CCL 2025: ಗೆಲ್ಲುವ ಪಂದ್ಯವನ್ನು ಸೋತ ಕರ್ನಾಟಕ: ಪಂಜಾಬ್‌ಗೆ ರೋಚಕ ಜಯ
ಕರ್ನಾಟಕ ಬುಲ್ಡೋಜರ್ಸ್ ಅಜೇಯ ಗೆಲುವಿನ ಓಟಕ್ಕೆ ಬ್ರೇಕ್ ಬಿದ್ದಿದೆ. ಸೆಲೆಬ್ರಿಟಿ ಕ್ರಿಕೆಟ್ ಲೀಗ್‌ನ ಪಂದ್ಯದಲ್ಲಿ ಪಂಜಾಬ್, ಕರ್ನಾಟದ ಜಯದ ಕನಸಿಗೆ ಬೇಕ್ ಹಾಕಿದೆ. ಕೊನೆಯ ಓವರ್‌ನಲ್ಲಿ ಅಗತ್ಯವಿದ್ದ 9 ರನ್‌ಗಳನ್ನು ಡಿಫೆಂಡ್ ಮಾಡಿಕೊಳ್ಳುವಲ್ಲಿ ಪಂಜಾಬ್ ಸಫಲವಾಗಿದೆ. ಈ ಓವರ್‌ನಲ್ಲಿ ಬಿಗ್ ಹಿಟ್ ಬಾರಿಸುವಲ್ಲಿ ಕರ್ನಾಟಕ ವಿಫಲವಾಗಿದ್ದು, ಗೆಲ್ಲುವ ಪಂದ್ಯವನ್ನು ಕೈ ಚೆಲ್ಲಿದೆ. ಕರ್ನಾಟಕ ಲೀಗ್ ಹಂತದಲ್ಲಿ ಮೊದಲ ಸೋಲಿನ ರುಚಿ ಕಂಡಿದೆ. ಕೊನೆಯ ಓವರ್‌ನಲ್ಲಿ ಜೆಸ್ಸಿ ಗಿಲ್ ಅಮೋಘ ಬೌಲಿಂಗ್ ನಡೆಸಿ ಪಂಜಾಬ್ ಗೆಲುವಿನಲ್ಲಿ ಮಿಂಚಿದ್ದಾರೆ.
ಪಂಜಾಬ್ ದಿ ಶೇರ್ ಪರ ಬಾಬಲ್ ರೈ ಮೊದಲ ಬಾರಿ ಬ್ಯಾಟಿಂಗ್ ಮಾಡಿದಾಗ ಅಮೋಘ ಬ್ಯಾಟಿಂಗ್ ನಡೆಸಿದರು. ಇವರು 20 ಎಸೆತಗಳಲ್ಲಿ 4 ಬೌಂಡರಿ, 1 ಸಿಕ್ಸರ್ ನೆರವಿನಿಂದ 38 ರನ್ ಸಿಡಿಸಿತು. ರಾಹುಲ್ ಜೇಟ್ಲಿ 18, ನಿಜನ್ 17 ರನ್ ಸಿಡಿಸಿದರು. ಉಳಿದಂತೆ ನಾಯಕ ಅನುಜ್ ಖುರ್ನಾ 8 ಎಸೆತಗಳಲ್ಲಿ 4 ಬೌಂಡರಿ ನೆರವಿನಿಂದ 21 ರನ್ ಸಿಡಿಸಿದರು. ಅಂತಿಮವಾಗಿ ಪಂಜಾಬ್ 10 ಓವರ್‌ಗಳಲ್ಲಿ 8 ವಿಕೆಟ್‌ಗೆ 121 ರನ್ ಸೇರಿಸಿತು.

ಕರ್ನಾಟಕದ ಪರ ಕರಣ್ ಆರ್ಯನ್, ಚಂದನ್ ಕುಮಾರ್, ಗಣೇಶ್ ತಲಾ ಎರಡು ವಿಕೆಟ್ ಪಡೆದರು.
