CEAT Cricket Award 2024: ವಿರಾಟ್ ಕೊಹ್ಲಿ ಹಿಂದಿಕ್ಕಿ ಪ್ರಶಸ್ತಿ ಪಡೆದ ರೋಹಿತ್ ಶರ್ಮಾ
ಮುಂಬೈನಲ್ಲಿ ನಡೆದ CEAT ಕ್ರಿಕೆಟ್ ಪ್ರಶಸ್ತಿ ಸಮಾರಂಭದಲ್ಲಿ ಟೀಮ್ ಇಂಡಿಯಾ ಆಟಗಾರರು ಮಿಂಚಿದ್ದಾರೆ. ವಿಶ್ವ ಕ್ರಿಕೆಟ್‌ನ ಸ್ಟಾರ್ ಆಟಗಾರರು ಕೂಡ ಭಾಗವಹಿಸಿ ಪ್ರಶಸ್ತಿಗಳ್ನು ಸ್ವೀಕರಿಸಿದ್ದಾರೆ. 2023ರ ಋತುವಿನಲ್ಲಿ ಅದ್ಭುತ ಪ್ರದರ್ಶನ ನೀಡಿದ ಆಟಗಾರರಿಗೆ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.
ವರ್ಷದ ಅಂತಾರಾಷ್ಟ್ರೀಯ ಕ್ರಿಕೆಟಿಗ
ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರು 'ವರ್ಷದ ಅಂತಾರಾಷ್ಟ್ರೀಯ ಕ್ರಿಕೆಟಿಗ' ಪ್ರಶಸ್ತಿಯನ್ನು ಪಡೆದಿದ್ದಾರೆ. ಅತ್ಯುತ್ತಮ ನಾಯಕತ್ವ ಮತ್ತು ಪ್ರದರ್ಶನಕ್ಕಾಗಿ ಅವರಿಗೆ ಈ ಪ್ರಶಸ್ತಿ ಲಭಿಸಿದೆ. ಈ ವೇಳೆ ಮಾತನಾಡಿರುವ ಹಿಟ್‌ಮ್ಯಾನ್ ಪ್ರಶ್ತ ಸಿಕ್ಕಿರುವುದು ಬಹಳ ಸಂತಸ ತಂದಿದೆ ಎಂದಿದ್ದಾರೆ.

ಜೀವಮಾನ ಸಾಧನೆ ಪ್ರಶಸ್ತಿ
ಟೀಮ್ ಇಂಡಿಯಾ ಮಾಜಿ ಹೆಡ್ ಕೋಚ್ ರಾಹುಲ್ ದ್ರಾವಿಡ್ ಅವರಿಗೆ ಪ್ರತಿಷ್ಠಿತ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಅವರು ಇತ್ತೀಚೆಗೆ ಬಾರ್ಬಡೋಸ್‌ನಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡವನ್ನು ಚಾಂಪಿಯನ್ ಮಾಡುವ ಮೂಲಕ ಐಸಿಸಿ ಟ್ರೋಫಿಯ ಬರವನ್ನು ಕೊನೆಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ವರ್ಷದ ಏಕದಿನ ಬ್ಯಾಟರ್
ಸತತವಾಗ ಏಕದಿನ ಕ್ರಿಕೆಟ್‌ನಲ್ಲಿ ಅಮೋಘ ಪ್ರದರ್ಶನ ನೀಡಿದ ಟೀಮ್ ಇಂಡಿಯಾ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಅವರಿಗೆ 'ವರ್ಷದ ಏಕದಿನ ಬ್ಯಾಟರ್' ಪ್ರಶಸ್ತಿ ದೊರೆತಿದೆ. 2023ರ ಋತುವಿನಲ್ಲಿ ಅವರ ಗಮನಾರ್ಹ ಫಾರ್ಮ್ ಈ ಪ್ರಶಸ್ತಿ ಸಿಗುವಂತೆ ಮಾಡಿದೆ. ಕಳೆದ ವರ್ಷ 6 ಶತಕಗಳು ಮತ್ತು 8 ಅರ್ಧಶತಕಗಳನ್ನು ಒಳಗೊಂಡಂತೆ 1,377 ರನ್ ಗಳಿಸಿದ್ದರು. 2023ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಅವರು ಅಬ್ಬರಿಸಿದ್ದರು.
