Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಅಯ್ಯೋ ಪಾಪ ಧೋನಿ! ಸ್ವೀಟಿ ಕ್ಯೂಟಿ ಎನ್ನುತ್ತಾ ಏನಿದು ಗೋಳು!!: ವೀಡಿಯೋ

Celebs Love How Sakshi Made Her Hubby Dhoni Blush

ಟೀಮ್ ಇಂಡಿಯಾ ಮಾಜಿ ನಾಯಕ ಎಮ್.ಎಸ್ ಧೋನಿ ಕ್ರಿಕೆಟ್ ಭವಿಷ್ಯದ ಬಗ್ಗೆ ಸಾಕಷ್ಟು ಚರ್ಚೆಗಳು ನಾನಾ ರೀತಿಯಾಗಿ ನಡೆಯುತ್ತಲೇ ಇದೆ. ಆದರೆ ಇದ್ಯಾವುದಕ್ಕೂ ಧೋನಿ ಯಾವುದೇ ರೀತಿಯಲ್ಲೂ ತಲೆಯನ್ನೇ ಕೆಡಿಸಿಕೊಂಡಿಲ್ಲ. ತಮ್ಮ ಕುಟುಂಬ ಮತ್ತು ಸ್ನೇಹಿತರ ಜೊತೆಗೆ ಮಾಹಿ ಕಾಲ ಕಳೆಯುತ್ತಿದ್ದಾರೆ.

ಧೋನಿ ಟೀಮ್ ಇಂಡಿಯಾದಲ್ಲಿ ಕಾಣಿಸಿಕೊಳ್ಳದಿದ್ದರೂ ಪದೇ ಪದೆ ಸುದ್ದಿಯಾಗುತ್ತಲೇ ಇದ್ದಾರೆ. ಇಂದು ಧೋನಿ ಪತ್ನಿ ಸಾಕ್ಷಿ ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿದ ವೀಡಿಯೋವೊಂದು ಅಭಿಮಾನಿಗಳಿಗೆ ಮುದ ನೀಡಿದೆ. ವೀಡಿಯೋ ಪೂರ್ತಿ ಧೋನಿಗೆ ಸಾಕ್ಷಿ ಗೋಳು ನೀಡಿ ಕಾಲೆಳೆದಿದ್ದಾರೆ.

ದೆಹಲಿಗೆ ತೆರಳಿರುವ ಸಾಕ್ಷಿ ಮತ್ತು ಧೋನಿ ಅಲ್ಲಿ ಸಮಯವನ್ನು ಕಳೆದಿದ್ದಾರೆ. ಈ ಸಂದರ್ಭದಲ್ಲಿ ಮಾಡಿದ ವೀಡಿಯೋವೊಂದನ್ನು ಸಾಕ್ಷಿ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವೀಡಿಯೋವನ್ನು ಅಭಿಮಾನಿಗಳು ಆನಂದಿಸುತ್ತಿದ್ದಾರೆ.

View this post on Instagram

#sweetieoftheday 🤣🤣🤣🤣🤗

A post shared by Sakshi Singh Dhoni (@sakshisingh_r) on

ಸ್ವೀಟಿ ಸ್ವೀಟಿ ಎಂದು ಗೋಳು:

ಸ್ವೀಟಿ ಸ್ವೀಟಿ ಎಂದು ಗೋಳು:

ನವದೆಹಲಿಯ ಪಂಚತಾರಾ ಹೋಟೆಲ್‌ ತಾಜ್ ಪ್ಯಾಲೆಸ್‌ಗೆ ಧೋನಿ ಮತ್ತು ಸಾಕ್ಷಿ ಭೇಟಿ ನೀಡಿದ್ದರು. ಈ ವೇಳೆ ಧೋನಿ ವೀಡಿಯೋ ರೆಕಾರ್ಡ್‌ ಮಾಡುತ್ತಾ ಪತ್ನಿ ಸಾಕ್ಷಿ ಸ್ವೀಟಿ ಸ್ವೀಟಿ ಎಂದು ಕರೆಯಲು ಶುರು ಮಾಡುತ್ತಾರೆ. ಆದರೆ ಇದು ರೆಕಾರ್ಡ್ ಆಗುತ್ತಿದೆ ಎಂದು ಅರಿತ ಧೋನಿ ಸಾಕ್ಷಿಗೆ ಯಾವುದೇ ರೀತಿಯನ್ನೂ ಸ್ಪಂದಿಸುವುದೇ ಇಲ್ಲ.