ಮೊದಲು ಬ್ಯಾಟ್ ಮಾಡಿದ ಕರ್ನಾಟಕ ಬುಲ್ಡೋಜರ್ಸ್ ತಂಡದ ಪರ ಚಂದನ್ ಕುಮಾರ್ ಹಾಗೂ ರಾಜೀವ್ ಹನು ಜೋಡಿ ಉತ್ತಮ ಜೊತೆಯಾಟದ ಕಾಣಿಕೆ ನೀಡಿತು. ಈ ಜೋಡಿ 6.2 ಓವರ್‌ಗಳಲ್ಲಿ 57 ರನ್ ಸೇರಿಸಿತು. ಕರ್ನಾಟಕದ ಪರ ರಾಜೀವ್ 26 ಎಸೆತಗಳಲ್ಲಿ 4 ಬೌಂಡರಿ, 2 ಸಿಕ್ಸರ್ ನೆರವಿನಿಂದ 40 ರನ್ ಸಿಡಿಸಿದರು. ಚಂದನ್ ಕುಮಾರ್ 18, ಕಾರ್ತಿಕ್ ಜಯರಾಮ್ 13, ಕೃಷ್ಣಾ 11 ರನ್ ಸೇರಿಸಿ ತಂಡಕ್ಕೆ ನೆರವಾದರು. ಪರಿಣಾಮ ಕರ್ನಾಕಟ 10 ಓವರ್‌ಗಳಲ್ಲಿ 3 ವಿಕೆಟ್‌ಗೆ 91 ರನ್ ಸಿಡಿಸಿತು.
ಎರಡನೇ ಬಾರಿ ಬ್ಯಾಟಿಂಗ್ ಮಾಡಿದ ಪಂಜಾಬ್ 10 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 94 ರನ್ ಸೇರಿಸಿತು.
ಗೆಲ್ಲುವ ಪಂದ್ಯ ಸೋತ ಕರ್ನಾಟಕ
124 ರನ್‌ಗಳ ಸವಾಲಿನ ಮೊತ್ತವನ್ನು ಹಿಂಬಾಲಿಸಿದ ಕರ್ನಾಟಕದ ಆರಂಭಿಕ ಡಾರ್ಲಿಂಗ್ ಕೃಷ್ಣಾ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಇವರು 26 ಎಸೆತಗಳಲ್ಲಿ 5 ಬೌಂಡರಿ, 1 ಸಿಕ್ಸರ್ ಸಹಾಯದಿಂದ 42 ರನ್ ಬಾರಿಸಿ ಮಿಂಚಿದರು. ಆರಂಭಿಕ ಮಂಜುನಾಥ್ ಗೌಡ್ 15, ರಾಜೀವ್ ಹನು 24, ಕರಣ್ ಆರ್ಯನ್ 13 ರನ್ ಬಾರಿಸಿ ತಂಡಕ್ಕೆ ಆಧಾರವಾದರು. ಆದರೆ ಇವರ ಸ್ಥಿರ ಬ್ಯಾಟಿಂಗ್ ನಿಂದಲೂ ಕರ್ನಾಟಕ ಬುಲ್ಡೋರ್ಜ್ ಗೆಲುವು ಸಾಧಿಸಲು ಸಾಧ್ಯವಾಗಲಿಲ್ಲ.
ಚೆನ್ನೈಗೆ ಜಯ
ಇದಕ್ಕೂ ಮೊದಲು ನಡೆದ ಪಂದ್ಯದಲ್ಲಿ ಚೆನ್ನೈ ರಿಹ್ನೋಸ್ ಅದ್ಭುತ ಜಯ ದಾಖಲಿಸಿದೆ. ಚೆನ್ನೈ ಜೋದಪುರಿ ದಬಾಂಗ್ಸ್ ತಂಡವನ್ನು ಮಣಿಸಿ ಅಬ್ಬರಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications