Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

CCL 2024: ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಪ್ಲೇಆಫ್ ಪಂದ್ಯಗಳ ವಿವರ; ಕರ್ನಾಟಕ ಬುಲ್ಡೋಜರ್ ಪಂದ್ಯ ಯಾವಾಗ?

2024ರ ಸೆಲೆಬ್ರಿಟಿ ಕ್ರಿಕೆಟ್ ಲೀಗ್ (CCL 2024) ಅಂತಿಮ ಘಟ್ಟವನ್ನು ತಲುಪಿದ್ದು, ಒಟ್ಟು 8 ತಂಡಗಳ ಪಂದ್ಯಾವಳಿಯು ನಾಲ್ಕು ತಂಡಗಳಿಗೆ ಸಂಕುಚಿತಗೊಂಡಿದೆ. ಇನ್ನು ಫೈನಲ್ ಸೇರಿ ಉಳಿದಿರುವುದು ನಾಲ್ಕು ಪಂದ್ಯಗಳು ಮಾತ್ರ.

ಹಾಲಿ ಚಾಂಪಿಯನ್ ತೆಲುಗು ವಾರಿಯರ್ಸ್ ಸೇರಿದಂತೆ ನಾಲ್ಕು ತಂಡಗಳು ಬೇಗನೇ ಟೂರ್ನಿಯಿಂದ ಹೊರಬಿದ್ದಿದ್ದು, ಕರ್ನಾಟಕ ಬುಲ್ಡೋಜರ್ಸ್, ಬೆಂಗಾಲ್ ಟೈಗರ್ಸ್, ಮುಂಬೈ ಹೀರೋಸ್ ಮತ್ತು ಚೆನ್ನೈ ರೈನೋಸ್ ತಂಡಗಳು ಸಿಸಿಎಲ್ 10ನೇ ಆವೃತ್ತಿಯ ಪ್ಲೇಆಫ್‌ನಲ್ಲಿ ಪೈಪೋಟಿ ನಡೆಸಲಿವೆ.

ಹಾಲಿ ಚಾಂಪಿಯನ್ ತೆಲುಗು ವಾರಿಯರ್ಸ್ ತಂಡವು ಕರ್ನಾಟಕ ಬುಲ್ಡೋಜರ್ಸ್ ವಿರುದ್ಧ ಗೆದ್ದರೂ, ಕಡಿಮೆ ನೆಟ್ ರನ್ ರೇಟ್‌ನೊಂದಿಗೆ ಪ್ಲೇಆಫ್ ಸ್ಥಾನವನ್ನು ಕಳೆದುಕೊಂಡಿತು.

CCL 2024 Celebrity Cricket League Playoffs Matches Details When is the Karnataka Bulldozer match

2024ರ ಸೆಲೆಬ್ರಿಟಿ ಕ್ರಿಕೆಟ್ ಲೀಗ್ (ಸಿಸಿಎಲ್) ಪ್ಲೇಆಫ್ ಪಂದ್ಯಗಳ ಲೈವ್ ಸ್ಟ್ರೀಮಿಂಗ್ ಜಿಯೋ ಸಿನಿಮಾದಲ್ಲಿ ಪ್ರಸಾರಗೊಳ್ಳಲಿದೆ.

ಹಿಂದಿನ ಆವೃತ್ತಿಗಳಿಗಿಂತ ಭಿನ್ನವಾಗಿ, ಸಾಂಪ್ರದಾಯಿಕ ಸೆಮಿಫೈನಲ್‌ಗಳು ಮತ್ತು ಫೈನಲ್‌ಗಳನ್ನು ಒಳಗೊಂಡಂತೆ, ಸಿಸಿಎಲ್ 10ನೇ ಆವೃತ್ತಿಯು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಂತಹ ಟಿ20 ಲೀಗ್‌ಗಳಲ್ಲಿ ಕಂಡುಬರುವ ಪ್ಲೇಆಫ್ ಮಾದರಿಯನ್ನು ಅಳವಡಿಸಿಕೊಳ್ಳುತ್ತದೆ.

ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಅಗ್ರ ಶ್ರೇಯಾಂಕದ ಕರ್ನಾಟಕ ಬುಲ್ಡೋಜರ್ಸ್ ತಂಡವು ಎರಡನೇ ಶ್ರೇಯಾಂಕದ ಬೆಂಗಾಲ್ ಟೈಗರ್ಸ್ ತಂಡದ ವಿರುದ್ಧ ಸೆಣಸಲಿದೆ.

ಕ್ವಾಲಿಫೈಯರ್ 1 ಪಂದ್ಯದಲ್ಲಿ ಸೋತ ತಂಡವು ಕ್ವಾಲಿಫೈಯರ್ 2ರ ಮೂಲಕ ಫೈನಲ್ ತಲುಪಲು ಮತ್ತೊಂದು ಅವಕಾಶ ಸಿಗಲಿದೆ.

ಕ್ವಾಲಿಫೈಯರ್ 2 ಪಂದ್ಯವು ಎಲಿಮಿನೇಟರ್ ವಿಜೇತರನ್ನು ಒಳಗೊಂಡಿರುತ್ತದೆ. ಇದು ಮೂರನೇ ಸ್ಥಾನದಲ್ಲಿರುವ ಚೆನ್ನೈ ರೈನೋಸ್ ಮತ್ತು ನಾಲ್ಕನೇ ಸ್ಥಾನದಲ್ಲಿರುವ ಮುಂಬೈ ಹೀರೋಸ್ ನಡುವೆ ನಡೆಯಲಿದೆ.

CCL 2024 Celebrity Cricket League Playoffs Matches Details When is the Karnataka Bulldozer match

ಸಿಸಿಎಲ್ 2024ರ ಪ್ಲೇಆಫ್ಸ್ ವೇಳಾಪಟ್ಟಿ

ಕ್ವಾಲಿಫೈಯರ್ 1: ಕರ್ನಾಟಕ ಬುಲ್ಡೋಜರ್ಸ್ vs ಬೆಂಗಾಲ್ ಟೈಗರ್ಸ್ - ಮಾರ್ಚ್ 15ರಂದು ಭಾರತೀಯ ಕಾಲಮಾನ ಮಧ್ಯಾಹ್ನ 2 ಗಂಟೆಗೆ, ಗ್ರೀನ್‌ಫೀಲ್ಡ್ ಅಂತಾರಾಷ್ಟ್ರೀಯ ಸ್ಟೇಡಿಯಂ, ತಿರುವನಂತಪುರಂ.

ಎಲಿಮಿನೇಟರ್: ಚೆನ್ನೈ ರೈನೋಸ್ vs ಮುಂಬೈ ಹೀರೋಸ್ - ಮಾರ್ಚ್ 15ರಂದು ಭಾರತೀಯ ಕಾಲಮಾನ ಸಂಜೆ 6:30, ಗ್ರೀನ್‌ಫೀಲ್ಡ್ ಅಂತಾರಾಷ್ಟ್ರೀಯ ಸ್ಟೇಡಿಯಂ, ತಿರುವನಂತಪುರಂ.

ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಪ್ಲೇಆಫ್ಸ್ ಲೈವ್ ಸ್ಟ್ರೀಮಿಂಗ್ ಮತ್ತು ಟೆಲಿಕಾಸ್ಟ್ ವಿವರಗಳು:

ಸಿಸಿಎಲ್ 2024ರ ಪ್ಲೇಆಫ್ಸ್ ಪಂದ್ಯಗಳು Sony Sports TEN 5, ಸುವರ್ಣ ಪ್ಲಸ್ (ಕರ್ನಾಟಕ ಬುಲ್ಡೋಜರ್ಸ್ ಪಂದ್ಯಗಳು) ನಲ್ಲಿ ಪ್ರಸಾರ ಮಾಡಲಾಗುತ್ತದೆ. ವಿಜಯ್ ಸೂಪರ್ ಪ್ಲಸ್ (ಚೆನ್ನೈ ರೈನೋಸ್ ಪಂದ್ಯಗಳು) ಮತ್ತು ಡಿಡಿ ಸ್ಪೋರ್ಟ್ಸ್ (ಹಿಂದಿ), JioCinema ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿ ಉಚಿತ ಲೈವ್ ಸ್ಟ್ರೀಮಿಂಗ್ ಮಾಡಲಾಗುತ್ತದೆ.

Story first published: Thursday, March 14, 2024, 21:54 [IST]
Other articles published on Mar 14, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+