ಬೆಂಬಿಡದ ಸಾಕ್ಷಿ:

ಬೆಂಬಿಡದ ಸಾಕ್ಷಿ:

ಸಾಕ್ಷಿ ಮಾಹಿಯನ್ನು ಗೋಳು ಹೊಯ್ದುಕೊಳ್ಳುತ್ತಿದ್ದರೂ ಕೂಡ ಮಾಹಿ ಸ್ಪಂದಿಸದ ಕಾರಣ ಅಲ್ಲೇ ಇದ್ದ ಹೋಟೆಲ್ ಸಿಬ್ಬಂದಿಯನ್ನೂ ಸಾಕ್ಷಿ ಬಿಡಲಿಲ್ಲ. ಮಾಹಿ ಕ್ಯೂಟ್ ಅಲ್ವಾ ಎಂದು ಆ ಸಿಬ್ಬಂದಿಯನ್ನು ಪ್ರಶ್ನೆ ಮಾಡಲು ಆರಂಭಿಸಿದರು. ಸಾಕ್ಷಿಯ ಪ್ರಶ್ನೆಗೆ ಏನು ಹೇಳಬೇಕೆಂದು ತೋಚದ ಸಿಬ್ಬಂದು ನಗುತ್ತಲೇ ಹೌದು ಎನ್ನುವಂತೆ ಉತ್ತರಿಸಿದರು.

ಸಾಕ್ಷಿ ಗೋಳಿಗೆ ನಾಚಿ ನೀರಾದ ಧೋನಿ:

ಸಾಕ್ಷಿ ಗೋಳಿಗೆ ನಾಚಿ ನೀರಾದ ಧೋನಿ:

ಸಾಕ್ಷಿ ಕಾಲೆಳೆಯುತ್ತಿದ್ದ ರೀತಿಗೆ ಮಾಹಿ ನಾಚಿ ಮುಗುಳುನಗೆಯನ್ನಷ್ಟೇ ಬೀರಿದರು. ಅದಕ್ಕೂ ಕಾಲೆಳೆದ ಸಾಕ್ಷಿಗೆ ಧೋನಿ ತಮಾಷೆಯಾಗಿ 'ಆಚೆ ಹೋಗಿ ಏನಾದ್ರು ಮಾಡು' ಎಂದು ಉತ್ತರವನ್ನು ನೀಡಿದ್ದಾರೆ. ಒಟ್ಟಾರೆ ಸಾಕ್ಷಿಯ ಗೋಳಿಗೆ ಧೋನಿ ಸುಸ್ತಾಗಿದ್ದಂತು ಸತ್ಯ.

ಕುಟುಂಬಕ್ಕೆ ಸಂಪೂರ್ಣ ಸಮಯ ಮೀಸಲಿಟ್ಟ ಧೋನಿ:

ಕುಟುಂಬಕ್ಕೆ ಸಂಪೂರ್ಣ ಸಮಯ ಮೀಸಲಿಟ್ಟ ಧೋನಿ:

ಕಳೆದ ಏಕದಿನ ವಿಶ್ವಕಪ್ ಬಳಿಕ ಧೋನಿ ಟೀಮ್ ಇಂಡಿಯಾದಲ್ಲಿ ಕಾಣಿಸಿಕೊಂಡೇ ಇಲ್ಲ. ಸೇನಾ ಕ್ಯಾಂಪ್‌ನಲ್ಲಿ ಒಂದಷ್ಟು ಸಮಯ ಕಳೆದ ಧೋನಿ ಬಳಿಕ ಸಂಪೂರ್ಣವಾಗಿ ಕುಟುಂಬಕ್ಕೆ ಸಮಯವನ್ನು ಮೀಸಲಿಟ್ಟಿದ್ದಾರೆ.

Story first published: Tuesday, January 28, 2020, 18:13 [IST]
Other articles published on Jan 28, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+