ವರ್ಷದ ಅತ್ಯುತ್ತಮ ಏಕದಿನ ಬೌಲರ್
2023ರ ಏಕದಿನ ವಿಶ್ವಕಪ್‌ನಲ್ಲಿ ಬೆಂಕಿ ಬೌಲಿಂಗ್ ಪ್ರದರ್ಶನ ನೀಡಿದ ಮೊಹಮ್ಮದ್ ಶಮಿ ಅವರಿಗೆ ವರ್ಷದ ಅತ್ಯುತ್ತಮ ಏಕದಿನ ಬೌಲರ್ ಪ್ರಶಸ್ತಿ ಸಿಕ್ಕಿದೆ. ಶಮಿ ಅವರ ಅಸಾಧಾರಣ ಬೌಲಿಂಗ್ ಕೌಶಲ್ಯಗಳು ಟೀಮ್ ಇಂಡಿಯಾದ ಯಶಸ್ಸಿನಲ್ಲಿ ಪ್ರಮುಖ ಪಾತ್ರವಹಿಸಿವೆ. ಏಕೆಂದರೆ ಅವರು ವಿಶ್ವಕಪ್ ಟೂರ್ನಿಯುದ್ದಕ್ಕೂ ತಂಡದ ಗೆಲುವಿಗೆ ಅತ್ಯುತ್ತಮ ಪ್ರದರ್ಶನಗಳನ್ನು ನೀಡಿದ್ದರು.
ಪ್ರಶಸ್ತಿ ವಿಜೇತರ ಸಂಪೂರ್ಣ ಪಟ್ಟಿ
1) ಜೀವಮಾನ ಸಾಧನೆ ಪ್ರಶಸ್ತಿ: ರಾಹುಲ್ ದ್ರಾವಿಡ್
2) ವರ್ಷದ ಪುರುಷರ ಅಂತಾರಾಷ್ಟ್ರೀಯ ಕ್ರಿಕೆಟಿಗ: ರೋಹಿತ್ ಶರ್ಮಾ
3) ವರ್ಷದ ಪುರುಷರ ಏಕದಿನ ಬ್ಯಾಟರ್: ವಿರಾಟ್ ಕೊಹ್ಲಿ
4) ವರ್ಷದ ಪುರುಷರ ಏಕದಿನ ಬೌಲರ್: ಮೊಹಮ್ಮದ್ ಶಮಿ
5) ವರ್ಷದ ಪುರುಷರ ಟೆಸ್ಟ್ ಬ್ಯಾಟರ್: ಯಶಸ್ವಿ ಜೈಸ್ವಾಲ್
6) ವರ್ಷದ ಪುರುಷರ ಟೆಸ್ಟ್ ಬೌಲರ್: ರವಿಚಂದ್ರನ್ ಅಶ್ವಿನ್
7) ವರ್ಷದ ಪುರುಷರ ಟಿ20 ಬ್ಯಾಟರ್: ಫಿಲಿಪ್ ಸಾಲ್ಟ್ (ಇಂಗ್ಲೆಂಡ್)
8) ವರ್ಷದ ಪುರುಷರ ಟಿ20 ಬೌಲರ್: ಟಿಮ್ ಸೌಥಿ (ನ್ಯೂಜಿಲೆಂಡ್)
9) ವಷದ ದೇಶೀಯ ಕ್ರಿಕೆಟ್ ಆಟಗಾರ: ಸಾಯಿ ಕಿಶೋರ್ (ತಮಿಳುನಾಡು)
10) ವರ್ಷದ ಮಹಿಳಾ ಭಾರತೀಯ ಬ್ಯಾಟರ್: ಸ್ಮೃತಿ ಮಂಧಾನ
11) ವರ್ಷದ ಮಹಿಳಾ ಭಾರತೀಯ ಬೌಲರ್: ದೀಪ್ತಿ ಶರ್ಮಾ
12) ಮಹಿಳಾ ಟಿ20 ಇತಿಹಾಸದಲ್ಲಿ ನಾಯಕಿಯಾಗಿ ಹೆಚ್ಚಿನ ಪಂದ್ಯಗಳು: ಹರ್ಮನ್ಪ್ರೀತ್ ಕೌರ್
13) ಐಪಿಎಲ್ 2024ರ ಅತ್ಯುತ್ತಮ ನಾಯಕ: ಶ್ರೇಯಸ್ ಅಯ್ಯರ್ (ಕೋಲ್ಕತ್ತಾ ನೈಟ್ ರೈಡರ್ಸ್)
14) ಮಹಿಳಾ ಟೆಸ್ಟ್‌ನಲ್ಲಿ ವೇಗದ ದ್ವಿಶತಕ: ಶಫಾಲಿ ವರ್ಮಾ
15) ಕ್ರೀಡಾ ಆಡಳಿತದಲ್ಲಿ ಶ್ರೇಷ್ಠತೆಗಾಗಿ ಪ್ರಶಸ್ತಿ: ಜಯ್ ಶಾ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications