಂದ್ಯ ನಡೆಯಲಿದೆ.‌

ಉಭಯ ತಂಡಗಳು ಕೇವಲ ಐಪಿಎಲ್ ಟ್ರೋಫಿಗಾಗಿ ಮಾತ್ರ ಹೋರಾಡುತ್ತಿಲ್ಲ, ನಗದು ಬಹುಮಾನದ ಮೇಲೂ ಕಣ್ಣಿಟ್ಟಿವೆ. ಐಪಿಎಲ್ ವಿಶ್ವದಲ್ಲೇ ಅತ್ಯಂತ ಶ್ರೀಮಂತ ಫ್ರಾಂಚೈಸಿ ಕ್ರಿಕೆಟ್ ಲೀಗ್‌ ಆಗಿದ್ದು, ಗೆದ್ದ ತಂಡಕ್ಕೆ ಭಾರೀ ನಗದು ಬಹುಮಾನ ನೀಡಲಾಗುತ್ತದೆ.

Cash Prize for Winner Runner-Up Orange Purple Cap Holders in IPL Final 2024

ಆದರೆ ಐಪಿಎಲ್ 2024 ವಿಜೇತರಿಗೆ ನೀಡುವ ನಗದು ಬಹುಮಾನ ಎಷ್ಟು ಎಂದು ಬಿಸಿಸಿಐ ಅಧಿಕೃತವಾಗಿ ಮಾಹಿತಿ ನೀಡಿಲ್ಲ. ಫೈನಲ್‌ನಲ್ಲಿ ವಿಜೇತ ತಂಡವು ಕನಿಷ್ಠ 20 ಕೋಟಿ ರೂ. ಪಡೆಯಲಿದೆ. ರನ್ನರ್‌-ಆಪ್‌ ತಂಡಕ್ಕೆ 13 ಕೋಟಿ ರೂ. ಸಿಗಲಿದೆ.

3ನೇ ಸ್ಥಾನದಲ್ಲಿರುವ ತಂಡಕ್ಕೆ 7 ಕೋಟಿ ರೂ. ಹಾಗು 4ನೇ ಸ್ಥಾನದ ತಂಡಕ್ಕೆ 6.5 ಕೋಟಿ ರೂ. ಸಿಗಲಿದೆ. ಹೀಗಾಗಿ ರಾಜಸ್ಥಾನ್‌ ರಾಯಲ್ಸ್‌ ​ತಂಡಕ್ಕೆ (7 ಕೋಟಿ ರೂ.) ಮತ್ತು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರಿಗೆ (6.5 ಕೋಟಿ) ಮೊತ್ತ ಸಿಗಲಿದೆ. ಒಟ್ಟು ಬಹುಮಾನ ಮೊತ್ತ 46.5 ಕೋಟಿ ರೂ. ಆಗಿದೆ.

ಟೂರ್ನಿಯಲ್ಲಿ ಅತ್ಯಧಿಕ ರನ್‌ ಹೊಡೆದಿರುವ ಆಟಗಾರಿನಿಗೆ ಆರೆಂಜ್ ಕ್ಯಾಪ್ ನೀಡಲಾಗುತ್ತದೆ. ಅತಿ ಹೆಚ್ಚು ವಿಕೆಟ್‌ಗಳನ್ನು ಪಡೆದಿರುವ ಆಟಗಾರನಿಗೆ ಪರ್ಪಲ್ ಕ್ಯಾಪ್ ನೀಡಲಾಗುತ್ತದೆ. ಇದೀಗ ಟೂರ್ನಿ ಅಂತಿಮದಲ್ಲಿ ಆರೆಂಜ್ ಕ್ಯಾಪ್ ಮತ್ತು ಪರ್ಪಲ್ ಕ್ಯಾಪ್ ವಿಜೇತರಿಗೆ ತಲಾ 15 ಲಕ್ಷ ರೂ. ಸಿಗಲಿದೆ.

