Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

CCL 2023: ಕರ್ನಾಟಕ ಬುಲ್ಡೋಜರ್ಸ್‌ಗೆ ಪಂಜಾಬ್ ದಿ ಶೇರ್ ಸವಾಲು: ನೇರಪ್ರಸಾರ, ಸಮಯ, ಪ್ಲೇಯಿಂಗ್ XI ವಿವರ

CCL 2023: The Unbeaten Karnataka Bulldozers Will Face The Punjab De Sher On Saturday, Playing XI, Match Timings

ಶನಿವಾರ ನಡೆಯಲಿರುವ ಸೆಲಿಬ್ರಿಟಿ ಕ್ರಿಕೆಟ್‌ ಲೀಗ್‌ 2023ರ ಪಂದ್ಯದಲ್ಲಿ ಅಜೇಯ ಕರ್ನಾಟಕ ಬುಲ್ಡೋಜರ್ಸ್ ತಂಡಕ್ಕೆ ಪಂಜಾಬ್ ದಿ ಶೇರ್ ಸವಾಲಾಕಲಿದೆ. ಆಡಿರುವ ಮೂರು ಪಂದ್ಯಗಳನ್ನು ಗೆದ್ದಿರುವ ಕರ್ನಾಟಕ ಅಜೇಯ ಓಟವನ್ನು ಮುಂದುವರೆಸುವ ವಿಶ್ವಾಸದಲ್ಲಿದೆ.

ಪ್ರದೀಪ್ ಬೋಗಾದಿ ನಾಯಕತ್ವದಲ್ಲಿ ಕರ್ನಾಟಕ ಬುಲ್ಡೋಜರ್ಸ್ ತಂಡ ಈ ಬಾರಿ ಅತ್ಯುತ್ತಮ ಪ್ರದರ್ಶನ ನೀಡುತ್ತಿದೆ. ಕೊನೆಯ ಪಂದ್ಯದಲ್ಲಿ ಅವರು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಬಲಿಷ್ಠ ಚೆನ್ನೈ ರೈನೋಸ್ ವಿರುದ್ಧ 6 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತ್ತು.

ಮತ್ತೊಂದೆಡೆ ಪಂಜಾಬ್ ದಿ ಶೇರ್ ಮೊದಲ ಎರಡು ಪಂದ್ಯಗಳಲ್ಲಿ ಸೋತ ಬಳಿಕ ಕಳೆದ ಶನಿವಾರ ಬಲಿಷ್ಠ ತೆಲುಗು ವಾರಿಯರ್ಸ್ ವಿರುದ್ಧ 6 ವಿಕೆಟ್‌ಗಳ ಜಯ ಸಾಧಿಸಿದ್ದು ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಸೋನು ಸೂದ್ ತಂಡದ ನಾಯಕತ್ವ ವಹಿಸಿಕೊಂಡಿದ್ದಾರೆ.

ಉಭಯ ತಂಡಗಳಿಗೂ ಇದು ಕೊನೆಯ ಲೀಗ್ ಹಂತದ ಪಂದ್ಯವಾಗಿದೆ ಕರ್ನಾಟಕ ಬುಲ್ಡೋಜರ್ಸ್ ಈಗಾಗಲೇ 6 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದ್ದು, ಬಹುತೇಕ ಸೆಮಿಫೈನಲ್ ಸ್ಥಾನವನ್ನು ಖಚಿತಪಡಿಸಿಕೊಂಡಿದೆ. ಪಂಜಾಬ್ ದಿ ಶೇರ್ ಕರ್ನಾಟಕ ವಿರುದ್ಧ ಗೆದ್ದರೂ ಸೆಮಿಫೈನಲ್ ಪ್ರವೇಶಿಸುವುದು ಅಸಾಧ್ಯವಾಗಿದೆ.

ಕರ್ನಾಟಕ ಬುಲ್ಡೋಜರ್ಸ್ ನೆಚ್ಚಿನ ತಂಡ

ಕರ್ನಾಟಕ ಬುಲ್ಡೋಜರ್ಸ್ ನೆಚ್ಚಿನ ತಂಡ

ಕರ್ನಾಟಕ ಬುಲ್ಡೋಜರ್ಸ್ ಮತ್ತು ಪಂಜಾಬ್ ದಿ ಶೇರ್ ನಡುವಿನ ಪಂದ್ಯ ರಾಜಸ್ಥಾನದ ಜೋಧ್‌ಪುರದಲ್ಲಿ ನಡೆಯಲಿದೆ. ಬ್ಯಾಟಿಂಗ್ ಪಿಚ್ ಆಗಿರುವುದರಿಂದ ಮತ್ತೊಂದು ಹೈಸ್ಕೋರ್ ಪಂದ್ಯವನ್ನು ನಿರೀಕ್ಷೆ ಮಾಡಬಹುದಾಗಿದೆ. ಕಳೆದ ಪಂದ್ಯದಲ್ಲಿ ತೆಲುಗು ವಾರಿಯರ್ಸ್ ಅನ್ನು ಮಣಿಸಿರುವ ಪಂಜಾಬ್ ತಂಡ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಂಡಿದೆ. ಕರ್ನಾಟಕ ವಿರುದ್ಧ ಉತ್ತಮ ಪ್ರದರ್ಶನ ನೀಡುವ ವಿಶ್ವಾಸದಲ್ಲಿದೆ.

ಅರುಣ್ ಬಚ್ಚನ್, ರಾಜೀವ್, ಜಯರಾಮ್ ಕಾರ್ತಿಕ್, ಡಾರ್ಲಿಂಗ್ ಕೃಷ್ಣ ತಂಡದ ಪ್ರಮುಖ ಬ್ಯಾಟಿಂಗ್ ಶಕ್ತಿಯಾಗಿದ್ದಾರೆ. ಚೆನ್ನೈ ವಿರುದ್ಧದ ಪಂದ್ಯದಲ್ಲಿ ಬಚ್ಚನ್ 18 ಎಸೆತಗಳಲ್ಲಿ ಅರ್ಧಶತಕ ಸಿಡಿಸುವ ಮೂಲಕ ಕರ್ನಾಟಕ ತಂಡದ ಗೆಲುವಿಗೆ ಕಾರಣವಾಗಿದ್ದರು, ಇದೇ ಪ್ರದರ್ಶನವನ್ನು ಮುಂದುವರೆಸುವ ವಿಶ್ವಾಸದಲ್ಲಿದ್ದಾರೆ. ತಂಡದಲ್ಲಿ ಸುದೀಪ್ ಇರುವುದು ಆತ್ಮವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸುತ್ತದೆ.

ಪಂದ್ಯದ ವಿವರ

ಪಂದ್ಯದ ವಿವರ

ಶನಿವಾರ ಸಂಜೆ 7 ಗಂಟೆಗೆ ಪಂದ್ಯ ಆರಂಭವಾಗಲಿದೆ. ಜೋಧ್‌ಪುರದ ಬರ್ಖಾತುಲ್ಲಖಾನ್ ಸ್ಟೇಡಿಯಂನಲ್ಲಿ ಪಂದ್ಯ ನಡೆಯಲಿದೆ. ಒಟ್ಟು 4 ಇನ್ನಿಂಗ್ಸ್‌ಗಳಲ್ಲಿ ಪಂದ್ಯವನ್ನು ಆಡಲಾಗುತ್ತದೆ. ಪ್ರತಿ ಇನ್ನಿಂಗ್ಸ್‌ನಲ್ಲಿ 10 ಓವರ್ ಗಳು ಇರುತ್ತವೆ.

ಸಿಸಿಎಲ್ ಪಂದ್ಯಗಳನ್ನು ಯೂಟ್ಯೂಬ್‌ನಲ್ಲಿ ಉಚಿತವಾಗಿ ವೀಕ್ಷಿಸಬಹುದಾಗಿದೆ, ಜೀ5 ಆಪ್‌ನಲ್ಲಿ ಕೂಡ ಪಂದ್ಯಾವಳಿಯ ನೇರಪ್ರಸಾರವನ್ನು ವೀಕ್ಷಣೆ ಮಾಡಬಹುದುರ. ಜೀ ಪಿಚ್ಚರ್ ಚಾನೆಲ್‌ನಲ್ಲಿ ಟಿವಿಯಲ್ಲಿ ಪಂದ್ಯವನ್ನು ವೀಕ್ಷಿಸಬಹುದಾಗಿದೆ.

ಎರಡೂ ತಂಡಗಳ ಸಂಭಾವ್ಯ ಪ್ಲೇಯಿಂಗ್ XI

ಎರಡೂ ತಂಡಗಳ ಸಂಭಾವ್ಯ ಪ್ಲೇಯಿಂಗ್ XI

ಕರ್ನಾಟಕ ಬುಲ್ಡೋಜರ್ಸ್ : ಕೃಷ್ಣ, ಪ್ರದೀಪ್ ಬೋಗಾದಿ (ನಾಯಕ), ರಾಜೀವ್ ಹನು, ಕಿಚ್ಚ ಸುದೀಪ್ (ವಿಕೆಟ್ ಕೀಪರ್), ಗಣೇಶ್, ಸುನೀಲ್ ರಾವ್, ಜಯರಾಮ್ ಕಾರ್ತಿಕ್, ಕರಣ್ ಅರ್ಯಾನ್, ಅರ್ಜುನ್ ಯೋಗಿ, ಪೆಟ್ರೋಲ್ ಪ್ರಸನ್ನ, ಅರುಣ್ ಬಚ್ಚನ್.

ಪಂಜಾಬ್ ದಿ ಶೇರ್: ದೇವ್ ಖರೋಡ್, ಬಿನ್ನು ಧಿಲ್ಲೋನ್ (ನಾಯಕ), ಬಬ್ಬಲ್ ರಾಯ್, ಮಯೂರ್ ಮೆಹ್ತಾ, ನವರಾಜ್ ಹನ್ಸ್, ಅಮಿತ್ ಭಲ್ಲಾ, ರಾಹುಲ್ ಜೇಟ್ಲಿ, ಬಲರಾಜ್ ಸಿಯಾಲ್, ಅನುಜ್ ಖುರಾನಾ (ವಿಕೆಟ್ ಕೀಪರ್), ಸುಯ್ಯಾಂಶ್ ರಾಯ್, ದಕ್ಷ್ ಅಜಿತ್.

Story first published: Friday, March 10, 2023, 8:04 [IST]
Other articles published on Mar 10, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+