ಸದ್ಯ ಆರ್‌ಸಿಬಿ ಸ್ಟಾರ್‌ ಬ್ಯಾಟರ್‌ ವಿರಾಟ್‌ ಕೊಹ್ಲಿ (741 ರನ್‌) ಆರೆಂಜ್‌ ಕ್ಯಾಪ್‌ ಹೊಂದಿದ್ದು, ಪರ್ಪಲ್‌ ಕ್ಯಾಪ್ ಅನ್ನು‌ ಪಂಜಾಬ್‌ ಕಿಂಗ್ಸ್‌ ಬೌಲರ್‌ ಹರ್ಷಲ್‌ ಪಟೇಲ್ (24 ವಿಕೆಟ್‌)‌ ಬಳಿ ಇದೆ. ಈ ಇಬ್ಬರು ಆಟಗಾರರು ಬಹುತೇಕ ತಲಾ 15 ಲಕ್ಷ ರೂ ಪಡೆಯುವ ನಿರೀಕ್ಷೆಯಲ್ಲಿದ್ದಾರೆ.

ಇದರ ಜೊತೆಗೆ ಉದಯೋನ್ಮುಖ ಆಟಗಾರನು 20 ಲಕ್ಷ ರೂಪಾಯಿ ನಗದು ಬಹುಮಾನ ಸಿಗಲಿದೆ. ಅತ್ಯಂತ ಮೌಲ್ಯಯುತ ಆಟಗಾರಿನಿಗೆ 12 ಲಕ್ಷ ರೂ, ಇತರ ಪ್ರಶಸ್ತಿಗಳಾದ ಪವರ್ ಪ್ಲೇಯರ್ ಆಫ್ ದಿ ಸೀಸನ್, ಸೂಪರ್ ಸ್ಟ್ರೈಕರ್ ಆಫ್ ದಿ ಸೀಸನ್ ಮತ್ತು ಗೇಮ್ ಚೇಂಜರ್ ಆಫ್ ದಿ ಸೀಸನ್ ಪಡೆದ ಆಟಗಾರಿಗೂ ಕ್ರಮವಾಗಿ 15 ಲಕ್ಷ ಮತ್ತು 12 ಲಕ್ಷ ರೂ. ಬಹುಮಾನ ಮೊತ್ತ ನೀಡಲಾಗುವುದು.

ಐಪಿಎಲ್ 2024 ರ ಪ್ರತಿ ಪಂದ್ಯದ ನಂತರ, ಪಂದ್ಯದ ಆಟಗಾರನ ಹೊರತಾಗಿ ಆರು ಆಡ್-ಆನ್ ಪ್ರಶಸ್ತಿಗಳನ್ನು ನೀಡಲಾಗುತ್ತದೆ, ಪ್ರತಿಯೊಂದಕ್ಕೂ ರೂ 1 ಲಕ್ಷ ನಗದು ಬಹುಮಾನ ಬರಲಿದೆ.

ಐಪಿಎಲ್ ನಗದು ಬಹುಮಾನದ ಪಟ್ಟಿ:

  • ವಿಜೇತರು: 20 ಕೋಟಿ ರೂ.
  • ರನ್ನರ್ಸ್ ಅಪ್: 13 ರೂ ಕೋಟಿ ರೂ.
  • 3ನೇ ಸ್ಥಾನ ಪಡೆದ ತಂಡ: 7 ಕೋಟಿ ರೂ.
  • 4ನೇ ಸ್ಥಾನ ಪಡೆದ ತಂಡ: ರೂ 6.5 ಕೋಟಿ ರೂ.
  • ಪಂದ್ಯಾವಳಿಯ ಉದಯೋನ್ಮುಖ ಆಟಗಾರ: 20 ಲಕ್ಷ ರೂ.
  • ಆರೆಂಜ್ ಕ್ಯಾಪ್: ರೂ 15 ಲಕ್ಷ ರೂ.
  • ಪರ್ಪಲ್ ಕ್ಯಾಪ್: ರೂ 15 ಲಕ್ಷ ರೂ.
  • ಅತ್ಯಮೂಲ್ಯ ಆಟಗಾರ: 12 ಲಕ್ಷ ರೂ.
  • ಪವರ್ ಪ್ಲೇಯರ್: ರೂ 15 ಲಕ್ಷ ರೂ.
  • ಸೂಪರ್ ಸ್ಟ್ರೈಕರ್ ಆಫ್ ದಿ ಸೀಸನ್: 15 ಲಕ್ಷ ರೂ.
  • ಗೇಮ್ ಚೇಂಜರ್ ಆಫ್ ದಿ ಸೀ ಸನ್: 12 ಲಕ್ಷ ರೂ.

Story first published: Sunday, May 26, 2024, 16:54 [IST]
Other articles published on May 26, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+